ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಹಾತ್ಮ ಗಾಂಧಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರುಗಳ ತತ್ವಗಳು ಮತ್ತು ಜೀವನಾದರ್ಶಗಳು ಎಂದಿಗೂ ಸರ್ವಕಾಲಿಕ ಎಂದು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ಹೇಳಿದರು.
ಅವರು ಗುರುವಾರದಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಮಹಾತ್ಮ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆಯನ್ನು ಪುಷ್ಪ ಸಮರ್ಪಣೆಗೖದು ಮಾತನಾಡಿದರು. ಅವರೀರ್ವರ ಅಹಿಂಸಾ ತತ್ವ, ಪ್ರಾಮಾಣಿಕತೆ ಕರ್ತವ್ಯ ನಿಷ್ಠೆ, ಮತ್ತು ಸತ್ಯದ ದಾರಿಯ ನಡೆ- ನುಡಿಗಳು ನಮಗೆ ಮಾರ್ಗದರ್ಶಿಯಾಗಿವೆ ಎಂದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಬಂಧಕರಾದ ಗೋಪಾಲ್ ನಾಯ್ಕ, ಇಂಗ್ಲಿಷ್ ಉಪನ್ಯಾಸಕಿ ಮೀನಾಕ್ಷಿ ಎನ್ಎಸ್ ವಾಣಿಜ್ಯ ವಿಭಾಗ ಮುಖ್ಯಸ್ಥ ಅರುಣ್ ಎಎಸ್, ಕಂಪ್ಯೂಟರ್ ಸೈನ್ಸ್ ಉಪನ್ಯಾಸಕ ರಾಮಚಂದ್ರ ಆಚಾರ್ಯ, ಮತ್ತಿತರರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.










