ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ವಿಭಾಗದ ಶಿಕ್ಷಕರಿಗೆ ಆಂಗ್ಲ ಭಾಷಾ ಪ್ರಾವಿಣ್ಯತೆಯೊಂದಿಗೆ ಸಂವಹನ ಕೌಶಲ್ಯಗಳು ಎಂಬ ಶೀರ್ಷಿಕೆಯಡಿ ಒಂದು ದಿನದ ಕಾರ್ಯಗಾರವನ್ನು ಆಯೋಜಿಸಲಾಯಿತು.
ಸಂಪನ್ಮೂಲ ವ್ಯಕ್ತಿ ಅರುಣ ಎಸ್. ಶಿಕ್ಷಣ ಸಮಾಲೋಚಕಿ ಹಾಗೂ ಮೃದು ಕೌಶಲ್ಯಗಳ ತರಬೇತುಗಾರ್ತಿ ಕಾರ್ಯಗಾರದಲ್ಲಿ ಆತ್ಮವಿಶ್ವಾಸ, ಧನಾತ್ಮಕ ಆಲೋಚನೆ ಹಾಗೂ ಸಮಯ ನಿರ್ವಹಣೆಯ ಮೂಲಕ ಮಕ್ಕಳ ಮನದಿಂಗಿತವನ್ನು ಅರಿತು ಜ್ಞಾನವನ್ನು ಬಿತ್ತರಿಸಿದ್ದಲ್ಲಿ ಒಬ್ಬ ಶಿಕ್ಷಕ ಯಶಸ್ಸಿನ ಮೆಟ್ಟಿಲೆರುತ್ತಾನೆ. ಹಾಗೆಯೇ ಸಮಯಕ್ಕೆ ತಕ್ಕಂತೆ ಸಮಾಜವನ್ನು ಎದುರಿಸಲು ಮಗುವನ್ನು ತಯಾರಿಸುವುದರೊಂದಿಗೆ ತಾನು ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಕೃಷ್ಣ ಅಡಿಗರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಪ್ರಮೀಳಾ ಡಿಸೋಜಾ ಅವರು ಮುಖ್ಯ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು.
ಸಹಾಯಕ ಶಿಕ್ಷಕಿ ಪದ್ಮಾವತಿ ಅವರು ಎಲ್ಲರನ್ನು ಸ್ವಾಗತಿಸಿದರು. ಸಹಾಯಕ ಶಿಕ್ಷಕಿ ಅಶ್ವಿನಿ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ರೇಷ್ಮಾ ಡಿಸೋಜಾ ಅವರು ವಂದನಾರ್ಪಣೆ ಗೈದರು. Orient black swan ಪಬ್ಲಿಕೇಶನ್ ನ ರೂಪೇಶ್ ಅವರು ಕಾರ್ಯಕ್ರಮದಲ್ಲಿ ಹಾಜರಿದ್ದರು.










