ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ನವೆಂಬರ್ 08 ರಿಂದ 10ರವರೆಗೆ ನಡೆದ ಶಾಲಾ ಶಿಕ್ಷಣ ಇಲಾಖೆ, ಕೋಲಾರ ಜಿಲ್ಲೆ, ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಕೋಲಾರ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ 17 ವರ್ಷ ವಯೋಮಿತಿಯ ಪ್ರೌಢಶಾಲಾ ಬಾಲಕ ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಆಳ್ವಾಸ್ ಶಾಲೆಯ ಕ್ರೀಡಾಪಟುಗಳು ಒಟ್ಟು 14 ಚಿನ್ನ, 08 ಬೆಳ್ಳಿ ಮತ್ತು 05 ಕಂಚಿನ ಪದಕಗಳೊಂದಿಗೆ 27 ಪದಕ ಪಡೆದುಕೊಂಡಿದೆ.
ಅದರಲ್ಲಿ ನಾಗಿಣಿ 800ಮೀ, 1500ಮೀ ನಲ್ಲಿ ನೂತನ ದಾಖಲೆ, ಜಾಸ್ಮಿನ ಹ್ಯಾಮರ್ ತ್ರೋನಲ್ಲಿ ಕ್ರೀಡಾಕೂಟದ ನೂತನ ಕೂಟ ದಾಖಲೆಯೊಂದಿಗೆ 17 ವರ್ಷ ವಯೋಮಿತಿಯ ಬಾಲಕ ಬಾಲಕಿಯರ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.
ಪ್ರೌಢ ಶಾಲಾ 17 ವರ್ಷ ವಯೋಮಿತಿಯ ಬಾಲಕಿಯರ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ:
ಬಾಲಕಿಯರ ವಿಭಾಗ: ನಾಗಿಣಿ – 10 ಅಂಕ
ಫಲಿತಾಂಶ:
ಪ್ರೌಢ ಶಾಲಾ 17 ವರ್ಷ ವಯೋಮಿತಿಯ ಬಾಲಕ ಮತ್ತು ಬಾಲಕಿಯರ ಫಲಿತಾಂಶ :
ಇಶಾನಿ ಅರುಣ್- ಚಕ್ರ ಎಸೆತ (ದ್ವಿತೀಯ), ಚಸ್ಮಿತಾ- ಚಕ್ರ ಎಸೆತ (ತೃತೀಯ), ನಾಗಿಣಿ– 800ಮೀ (ಪ್ರಥಮ), 1500ಮೀ (ಪ್ರಥಮ), ಕಿರಣ– 1500ಮೀ (ದ್ವಿತೀಯ), ಪ್ರಿಯಾಂಕ– 800ಮೀ (ದ್ವಿತೀಯ), 3000ಮೀ (ದ್ವಿತೀಯ), ಜಾಸ್ಮಿನ್- ಹ್ಯಾಮರ್ ತ್ರೋ (ಪ್ರಥಮ), ಸ್ಪೂರ್ತಿ- ಹ್ಯಾಮರ್ ತ್ರೋ (ತೃತೀಯ), ಗೋಪಿಕಾ– 100ಮೀ (ಪ್ರಥಮ), 4×100ಮೀ ರಿಲೇ (ಪ್ರಥಮ), ಪ್ರೀತಿ- 400ಮೀ ಹರ್ಡಲ್ಸ್ (ಪ್ರಥಮ), ವರ್ಷಾ- 400ಮೀ ಹರ್ಡಲ್ಸ್ (ತೃತೀಯ), ಚಿನ್ಮಯಿ -4×100ಮೀ ರಿಲೇ (ಪ್ರಥಮ), ಸಹನಾ -4×100ಮೀ ರಿಲೇ (ಪ್ರಥಮ), ನಯೋನಿಕ -4×100ಮೀ ರಿಲೇ (ಪ್ರಥಮ), ಗೌತಮ್ ರೈ – 110ಮೀ ಹರ್ಡಲ್ಸ್ (ದ್ವಿತೀಯ), 4×100ಮೀ ರಿಲೇ (ಪ್ರಥಮ), ಧನುಷ್‌ಚಂದ್ರ- ಚಕ್ರ ಎಸೆತ (ತೃತೀಯ), ಗುಂಡು ಎಸೆತ- (ದ್ವಿತೀಯ), ಸಮರ್ಥ್– 800ಮೀ (ದ್ವಿತೀಯ), ಪೃಥ್ವಿಕ್– ತ್ರಿವಿಧ ಜಿಗಿತ (ತೃತೀಯ), ಸಾಹಿಲ್–100ಮೀ (ದ್ವಿತೀಯ), 4×100ಮೀ ರಿಲೇ (ಪ್ರಥಮ), ಆಕಾಶ್– 400ಮೀ ಹರ್ಡಲ್ಸ್ (ಪ್ರಥಮ), 4×100ಮೀ ರಿಲೇ (ಪ್ರಥಮ), ರಿನೀಶ್- 4×100ಮೀ ರಿಲೇ (ಪ್ರಥಮ) ನವೆಂಬರ್ ತಿಂಗಳಿನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಒಂದೇ ಶಾಲೆಯಿಂದ 16 ಕ್ರೀಡಾಪಟುಗಳು ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರವಾಗಿದೆ.
ವಿಜೇತ ಕ್ರೀಡಾಪಟುಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.










