ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಪ್ರತಿಷ್ಠಿತ ಶ್ರೀರಾಮ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ನಾಗರಾಜ್ ಕಾಮಧೇನು ನೇತೃತ್ವದ ತಂಡಕ್ಕೆ ಅಭೂತಪರ್ವ ಗೆಲುವು ಲಭಿಸಿದೆ.

ಸಾಮನ್ಯ ವರ್ಗದಲ್ಲಿ ಕೆ. ನಾಗರಾಜ ರಾವ್ ಕಾಮಧೇನು , ಅಜೇಯ ಹವಾಲ್ದಾರ್, ಬಿ. ಶ್ರೀಧರ, ಸತೀಶ ನರಸಿಂಹ ಶೇರೆಗಾರ, ಕೆ. ಅಶೋಕ ಬೆಟ್ಟಿನ್, ಎಂ.ಜಿ. ರಾಜೇಶ್, ಶ್ರೀದರ ಪಿ.ಎಸ್. ಕೆ. ಸೂರ್ಯಕಾಂತ, ಕೃಷ್ಣಯ್ಯ ವಿ. ಮದ್ದೋಡಿ, ಹಿಂದುಳಿದ ವರ್ಗ ʼಎ’ಸ್ಥಾನದಿಂದ ಬಿ. ರಾಧಕೃಷ್ಣ ನಾಯಕ್, ಆಯ್ಕೆಯಾದರು. ಮಹಿಳಾ ಮೀಸಲು ಸ್ಥಾನದಿಂದ ರಶ್ಮಿ ಪುಷ್ಪರಾಜ್, ಶಾರದ ವಿಜಯ್, ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಆಡಳಿತ ಮಂಡಳಿಯ ಒಟ್ಟು 10 ಸ್ಥಾನಗಳಿಗೆ ಚುನಾವಣೆ ನಡೆದಿದ್ದು 2 ಮಹಿಳಾ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿತ್ತು. ಸಹಕಾರ ಸಂಘಗಳ ಸಹಾಯಕಿ ನಿಬಂಧಕಿ ಸುಕನ್ಯಾ ಚುನಾವಣೆ ನಡೆಸಿ ಕೊಟ್ಟರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.














