Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕುಂದಾಪುರ ಮೂಲದ ವ್ಯಕ್ತಿ ಶಾರ್ಜಾದಲ್ಲಿ ಕೊಲೆ. ಪತ್ನಿ, ಪುತ್ರ ನಾಪತ್ತೆ
    ಊರ್ಮನೆ ಸಮಾಚಾರ

    ಕುಂದಾಪುರ ಮೂಲದ ವ್ಯಕ್ತಿ ಶಾರ್ಜಾದಲ್ಲಿ ಕೊಲೆ. ಪತ್ನಿ, ಪುತ್ರ ನಾಪತ್ತೆ

    Updated:23/09/2026No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕುಂದಾಪುರ:
    ನಗರದ ಹೊನ್ನನಕೇರಿ ನಿವಾಸಿ ಶಾರ್ಜಾದಲ್ಲಿ ಉದ್ಯೋಗದಲ್ಲಿದ್ದ ಆಲ್ವಿನ್ ಪ್ರಕಾಶ್ ಕುಂದರ್ (50) ಕೊಲೆಯಾಗಿರುವುದು ತಿಳಿದುಬಂದಿದೆ. ಪ್ರಕರಣದ ಬಳಿಕ ನಾಪತ್ತೆಯಾಗಿರುವ ಮೃತರ ಪತ್ನಿ ಹಾಗೂ ಪುತ್ರನಿಗಾಗಿ ಶೋಧ ಮುಂದುವರಿದಿದೆ.

    Click Here

    Call us

    Click Here

    ಕಳೆದ 14 ವರ್ಷಗಳಿಂದ ಶಾರ್ಜಾದ ಖಾಸಗಿ ವಿಮಾನ ಕಂಪೆನಿಯ ಟರ್ಮಿನಲ್ ಎರಡರಲ್ಲಿ ಸೀನಿಯರ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ದುಷ್ಕರ್ಮಿಗಳು ಆಲ್ವಿನ್ ಪ್ರಕಾಶ್ ಕುಂದರ್ ಅವರ ಎದೆಗೆ ಚೂರಿ ಇರಿದು 9 ತುಂಡುಗಳಾಗಿ ಕತ್ತರಿಸಿ ಒಮನ್‌ಗೆ ತೆರಳುವ ದಾರಿಯಲ್ಲಿ ಅವರದ್ದೇ ಕಾರಿನ ಢಿಕ್ಕಿಯಲ್ಲಿ ಎರಡು ಬ್ಯಾಗ್‌ಗಳಲ್ಲಿ ತುಂಬಿಸಿಟ್ಟಿದ್ದರು ಎನ್ನಲಾಗಿದೆ. ಪ್ರಕರಣ ಜುಲೈ 20ರ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ದೂರು ದಾಖಲಿಸಲಾಗಿತ್ತು. ಸದ್ಯ ಸೆ.21ರಂದು ಕುಟುಂಬಕ್ಕೆ ಡೆತ್ ಸರ್ಟಿಫಿಕೆಟ್ ಬಂದಿದ್ದು, ಎಫ್‌ಐಆ‌ರ್ ಇನ್ನೂ ಕೈ ಸೇರಿಲ್ಲ. ಶಾರ್ಜಾದಲ್ಲಿ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಪ್ರಕಾಶ್ ಅವರ ಮೃತದೇಹವನ್ನು ತಾಯ್ನಾಡಿಗೆ ತರಲು ಕುಟುಂಬದವರು ಕಾಯುತ್ತಿದ್ದಾರೆ.

    ಆಲ್ವಿನ್ ಪ್ರಕಾಶ್ ಕುಂದರ್ ತನ್ನ ಹಿರಿಯ ಸಹೋದರ ಕುಂದಾಪುರದ ಅನಿಲ್ ಪ್ರಶಾಂತ್ ಕುಂದರ್‌ ಅವರ ಜತೆ ಕರೆ ಅಥವಾ ವಾಟ್ಸಪ್ ವಾಯ್ಸ ಸಂದೇಶದ ಮೂಲಕ ಮಾತ್ರ ಸಂವಹನ ನಡೆಸುತ್ತಿದ್ದರು. ಜು.20ರಿಂದ ಆಲ್ವಿನ್ ಪ್ರಕಾಶ್ ನಾಪತ್ತೆಯಾಗಿದ್ದು, ಕುಟುಂಬಸ್ಥರ ಸಂಪರ್ಕಕ್ಕೂ ಸಿಗುತ್ತಿರಲಿಲ್ಲ. ಎಂದಿನಂತೆ ವಾಯ್ಸ ಮೆಸೇಜ್ ಮಾಡುವ ಬದಲು ನಾನು ಹುಷಾರಿದ್ದೇನೆ ಎಂದು ಕೇವಲ ಟೆಸ್ಟ್ ಮೆಸೇಜ್ ಮಾತ್ರ ಇವರ ಮೊಬೈಲ್‌ನಿಂದ ಬರುತ್ತಿತ್ತು. ಒಂದು ವಾರದ ಬಳಿಕ ಅರ್ಧಂಬರ್ಧ ಹಳೆ ಮೆಸೇಜ್‌ಗಳೇ ಮೊಬೈಲ್ ಮೂಲಕ ಬಂದಾಗ ಅಸಮಾಧಾನಗೊಂಡ ಹಿರಿಯ ಸಹೋದರ ಐದು ನಿಮಿಷ ಸಹ ಪುರುಸೊತ್ತಿಲ್ಲವೇ ಎಂದು ಜೋರು ಮಾಡಿ ವಾಯ್ಸ ಮೆಸೇಜ್ ಹಾಕಿದ್ದರು. ಅಂದಿನಿಂದ ಯಾವುದೇ ಉತ್ತರ ಬಂದಿರಲಿಲ್ಲ.

    ಸಹೋದರನಿಗೆ ಕರೆ ಮಾಡಿದರೂ ರಿಪ್ಪೆ, ದೊರೆಯದ ಹಿನ್ನೆಲೆ ಸಂದೇಹ ಬಂದು ಶಾರ್ಜಾದಲ್ಲಿರುವ ಪ್ರಕಾಶ್ ಅವರ ಗೆಳೆಯ ಮನೋಹರ್‌ಎಂಬವರನ್ನು ಸಂಪರ್ಕಿಸಿದ್ದರು. ಮನೋಹರ್‌ಅವರು ಆಲ್ವಿನ್ ಪ್ರಕಾಶ್ ಕುಂದರ್ ತಂಗಿದ್ದ ಫ್ಲ್ಯಾಟ್‌ಗೆ ತೆರಳಿ ಪರಿಶೀಲನೆ ನಡೆಸಿದಾಗ ಅವರು ಭಾರತಕ್ಕೆ ತೆರಳಿದ್ದಾರೆ ಎಂದು ವಾಚ್‌ಮ್ಯಾನ್ ಉತ್ತರಿಸಿದ್ದ. ಆನಂತರ ಅವರು ಕೆಲಸ ಮಾಡುತ್ತಿದ್ದ ಖಾಸಗಿ ಕಂಪೆನಿ ಎಚ್‌ಆರ್‌ಗೆ ಕರೆ ಮಾಡಿದಾಗಲೂ ಭಾರತಕ್ಕೆ ತೆರಳಿದ್ದಾರೆ ಎಂಬ ಉತ್ತರ ದೊರಕಿತ್ತು. ಆದರೆ, ಮರುದಿನ ಮತ್ತೆ ಪಾಸ್ ಪೋರ್ಟ್ ಮೂಲಕ ಪರಿಶೀಲನೆ ನಡೆಸಿದಾಗ ಅವರು ದುಬೈನಲ್ಲೇ ಇರುವುದಾಗಿ ತಿಳಿದುಬಂದಿದೆ. ಈ ಮಾಹಿತಿ ಆಧಾರದಲ್ಲಿ ಕಂಪೆನಿ ಎಚ್‌ಆರ್ಗೆಗೆ ಸಹೋದರ ಕಾಣೆಯಾಗಿರುವ ಬಗ್ಗೆ ಹಿರಿಯ ಸಹೋದರ ಪ್ರಶಾಂತ್ ದೂರು ನೀಡಿದ್ದರು. ಆ. 12ಕ್ಕೆ ಶಾರ್ಜಾ ಪೊಲೀಸರಿಗೆ ಒಂದು ಮೃತದೇಹ ಸಿಕ್ಕಿರುವುದು ತಿಳಿದುಬಂದಿದ್ದು, ಅಲ್ಲಿದ್ದ ಸೋದರ ಸಂಬಂಧಿಯೋರ್ವನ ಮೂಲಕ ಡಿಎನ್ಎ ಪರೀಕ್ಷೆ ನಡೆಸಿದಾಗ ಪ್ರಕಾಶ್ ಅವರದ್ದೇ ಮೃತದೇಹ ಎಂದು ಗುರುತಿಸಲಾಗಿದೆ ಎಂದೆನ್ನಲಾಗಿದೆ.

    ಪತ್ನಿ, ಪುತ್ರನ ಪತ್ತೆಗೆ ಮುಂದುವರಿದ ಕಾರ್ಯಚರಣೆ:
    ಉಡುಪಿಯ ಬಲಾಯಿಪಾದೆಯಲ್ಲಿ 20 ವರ್ಷಗಳ ಹಿಂದೆ ಟೀನಾ ಕುಂದರ್ ಎಂಬಾಕೆಯನ್ನು ಮದುವೆಯಾಗಿದ್ದ ಪ್ರಕಾಶ್ ಕುಂದರ್ ದಂಪತಿಗೆ 10ನೇ ತರಗತಿಯಲ್ಲಿ ಕಲಿಯುತ್ತಿರುವ ಓರ್ವ ಮಗನಿದ್ದಾನೆ. ಪತ್ನಿ ಶಾರ್ಜಾದಲ್ಲೇ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಕೃತ್ಯ ನಡೆದ ಬಳಿಕ ಪತ್ನಿ ಹಾಗೂ ಪುತ್ರ ಇಬ್ಬರೂ ನಾಪತ್ತೆಯಾಗಿದ್ದಾರೆ. ಶಾರ್ಜಾದಲ್ಲಿ ಪೊಲೀಸರ ತನಿಖೆ ವೇಳೆ ಪತ್ನಿ ಹಾಗೂ ಮಗ ಸಿಕ್ಕಿಲ್ಲ. ಕೊಲೆ ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದು ಸಹೋದರ ಅನಿಲ್ ಪ್ರಶಾಂತ್ ಕುಂದರ್‌ಕಣ್ಣೀರು ಹಾಕಿದ್ದಾರೆ. ಇನ್ನು ಮೃತರ ಪತ್ನಿ ಟೀನಾ ಅವರ ತಾಯಿ ಮಗಳಿಗೆ ಕರೆ ಮಾಡಿದಾಗ ಕರೆ ಸ್ವೀಕರಿಸುತ್ತಿಲ್ಲ ಎಂದು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕುಂದಾಪುರ ಪೊಲೀಸರು ಮೃತರ ಸಹೋದರನ ಮನೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

    Click here

    Click here

    Click here

    Call us

    Call us

    ಉಡುಪಿ ಮೂಲದ ವ್ಯಕ್ತಿಯೊಬ್ಬರು ಶಾರ್ಜಾದಲ್ಲಿ ಹತ್ಯೆಯಾಗಿದ್ದಾರೆ ಎಂಬ ವರದಿಗಳು ಕೆಲವು ಸ್ಥಳೀಯ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಆದರೆ, ಈ ಘಟನೆಗೆ ಸಂಬಂಧಿಸಿ ಈವರೆಗೆ ಶಾರ್ಜಾ ಪೊಲೀಸ್ ಇಲಾಖೆ ಅಥವಾ ಯುಎಇಯಲ್ಲಿರುವ ಭಾರತೀಯ ರಾಯಭಾರ ಕಚೇರಿ/ಕಾನ್ಸುಲೇಟ್ ವತಿಯಿಂದ ಉಡುಪಿ ಜಿಲ್ಲಾ ಪೊಲೀಸರಿಗೆ ಯಾವುದೇ ಅಧಿಕೃತ ಮಾಹಿತಿ ಅಥವಾ ದೃಢೀಕರಣ ಲಭ್ಯವಾಗಿಲ್ಲ ಎಂದು ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.

    kundapura
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಫುಟ್ಬಾಲ್ ಪಂದ್ಯಾಟದಲ್ಲಿ ಶ್ರೀ ವೆಂಕಟರಮಣ ಪ.ಪೂ ಕಾಲೇಜಿನ ವಿದ್ಯಾರ್ಥಿ ಹರ್ಷಿತ್ ರಾಜ್ಯ ಮಟ್ಟಕ್ಕೆ ಆಯ್ಕೆ

    25/09/2026

    ಡಾ. ಬಿ.ಬಿ. ಹೆಗ್ಡೆ ಕಾಲೇಜು: ಬ್ಯಾಂಕು ಮತ್ತು ಹಣಕಾಸಿನ ಕುರಿತಾದ ಅರಿವು ಕಾರ್ಯಕ್ರಮ

    25/09/2026

    ಕೋಟೇಶ್ವರ: ಸಹಕಾರಿ ಸಂಘದ ಸಿಇಒ ಆತ್ಮಹತ್ಯೆ

    25/09/2026
    Leave A Reply Cancel Reply

    five × three =

    Call us

    Click Here

    Call us

    Call us

    Call us
    Highest Viewed Recently
    • ಫುಟ್ಬಾಲ್ ಪಂದ್ಯಾಟದಲ್ಲಿ ಶ್ರೀ ವೆಂಕಟರಮಣ ಪ.ಪೂ ಕಾಲೇಜಿನ ವಿದ್ಯಾರ್ಥಿ ಹರ್ಷಿತ್ ರಾಜ್ಯ ಮಟ್ಟಕ್ಕೆ ಆಯ್ಕೆ
    • ಡಾ. ಬಿ.ಬಿ. ಹೆಗ್ಡೆ ಕಾಲೇಜು: ಬ್ಯಾಂಕು ಮತ್ತು ಹಣಕಾಸಿನ ಕುರಿತಾದ ಅರಿವು ಕಾರ್ಯಕ್ರಮ
    • ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ – ಆಳ್ವಾಸ್‌ಗೆ 12 ವಿಭಾಗಗಳಲ್ಲಿ ಪ್ರಶಸ್ತಿ
    • ಕೋಟೇಶ್ವರ: ಸಹಕಾರಿ ಸಂಘದ ಸಿಇಒ ಆತ್ಮಹತ್ಯೆ
    • ಉಡುಪಿ: ವಿವಿಧ ಯೋಜನೆಗೆ ಅರ್ಜಿ ಆಹ್ವಾನ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.