ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಹೈದರಾಬಾದ್‌ನಲ್ಲಿ ಡಿ.13ರಿಂದ 21ರವರೆಗೆ ನಡೆಯುವ ಬಿಸಿಸಿಐ 19 ವರ್ಷದೊಳಗಿನ ಮಹಿಳಾ ಏಕದಿನ ಭಾಗವಹಿಸುವ ಕ್ರಿಕೆಟ್‌ನಲ್ಲಿ ಕರ್ನಾಟಕ ರಾಜ್ಯ ತಂಡಕ್ಕೆ ಕುಂದಾಪುರದ ರಚಿತಾ ಹತ್ವಾರ್ ನಾಯಕಿಯಾಗಿ, ವಿಕೆಟ್ ಕೀಪಿಂಗ್ ಕಂ ಬ್ಯಾಟರ್ ಆಗಿರುವ 16 ವರ್ಷದ ರಾಜ್ಯ ತಂಡವನ್ನು ಇದೇ ಮೊದಲ ಭಾರಿಗೆ ಮುನ್ನಡೆಸುತ್ತಿದ್ದಾರೆ.
ಪ್ರಸಕ್ತ ಅಹಮದಾಬಾದ್‌ನಲ್ಲಿ ನಡೆಯುತ್ತಿರುವ 23 ವರ್ಷದೊಳಗಿನ ಮಹಿಳಾ ಟಿ-20 ಕ್ರಿಕೆಟ್‌ನಲ್ಲಿ ಕರ್ನಾಟಕ ರಾಜ್ಯದ ಪರ ಆಡುತ್ತಿದ್ದು, ಆರಂಭಿಕ ಆಟಗಾರ್ತಿಯಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ತಂಡ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದೆ.
ರಚಿತಾ ಕರ್ನಾಟಕ ರಾಜ್ಯ ಹಿರಿಯರ ತಂಡದ ಸಂಭಾವ್ಯ ಆಟಗಾರ್ತಿಯರ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದು, ರಾಷ್ಟ್ರೀಯ ತಂಡಕ್ಕೂ ಆಯ್ಕೆಯಾಗುವ ನಿರೀಕ್ಷೆ ಮೂಡಿಸಿದ್ದಾರೆ. ರಚಿತಾ ಅವರಿಗೆ ಪ್ರಸ್ತುತ ಕರ್ನಾಟಕ ಇನ್ ಸ್ಟಿಟ್ಯೂಟ್ ಆಫ್ ಕ್ರಿಕೆಟ್ ಅಕಾಡೆಮಿ(ಕೆಐಒಸಿ)ಯ ಮುಖ್ಯ ಕೋಚ್ ಇರ್ಫಾನ್ ಸೇಶ್ ತರಬೇತಿ ನೀಡುತ್ತಿದ್ದಾರೆ. ರಚಿತಾ ವಾರದಲ್ಲಿ ಐದು ದಿನ ನಿರಂತರ ತರಬೇತಿ ಪಡೆಯುತ್ತಾರೆ.
ಕುಂದಾಪುರದ ವಕೀಲ ದಂಪತಿಯಾಗಿರುವ ರಮೇಶ್ ಹತ್ವಾರ್ ಹಾಗೂ ಸರಿತಾ ಹತ್ವಾರ್ ಅವರ ಪುತ್ರಿಯಾಗಿರುವ ರಚಿತಾ ಎಸ್ಸೆಸ್ಸೆಲ್ಸಿವರೆಗೆ ಕುಂದಾಪುರ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿತು ಎಸ್ಸೆಸ್ಸೆಲ್ಸಿಯಲ್ಲಿ ಶೇ.92 ಅಂಕ ಗಳಿಸಿದರು. ಪ್ರಸ್ತುತ ನ್ಯಾಷನಲ್ ಇನ್ ಆಯ್ಕೆಯಾಗಿದ್ದಾರೆ. ಓಪನ್ ಇಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (ಎಸ್ಐಒಎಸ್ )ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅಕ್ಕ ರಮಿತಾ ಹತ್ವಾರ್ ಶೇ.99 ಅಂಕ ಪಡೆದು ಬೆಂಗಳೂರಿನ ರಾಮಯ್ಯ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದಾರೆ.
ದಂಪತಿಗಳು ಪ್ರತಿ ಹುಟ್ಟುಹಬ್ಬಕ್ಕೆ ಹೆತ್ತವರು ಗಿಫ್ಟ್ ಕೊಡುತ್ತಿದ್ದರು. ಆದರೆ 6ನೇ ತರಗತಿಯಲ್ಲಿ ಕಲಿಯುತ್ತಿರುವಾಗ 11ನೇ ವರ್ಷಕ್ಕೆ ನನಗೆ ಬರ್ತ್ ಡೇ ಗಿಫ್ಟ್ ಬೇಡ, ನನ್ನನ್ನು ಕ್ರಿಕೆಟ್‌ಗೆ ಸೇರಿಸಿ ಎಂಬ ಬೇಡಿಕೆ ಇಟ್ಟರು.
ಆದರೆ ಹೆಣ್ಮಕ್ಕಳು ಕ್ರಿಕೆಟ್ ಆಡುವುದು ಸರಿ ಕಾಣಲ್ಲ ಎಂದು ತಂದೆ ತಾಯಿ ಅಷ್ಟೊಂದು ಗಮನ ಕೊಡಲಿಲ್ಲ. ಆದರೆ ರಚಿತಾ ಪಟ್ಟು ಬಿಡಲಿಲ್ಲ. ಶಾಲೆಯಲ್ಲಿ ನಡೆದ ಪಂದ್ಯವೊಂದರಲ್ಲಿ ಹುಡುಗರ ಜತೆ ಕ್ರಿಕೆಟ್ ಆಡಿ, ಬ್ಯಾಟಿಂಗ್‌ನಲ್ಲಿ ಅರ್ಧಶತಕ ಬಾರಿಸಿ ತಂಡಕ್ಕೆ ಗೆಲುವು ತಂದು ಕೊಟ್ಟರು. ಇಲ್ಲಿಂದ ರಚಿತಾ ಸಾಧನೆ ಮುಂದುವರಿದಿದೆ . ಅಕಾಡೆಮಿಗೆ ಸೇರಿದ ರಚಿತಾ, ಮೊಹಮ್ಮದ್ ಅರ್ಮಾನ್ ಅವರಲ್ಲಿ ತರಬೇತಿ ಪಡೆದರು. ರಚಿತಾರ ಕ್ರಿಕೆಟ್ ಆಸಕ್ತಿ, ಸಾಮರ್ಥ್ಯ ಮನಗಂಡ ಅರ್ಮಾನ್ ಬೆಂಗಳೂರಿನ ಕರ್ನಾಟಕ ಇನ್ ಸ್ಟಿಟ್ಯೂಟ್ ಆಫ್ ಕ್ರಿಕೆಟ್ ಅಕಾಡೆಮಿ(ಕೆಐಒಸಿ) ಸೇರಿಸುವಂತೆ ತಿಳಿಸಿದರು. ಅದರಂತೆ 2020ರಲ್ಲಿ ಕೆಐಒಸಿ ಸೇರ್ಪಡೆಗೊಂಡ ರಚಿತಾ ಕೋಚ್ ಇರ್ಫಾನ್ ಸೇಠ್ ಗರಡಿಯಲ್ಲಿ ಪಳಗಿದರು.
ರಚಿತಾ ಕ್ರಿಕೆಟ್ ಪ್ರಯಾಣ ಮನೆಯಿಂದ ಆರಂಭಗೊಂಡಿತು. ಮಗಳನ್ನು ಕ್ರಿಕೆಟ್ ತಾರೆಯನ್ನಾಗಿ ಮಾಡಬೇಕೆಂದು ಹತ್ವಾರ್ ದಂಪತಿ ಮನೆಯಲ್ಲಿಯೇ ಮಿನಿ ಒಳಾಂಗಣ ನಿರ್ಮಿಸಿದ್ದಾರೆ. ನಾನು ಕ್ರಿಕೆಟ್ ಆಡುತ್ತಿರುವುದು ತಂದೆ-ತಾಯಿಗೆ ಖುಷಿ. ಕ್ರಿಕೆಟ್‌ನಲ್ಲಿ ಹೆಚ್ಚು ಆಸಕ್ತಿ ಹೊಂದಿರುವುದರಿಂದ ಪೂರಕ ಸವಲತ್ತುಗಳನ್ನು ನೀಡಿದರು. ಓದಿನ ಜತೆಯಲ್ಲೇ ಕ್ರಿಕೆಟ್ ಆಡುತ್ತಿರುವುದು ಖುಷಿ ಕೊಟ್ಟಿದೆ. ಬೆಂಗಳೂರಿಗೆ ಬಂದು ತರಬೇತಿ ಪಡೆಯುವುದಕ್ಕೆ ಮುನ್ನ ತಂದೆ ತರಬೇತಿ ನೀಡುತ್ತಿದ್ದರು ಎನ್ನುತ್ತಾರೆ ರಚಿತಾ.
ರಚಿತಾ ಕ್ರಿಕೆಟ್ ಸಾಧನೆ:
- 2023ರಲ್ಲಿ 16 ವರ್ಷದೊಳಗಿನ ಕರ್ನಾಟಕ ರಾಜ್ಯ ತಂಡಕ್ಕೆ ವಿಕೆಟ್‌ಕೀಪರ್-ಆರಂಭಿಕ ಬ್ಯಾಟರ್ ಆಗಿ ಸೇರ್ಪಡೆ, ಉತ್ತಮ ಪ್ರದರ್ಶನ
- 2025ರಲ್ಲಿ ಮಹಾರಾಣಿ ಟ್ರೋಫಿ ಕರ್ನಾಟಕ ಪ್ರೀಮಿಯರ್ ಲೀಗ್ ಮೊದಲ ಆವೃತ್ತಿಯಲ್ಲಿ ಮೈಸೂರು ವಾರಿಯರ್ಸ್ ತಂಡಕ್ಕೆ ಆಯ್ಕೆ ಮೂರು ಪಂದ್ಯಶ್ರೇಷ್ಠ ಪ್ರಶಸ್ತಿ, ಫೈನಲ್‌ನಲ್ಲಿ ಬೆಸ್ಟ್ ಬ್ಯಾಟರ್ ಪ್ರಶಸ್ತಿ, ಟ್ರೋಫಿ ಜಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
- 2025ರಲ್ಲಿ 19 ವರ್ಷದೊಳಗಿನ ಅಂತಾರಾಜ್ಯ ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ರಾಜ್ಯ ತಂಡಕ್ಕೆ ಆಯ್ಕೆ, ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿ, ಸರಣಿಶ್ರೇಷ್ಠ ಪ್ರಶಸ್ತಿಗೂ ಭಾಜನ.















