ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹೆಮ್ಮಾಡಿ ಸಮೀಪದ ಮೂವತ್ತುಮುಡಿ ಬಸ್ ನಿಲ್ದಾಣದ ಬಳಿ ಲಾರಿ ಹಾಗೂ ಟಿಪ್ಪರ್ ನಡುವೆ ಮುಖಾಮುಖೀ ಢಿಕ್ಕಿ ಸಂಭಧಿವಿಸಿ ಲಾರಿ ಚಾಲಕರಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಲಾರಿ ಚಾಲಕ ತಮಿಳುನಾಡು ನಿವಾಸಿ ಜಯ ಕುಮಾರ್ (41) ಹಾಗೂ ಅದೇ ಲಾರಿಯ ಲ್ಲಿದ್ದ ಇನ್ನೋರ್ವ ಚಾಲಕ ಪೊನ್ನುಸ್ವಾಮಿ (52) ಗಂಭೀರವಾಗಿ ಗಾಯಗೊಂಡವರು.
ಢಿಕ್ಕಿ ಹೊಡೆದ ರಭಸಕ್ಕೆ ಟಿಪ್ಪರ್ ಮಗುಚಿ ಬಿದ್ದಿದ್ದು, ಲಾರಿಯ ಮುಂಭಾಗ ಜಖಂಗೊಂಡಿದೆ. ಕುಂದಾಪುರದಿಂದ ಬಂಡೆ ಕಲ್ಲುಗಳನ್ನು ತುಂಬಿಕೊಂಡು ಗಂಗೊಳ್ಳಿಗೆ ತೆರಳುತ್ತಿದ್ದ ಟಿಪ್ಪರ್‌ಗೆ ಹುಬ್ಬಳ್ಳಿಯಿಂದ ಕೇರಳದತ್ತ ಸಾಗುತ್ತಿದ್ದ ಲಾರಿ ತೀರಾ ಬಲಕ್ಕೆ ಚಲಿಸಿ ಢಿಕ್ಕಿ ಹೊಡೆದಿತ್ತು.
ಢಿಕ್ಕಿಯ ರಭಸಕ್ಕೆ ಟಿಪ್ಪರ್ ಪಲ್ಟಿಯಾಗಿ ಅದರ ಲ್ಲಿದ್ದ ಬಂಡೆಕಲ್ಲುಗಳು ರಸ್ತೆಯ ಬದಿ ಬಿದ್ದಿದ್ದವು. ಟಿಪ್ಪರ್ ಚಾಲಕನಿಗೆ ಗಾಯಗಳಾಗಿದ್ದು ಅವರು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಲಾರಿಯೊಳಗೆ ಸಿಲುಕಿಕೊಂಡಿದ್ದ ಚಾಲಕರಿಬ್ಬರನ್ನು ಹೆಮ್ಮಾಡಿಯ ರಿಕ್ಷಾ ಚಾಲಕರು ಹೊರತೆಗೆದು ಅವರದ್ದೇ ರಿûಾದಲ್ಲೇ ಕುಂದಾಪುರ ಆಸ್ಪತ್ರೆಗೆ ಸಾಗಿಸಿದ್ದರು.
ಅಪಘಾತ ಸಂಭವಿಸಿದ ಬಳಿಕ ಸ್ವಲ್ಪ ಹೊತ್ತು ಸಂಚಾರ ಅಸ್ತವ್ಯಸ್ತಗೊಂಡಿತ್ತು. ಕುಂದಾಪುರ ಸಂಚಾರ ಠಾಣೆ ಪೊಲೀಸರು ಸಂಚಾರವನ್ನು ಸುಗಮಗೊಳಿಸಿದರು. ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.