ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಕೆರಾಡಿ ಗ್ರಾಮದ ಹಯ್ಯಂಗಾರು ಅಸ್ಕಿಮಕ್ಕಿ ಎಂಬಲ್ಲಿನ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ವರದಿಯಾಗಿದೆ. ಅಸ್ಕಿಮಕ್ಕಿಯ ಕರುಣಾಕರ ಶೆಟ್ಟಿ (30) ಮೃತ ದುರ್ದೈವಿ.
ಬಾಗಲಕೋಟೆಯ ಮಹಾಲಿಂಗಪುರದಲ್ಲಿ ಹೋಟೆಲ್ ಉದ್ಯಮ ಮಾಡಿಕೊಂಡಿದ್ದ ಕರುಣಾಕರ ಅವರು ವ್ಯವಹಾರದಲ್ಲಿ ನಷ್ಟ ಅನುಭವಿಸಿ ಊರಿಗೆ ಮರಳಿದ್ದರು. ಮಂಗಳವಾರ ಸಂಜೆ ವೇಳೆ ಮನೆಯ ತೋಟದ ಪಕ್ಕದ ಇರುವ ಹೊಳೆ ಬದಿಯಲ್ಲಿರುವ ಚಾರು ಮರದ ಕೊಂಬೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಶಂಕಿಸಲಾಗಿದ್ದು ತಡವಾಗಿ ಮನೆಯವರ ಗಮನಕ್ಕೆ ಬಂದಿದೆ. ಮೃತರು ಹೆಂಡತಿ ಹಾಗೂ ಮಗು ಸೇರಿದಂತೆ ಕುಟುಂಬಿಕರನ್ನು ಅಗಲಿದ್ದಾರೆ. ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.