ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸರಕಾರಿ ಐಟಿಐ ಬಿದ್ಕಲ್ ಕಟ್ಟೆ ಕುಂದಾಪುರ, ಟೋಯೋಟಾ ಕಿರ್ಲೋ ಸ್ಕರ್ ಸಂಸ್ಥೆ ಮತ್ತು ಕೋಟ ಪೋಲಿಸ್ ಅವರ ಸಹಯೋಗದೊಂದಿಗೆ ಕೈಗಾರಿಕೆ ಹಾಗೂ ರಸ್ತೆ ಸುರಕ್ಷತೆ ಬಗ್ಗೆ ಮಾಹಿತಿ ಜಾಥಾವನ್ನು ನಡೆಸಲಾಯಿತು.
ಪ್ರಾಚಾರ್ಯ ಗಂಗಾಧರಪ್ಪ ನಿರ್ದೇಶನದಂತೆ ಕಾರ್ಯಕ್ರಮ ಆಯೋಜಿಸಲಾಯಿತು. ತರಬೇತಿ ಅಧಿಕಾರಿ ಸತೀಶ ಎಸ್. ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕೋಟ ಪೋಲಿಸ್ ಠಾಣೆಯ ಎಎಸ್‌ಐ ಗೋಪಾಲ ಪೂಜಾರಿ, ಟೋಯೋಟಾ ಸಂಸ್ಥೆಯ ಭಾಸ್ಕರ್ ಪೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಂಸ್ಥೆಯ ಸಿಬ್ಬಂದಿ ಯಶಸ್ವಿಯಾಗಿ ಕಾರ್ಯಕ್ರಮ ಸಂಯೋಜಿಸಿದ್ದರು. ಈ ಸಂದರ್ಭದಲ್ಲಿ ತರಬೇತಿದಾರರಿಗೆ ಹಾಗೂ ಸಾರ್ವಜನಿಕರಿಗೆ ಸುರಕ್ಷ ನಿಯಮಗಳ ಮಾಹಿತಿ ನೀಡಲಾಯಿತು.










