ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾನಿಲಯ ಮೈಸೂರು ನಡೆಸಿದ ಭರತನಾಟ್ಯ ಜೂನಿಯರ್‌ಗ್ರೇಡ್ ಪರೀಕ್ಷೆಯಲ್ಲಿ ಮೇಘನಾ ಪ್ರಭು ಕೊಕ್ಕರ್ಣೆ ಅವರು 93.75% ಅಂಕದೊಂದಿಗೆ ಉತ್ತೀರ್ಣರಾಗಿದ್ದಾರೆ.
ಈಕೆ ಉಡುಪಿಯ ರಾಧಾಕೃಷ್ಣ ನೃತ್ಯನಿಕೇತನದ ಗುರು ಹಾಗೂ ನೃತ್ಯ ವಿದುಷಿ ವೀಣಾಮುರಳೀಧರ ಸಾಮುಗ ಇವರ ಶಿಷ್ಯೆ. ಅವರು ಕೊಕ್ಕರ್ಣೆ ದೀಪಕ್ ಪ್ರಭು ಮತ್ತು ಗಾಯತ್ರಿ ಡಿ .ಪ್ರಭು ದಂಪತಿಗಳ ಮಗಳಾಗಿದ್ದು ಬ್ರಹ್ಮಾವರ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್‌ನಲ್ಲಿ ಎಂಟನೆಯ ತರಗತಿಯಲ್ಲಿ ಶಿಕ್ಷಣಪಡೆಯುತ್ತಿದ್ದು, ಯಕ್ಷಗಾನ, ಭಜನೆಗಳಲ್ಲಿ ಹಾರ್ಮೋನಿಯಂ, ತಬಲಗಳನ್ನು ನುಡಿಸುತ್ತಾರೆ.










