ಕುಂದಾಪ್ರ ಡಾಟ್ ಕಾಂ ಸುದ್ದಿ.
ಬ್ರಹ್ಮಾವರ: ನಾನಾ ಕ್ಷೇತ್ರದ ಸಾಧಕರನ್ನು ಕಾರ್ಯಕ್ರಮದಲ್ಲಿ ಗುರುತಿಸಿ ಗೌರವಿಸಿದಲ್ಲಿ ಅವರ ಸಾಧನೆಗಳು ಯುವ ಜನತೆಗೆ ಸ್ಪೂರ್ತಿಯಾಗಿ ಸೇವಾ ಸಂಸ್ಥೆಗಳ ಸದಸ್ಯರಿಗೆ ಸಾಧನೆ ಮಾಡಲು ಸಹಾಯವಾಗುತ್ತದೆ ಎಂದು ಸಿನೀಯರ್ ಚೇಂಬರ್ಸ್ ಇಂಟರನ್ಯಾಷನಲ್ ಇದರ ರಾಷ್ಟ್ರೀಯ ನಿರ್ದೇಶಕ ಜಗದೀಶ್ ಕೆಮ್ಮಣ್ಣು ಹೇಳಿದರು.
ಅವರು ಮಂಗಳವಾರ ಸಿನೀಯರ್ ಚೇಂಬರ್ಸ್ ಇಂಟರನ್ಯಾಷನಲ್ ನೇಜಾರು ಇದರ ವತಿಯಿಂದ ಸೆಲ್ಯೂಟ್ ಪುರಸ್ಕಾರ ಅಂಗವಾಗಿ ಬ್ರಹ್ಮಾವರ ಹೊಟೇಲ್ ಆಶ್ರಯದಲ್ಲಿ ಜರುಗಿದ ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾಧ್ಯಮ ಕ್ಷೇತ್ರದ ಸಾಧಕ ಬ್ರಹ್ಮಾವರದ ಹಿರಿಯ ಪತ್ರಿಕಾ ವರದಿಗಾರ ಬಂಡೀಮಠ ಶಿವರಾಮ ಆಚಾರ್ಯ ಮತ್ತು ಅಫಘಾತ ರಹಿತ ಅಟೋ ಚಾಲಕ ಪತ್ರಿಕಾ ವಿತರಕ ರವೀಂದ್ರ ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ಸಿನೀಯರ್ ಚೇಂಬರ್ಸ್ ಇಂಟರನ್ಯಾಷನಲ್ ಇದರ ಸುರೇಶ್ ಅಮೀನ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಮಿತ್ರ ಕುಮಾರ್, ಯುತ್ ವಿಂಗ್ ಅಧ್ಯಕ್ಷ ರಾಹುಲ್ ಶೆಟ್ಟಿ, ಪ್ರಶಾಂತ್ ಆಚಾರ್ಯ, ಸೀನಿಯರೇಟ್ ನಿಕಟ ಪೂರ್ವ ಅಧ್ಯಕ್ಷ ಚೈತ್ರ ಕುಮಾರ್ ಉಪಸ್ಥಿತರಿದ್ದರು.
ವಿಜಯ ಸುವರ್ಣ ಬೈಕಾಡಿ ಕಾರ್ಯಕ್ರಮ ನಿರೂಪಿಸಿದರು.















