ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಅಂಪಾರು ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂಟರ್‌ಹೌಸ್ ಕಾಂಪಿಟೇಶನ್ ಅಂಗವಾಗಿ “ಅಗ್ನಿ ಇಲ್ಲದೆ ಆಹಾರ ತಯಾರಿ” ಸ್ಪರ್ಧೆಯನ್ನು ಆಯೋಜಿಸಲಾಯಿತು.
ಈ ಸ್ಪರ್ಧೆಯಲ್ಲಿ ಚರಕ, ಆತ್ರೇಯ, ಶುಶ್ರುತ ಮತ್ತು ಅಗಸ್ತ್ಯ ತಂಡಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ, ವಿವಿಧ ಬಗೆಯ ಆರೋಗ್ಯಕರ ಆಹಾರ ಮತ್ತು ಜ್ಯೂಸ್‌ಗಳನ್ನು ತಯಾರಿಸಿದರು.

ಕಾರ್ಯಕ್ರಮದಲ್ಲಿ ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯದರ್ಶಿ ನವೀನ್ ಶೆಟ್ಟಿ ಮತ್ತು ಶಾಲಾ ಆಡಳಿತಾಧಿಕಾರಿ ಚೈತ್ರಾ ಯಡಿಯಾಳ ಅವರು ತೀರ್ಪುಗಾರರಾಗಿ ಉಪಸ್ಥಿತರಿದ್ದರು.
ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಶಾಲೆಯಲ್ಲಿಯೇ ವಿವಿಧ ರೀತಿಯ ಪೌಷ್ಠಿಕ ಹಾಗೂ ಸೃಜನಾತ್ಮಕ ತಿನಿಸುಗಳನ್ನು ತಯಾರಿಸಿದರು. ತರಕಾರಿಗಳ ಸಲಾಡ್, ಕೋಸಂಬರಿ, ಡ್ರೈ ಫ್ರೂಟ್ಸ್ ಲಾಡು, ಅವಲಕ್ಕಿ, ಮುಂಡಕ್ಕಿ ಚುರುಮುರಿ, ಹಣ್ಣುಗಳ ಸಲಾಡ್, ಸ್ಯಾಂಡ್‌ವಿಚ್, ಸ್ಪ್ರೌಟ್ ಚಾಟ್, ಬಿಸ್ಕತ್ ಟಾಪಿಂಗ್ ಮೊದಲಾದ ರುಚಿಕರ ಆಹಾರಗಳು ಎಲ್ಲರ ಗಮನ ಸೆಳೆದವು.
ವಿದ್ಯಾರ್ಥಿಗಳಲ್ಲಿ ತಂಡಭಾವನೆ, ಸೃಜನಶೀಲತೆ ಹಾಗೂ ಆರೋಗ್ಯಕರ ಆಹಾರದ ಅರಿವು ಬೆಳೆಸುವಲ್ಲಿ ಇಂತಹ ಚಟುವಟಿಕೆಗಳು ಮಹತ್ತರ ಪಾತ್ರ ವಹಿಸುತ್ತದೆ ಎಂದು ಸಂಜಯಗಾಂಧಿ ಚಾರಿಟೇಬಲ್ ಟ್ರಸ್ಟ್ ನ ಕಾರ್ಯದರ್ಶಿ ನವೀನ್ ಶೆಟ್ಟಿ aವರು ಅಭಿಪ್ರಾಯಪಟ್ಟರು.
ಶಾಲೆಯ ಆಡಳಿತ ಅಧಿಕಾರಿ ಚೈತ್ರಾ ಯಡಿಯಾಳ ಅವರು ವಿದ್ಯಾರ್ಥಿಗಳ ಕಾರ್ಯವನ್ನು ಮೆಚ್ಚಿ, ಇಂತಹ ಚಟುವಟಿಕೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ಅಭಿವೃದ್ಧಿಗೆ ಸಹಾಯಕವಾಗಿವೆ ಎಂದು ತಿಳಿಸಿದರು.
ತಂಡಗಳ ನಾಯಕರು ಹಾಗೂ ಸದಸ್ಯರು ಈ ಸ್ಪರ್ಧೆಯಲ್ಲಿ ತಮ್ಮ ಪ್ರತಿಭೆ ಮತ್ತು ತಂಡದ ಸಹಕಾರವನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಪ್ರತಿ ತಂಡಗಳ ನಿಯೋಜಿತ ಶಿಕ್ಷಕರು ಸಹಕರಿಸಿದರು.















