ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ಮಂಡಲ ಮುಂಬೈ ಇದರ 2024-25ನೇ ಸಾಲಿನ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪ್ರಾವೇಶಿಕ ಪ್ರಥಮ ಪರೀಕ್ಷೆಯಲ್ಲಿ ಕುಂದಾಪುರದ ಗುರು ಪರಂಪರಾ ಸಂಗೀತ ಸಭಾದ ವಿದ್ಯಾರ್ಥಿ ಹಾಗೂ ಕೋಟ ವಿವೇಕ ಆಂಗ್ಲ ಮಾಧ್ಯಮ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿ ಸಂಕಲ್ಪ್ ಕುಮಾರ್, 75 ರಲ್ಲಿ 70 ಅಂಕಗಳನ್ನು ಪಡೆದು ಹೊನ್ನಾವರ ಸೆಂಟರ್ ನಲ್ಲಿ ಪ್ರಥಮ ಸ್ಥಾನ ಗಳಿಸಿರುತ್ತಾರೆ.
ಈತ ಎಮ್‌ಐಟಿ ಮಣಿಪಾಲದ ಪ್ರಾಧ್ಯಾಪಕ ಡಾ. ಸಂಪತ್ ಕುಮಾರ್ ಹಾಗೂ ಶಿಲ್ಪಾ ದಂಪತಿಗಳ ಪ್ರಥಮ ಪುತ್ರ.
ಅವರು ಗೋಪಾಡಿ ವಿದ್ವಾನ್ ಸತೀಶ್ ಭಟ್ ಮಾಳಕೊಪ್ಪ ಹಾಗೂ ವಿದುಷಿ ಪ್ರತಿಮಾ ಭಟ್ ಮಾಳಕೊಪ್ಪ ಅವರಲ್ಲಿ ಕಳೆದ ಎಂಟು ವರ್ಷಗಳಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡುತ್ತಿದ್ದಾರೆ. ಅಲ್ಲದೆ 2024-25 ನೇ ಸಾಲಿನ ಡ್ರಾಯಿಂಗ್ ಸೀನಿಯರ್ ಪರೀಕ್ಷೆಯಲ್ಲೂ ವಿಶಿಷ್ಟ ಶ್ರೇಣಿಯೊಂದಿಗೆ ಉತ್ತೀರ್ಣನಾಗಿರುತ್ತಾರೆ.
ಸಂಕಲ್ಪ್ ಕುಮಾರ್ ಅವರ ಸಾಧನೆಗೆ ಗುರು ಪರಂಪರಾ ಸಂಗೀತ ಸಭಾ, ಕುಂದಾಪುರ ಹಾಗೂ ಕೋಟ ವಿವೇಕ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕ ವರ್ಗ ಅಭಿನಂದಿಸಿದ್ದಾರೆ.










