Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಬೀಜಾಡಿ: ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಟ್ರ್ಯಾಕ್ಸ್ ಸೂಟ್ ಹಾಗೂ ಟೀ ಶರ್ಟ್ ವಿತರಣೆ
    ಊರ್ಮನೆ ಸಮಾಚಾರ

    ಬೀಜಾಡಿ: ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಟ್ರ್ಯಾಕ್ಸ್ ಸೂಟ್ ಹಾಗೂ ಟೀ ಶರ್ಟ್ ವಿತರಣೆ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕುಂದಾಪುರ:
    ಸರಕಾರಿ ಶಾಲೆ ಉಳಿಯಬೇಕಾದರೆ ಸಮುದಾಯದ ಪಾತ್ರ ಅತಿ ಮಹತ್ವದ್ದು. ಸಮುದಾಯದಿಂದ ಸರಕಾರಿ ಶಾಲೆಗಳಿಗೆ ಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳುವುದು ಮತ್ತು ಅವುಗಳನ್ನು ಉಚಿತ ರೀತಿಯಲ್ಲಿ ಬಳಸಿಕೊಳ್ಳುವುದು ಸರಕಾರಿ ಶಾಲೆಯ ಬೆಳವಣಿಗೆಗೆ ಪೂರಕ. ವರ್ಷದಿಂದ ವರ್ಷಕ್ಕೆ ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಪೂರಕ ಸೌಲಭ್ಯಗಳು ಆಗಬೇಕಾಗಿದೆ  ಎಂದು ಗೀತಾ ಎಚ್. ಎಸ್. ಎನ್. ಫೌಂಡೇಶನ್  ಅಧ್ಯಕ್ಷರಾದ ಶಂಕರ ಐತಾಳ್ ಅವರು ಅಭಿಪ್ರಾಯಪಟ್ಟರು.

    Click Here

    Call us

    Click Here

    ಅವರು ಸರಕಾರಿ ಬೀಜಾಡಿ ಪ್ರೌಢ ಶಾಲೆಯಲ್ಲಿ ನಡೆದ  ಸಮಾರಂಭದಲ್ಲಿ ಗೀತಾ ಎಚ್. ಎಸ್. ಎನ್. ಫೌಂಡೇಶನ್ ನ ಮೂಲಕ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಟ್ರ್ಯಾಕ್ಸ್ ಸೂಟ್ ಹಾಗೂ ಟೀ ಶರ್ಟ್ ಗಳನ್ನು ವಿತರಿಸಿ ಮಾತನಾಡಿದರು.

    ಗ್ರಾಮ ಪಂಚಾಯಿತಿ ಅಧ್ಯಕ್ಷರಾದ  ಪ್ರಕಾಶ್ ಪೂಜಾರಿ ಅವರು ಸರಕಾರಿ ಶಾಲೆಗಳಲ್ಲಿ ಉಚಿತವಾಗಿ ನೀಡಲಾಗುವ  ಶೂ ಮತ್ತು ಎರಡು ಜೊತೆ ಸಾಕ್ಸ್ ಗಳನ್ನು ವಿತರಿಸಿ, ವಿದ್ಯಾರ್ಥಿಗಳು ಸರಕಾರಿ ಶಾಲೆಗಳಲ್ಲಿ ಸಿಗುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಕ್ರಮ ಪ್ರಕಾರ ಬಳಸಿಕೊಂಡು ತಮ್ಮ ಜೀವನ ಮಟ್ಟ ಹಾಗೂ ಶಿಕ್ಷಣವನ್ನು ಉತ್ತಮಗೊಳಿಸಿಕೊಳ್ಳಬೇಕು. ಶಾಲೆಗೆ ಅತಿ ತುರ್ತಾಗಿ ಸಭಾಂಗಣದ ಅಗತ್ಯವಿದ್ದು ಅದನ್ನು ನಿರ್ಮಿಸಲು  ಸಹಕಾರ ನೀಡುವುದಾಗಿ ಭರವಸೆ ನೀಡಿದರು. ನಂತರ ಮಾತನಾಡಿದ ಊರಿನ ಹಿರಿಯರು, ಗಣ್ಯರು ಈ ಶಾಲೆಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದ ಶೇಷಗಿರಿ ಗೋಟ ಅವರು ಶಾಲೆಯ ಅಭಿವೃದ್ಧಿಗಾಗಿ ಹಿತ ರಕ್ಷಣಾ ಸಮಿತಿಯನ್ನು ರಚಿಸಲಾಗಿದ್ದು ಆ ಸಮಿತಿಯ ಮೂಲಕ ಹಾಗೂ ಬಲಿಷ್ಠವಾದ ಹಳೆ ವಿದ್ಯಾರ್ಥಿ ಸಂಘ ರಚನೆ ಮಾಡುವುದರ ಮೂಲಕ ಶಾಲೆಗೆ ಅಗತ್ಯವಾದ ಸೌಲಭ್ಯಗಳನ್ನು ದಾನಿಗಳ ಮೂಲಕ ಪಡೆದು ಶಾಲೆಯ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗಬೇಕೆಂದು ಹೇಳಿದರು.

    ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷರಾದ ಶೇಖರ ಚಾತ್ರಭೆಟ್ಟು, ಖಜಾಂಚಿ ಬಾಬಣ್ಣ ಪೂಜಾರಿ, ಎಸ್. ಡಿ. ಎಂ. ಸಿ. ಅಧ್ಯಕ್ಷರಾದ ಲಕ್ಷ್ಮಣ ನಾಯ್ಕ್ , ಗೀತಾ ಎಚ್. ಎಸ್. ಎನ್. ಫೌಂಡೇಶನ್ ನ ಗೌರವ ಸಲಹೆಗಾರರಾದ ಪ್ರಭಾಕರ ಐತಾಳ್ ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮಣೇಶ್ ಶಾಲೆಯ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

    ಮುಖ್ಯ ಶಿಕ್ಷಕರಾದ ವಿನೋದ ಎಂ. ಅವರು ಅತಿಥಿಗಳನ್ನು ಹಾಗೂ ಪೋಷಕರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನು ಆಡಿದರು.

    Click here

    Click here

    Click here

    Click Here

    Call us

    Call us

    ಶಿಕ್ಷಕರಾದ ನಟರಾಜ್ ಅವರು ಧನ್ಯವಾದ ಅರ್ಪಿಸಿದರು. ಬೈಂದೂರು ಶಿಕ್ಷಕರಾದ ಡಾ. ಸದಾನಂದ ಈ ಕೊಡುಗೆಗಳ ಹಸ್ತಾಂತರ ಕಾರ್ಯಕ್ರಮ ನಿರೂಪಿಸಿದರು.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಅಂಪಾರು ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆ: ಗಾಂಧಾರಿ ವಿದ್ಯೆ ತರಬೇತಿ ಶಿಬಿರ

    23/05/2026

    ಗಿಳಿಯಾರು ಯುವಕ ಮಂಡಲ ದಶಮಾನೋತ್ಸವ ಸಂಭ್ರಮ

    23/05/2026

    ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯ- ಸಹಸ್ರ ಪ್ರದಕ್ಷಿಣ ನಮಸ್ಕಾರಕ್ಕೆ ಚಾಲನೆ

    23/05/2026
    Leave A Reply Cancel Reply

    17 + 15 =

    Call us

    Click Here

    Call us

    Call us

    Call us
    Highest Viewed Recently
    • ಅಂಪಾರು ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆ: ಗಾಂಧಾರಿ ವಿದ್ಯೆ ತರಬೇತಿ ಶಿಬಿರ
    • ಗಿಳಿಯಾರು ಯುವಕ ಮಂಡಲ ದಶಮಾನೋತ್ಸವ ಸಂಭ್ರಮ
    • ಮಂಗಳೂರು ವಿ.ವಿ ಅಂತರ್ ಕಾಲೇಜು ಮಹಿಳಾ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಆಳ್ವಾಸ್ ಚಾಂಪಿಯನ್‌
    • ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯ- ಸಹಸ್ರ ಪ್ರದಕ್ಷಿಣ ನಮಸ್ಕಾರಕ್ಕೆ ಚಾಲನೆ
    • ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ವೃತ್ತಿಪರ ಕೋರ್ಸ್ ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್ ಕಾರ್ಯಕ್ರಮ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.