ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪ್ರತಿಭೆ ನಿಮ್ಮದು ವೇದಿಕೆ ನಮ್ಮದು 2025ರ ಕಾರ್ಯಕ್ರಮದಡಿ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ಸತತ 107ನೇ ತಿಂಗಳ ಕಾರ್ಯಕ್ರಮ ಇತ್ತೀಚಿಗೆ ವಸಂತಿ ಆರ್. ಪಂಡಿತ್ ಮತ್ತು ದೇವಕಿ ಸುರೇಶ್ ಪ್ರಭು ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು.
ವೇದಿಕೆಯಲ್ಲಿ ಅಧ್ಯಕ್ಷರಾಗಿ ಗೊಂಬೆಯಾಟ ಪ್ರೋತ್ಸಾಹಕರಾದ ರಾಧಾಕೃಷ್ಣ ಪ್ರಭು, ಮುಖ್ಯ ಅತಿಥಿಗಳಾಗಿ ಉಡುಪಿ ಯಕ್ಷಗಾನ ಕೇಂದ್ರದ ಗುರು ಹಾಗೂ ಉಪ್ಪಿನಕುದ್ರು ಗೊಂಬೆಯಾಟ ಮಂಡಳಿಯ ಭಾಗವತರಾದ ಉಮೇಶ್ ಸುವರ್ಣ, ರಮೇಶ್ ಕಾಮತ್, ವಿ. ಶ್ರೀನಿವಾಸ ಪೈ, ಆಡಿಟರ್ ವಾಸುದೇವ ಶ್ಯಾನುಭಾಗ್ ಹಾಗೂ ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ಅವರು ಉಪಸ್ಥಿತರಿದ್ದರು.
2024-25ರ ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯಕ್ಕೆ ಮೂರನೇ ರ‍್ಯಾಂಕ್ ಪಡೆದ ವಿದ್ಯಾರ್ಥಿನಿ ಹಾಗೂ ಕಲಾವಿದೆ ಆಕಾಂಕ್ಷಾ ಎಸ್. ಪೈ ಅವರನ್ನು ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು.
ಕೊನೆಯಲ್ಲಿ ಆಕಾಂಕ್ಷಾ ಎಸ್, ಪೈ ಹಾಗೂ ಅವನಿ ಶ್ಯಾನುಭಾಗ್ ಅವರು ನಡೆಸಿಕೊಟ್ಟ ಸುಗಮ ಸಂಗೀತ ಎಲ್ಲರ ಮನ ರಂಜಿಸಿತು. ರಾಜೇಂದ್ರ ಪೈ, ಉಪ್ಪಿನಕುದ್ರು ಅವರು ಕಾರ್ಯಕ್ರಮ ನಿರೂಪಿಸಿದರು.










