ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕೋಡಿ ಗ್ರಾಮ ಪಂಚಾಯತ್ ನೇತ್ರತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಪಂಚವರ್ಣ ಸಂಘಟನೆ ಕೋಟ ಇವರ ಸಂಯೋಜನೆಯೊಂದಿಗೆ ಶಿಶುಅಭಿವೃದ್ಧಿ ಯೋಜನೆ ಬ್ರಹ್ಮಾವರ, ಸಮನ್ವಯ ಸಂಜೀವಿನಿ ಒಕ್ಕೂಟ ಕೋಡಿ ಹಾಗೂ ಎಸ್‌ಎಲ್‌ಆರ್‌ಎಂ ಘಟಕ ಕೋಡಿ ಇವರ ಸಹಕಾರದೊಂದಿಗೆ ಕೋಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಖಾರ್ವಿ ಅಧ್ಯಕ್ಷತೆಯಲ್ಲಿ ಮನೆಗೊಂದು ಗಿಡ ನೆಡುವ ಎರಡನೇ ವರ್ಷದ ಮೂರು ತಿಂಗಳ ಪರಿಸರ ಸ್ನೇಹಿ ಹಸಿರು ಜೀವ ಅಭಿಯಾನ ಜರಗಿತು.
ಗ್ರಾಮ ಪಂಚಾಯತ್ ಸದಸ್ಯರಾದ ಕೃಷ್ಣ ಪೂಜಾರಿ ಪಿ, ಪ್ರಭಾಕರ್ ಮೆಂಡನ್, ಸತೀಶ್ ಜಿ. ಕುಂದರ್ ಕಾರ್ಯಕ್ರಮದ ಮುಂದಾಳತ್ವ ವಹಿಸಿದರು.
ಭಾನುವಾರ ಹೊಸಬೆಂಗ್ರೆ ಅಂಗನವಾಡಿ ಬಾಲಾವಿಕಾಸ ಸಮಿತಿ ಅಧ್ಯಕ್ಷ ಸುಲೋಚನಾ ದಿವಾಕರ್ ಕುಂದರ್ ಮನೆಯಿಂದ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಸಂಜೀವಿನಿ ಅಧ್ಯಕ್ಷೆ ಪೂರ್ಣಿಮ, ಮಾಜಿ ಸಂಜೀವಿನಿ ಅಧ್ಯಕ್ಷೆ ದೀಪಾ ಆರ್ ಖಾರ್ವಿ, ಸ್ತ್ರೀ ಶಕ್ತಿ ಸಂಘದ ಸದಸ್ಯೆ ಶಾರದಾ, ಸುಜಾತ ಖಾರ್ವಿ, ಹಾಗೂ ಸ್ಥಳೀಯರು ಭಾರತಿ, ಸವಿತಾ ಪುಟಾಣಿಗಳು ಶ್ರೀಯಾ, ತೃಪ್ತಿ, ಸಂಭ್ರದ್ಧಿ, ಸನ್ನಿಧಿ, ಸುಮುಖ, ಹಂಸಿಕಾ ಉಪಸ್ಥಿತರಿದ್ದರು.
ಹೊಸಬೆಂಗ್ರೆ ಅಂಗನವಾಡಿ ಕಾರ್ಯಕರ್ತೆ ಯಮುನಾ ಎಲ್. ಕುಂದರ್ ಸಹಕಾರ ನೀಡಿದರು.















