ರೋಟರಿ ಸನ್‌ರೈಸ್: ವಿಶ್ವ ತಿಳುವಳಿಕೆ ಮತ್ತು ರೋಟರಿ ದಿನಾಚರಣೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರೋಟ್‌ರಿ ಕ್ಲಬ್ ಕುಂದಾಪುರ ಸನ್‌ರೈಸ್ ನೇತೃತ್ವದಲ್ಲಿ ಕೋಡಿಯ ಕಡಲ ಕಿನಾರೆಯಲ್ಲಿ ಸಂಭ್ರಮದಿಂದ ರೋಟರಿ ಮತ್ತು ವಿಶ್ವ ತಿಳುವಳಿಕೆಯ ದಿನಾಚರಣೆ ಜರುಗಿತು.

Call us

Click Here

ಸತ್ಯ ಶಾಂತಿ ಮತ್ತು ತ್ಯಾಗದ ಸಂಕೇತವಾದ ರಾಷ್ಟ್ರದ ತ್ರಿವರ್ಣ ಧ್ವಜ ಮೂರು ಧರ್ಮದ ಪ್ರಮುಖರು ಒಟ್ಟಾಗಿ ಬಿಡಿಸುವುದರ ಮೂಲಕ ಸಹಬಾಳ್ವೆಯ ಸಂಕೇತವೆಂಬಂತೆ ವಿಶಿಷ್ಟ ರೀತಿಯಲ್ಲಿ ಉದ್ಧಾಟಿಸಲಾಯಿತು. ಶೃಂಗೇರಿ ಶ್ರೀ ಶಾರದಾ ಪೀಠದ ಪ್ರಾಂತ್ಯಾಧಿಕಾರಿ ಡಾ|| ಎಚ್.ವಿ. ನರಸಿಂಹಮೂರ್ತಿ ಸಾಮಾಜಿಕ ಕಾರ್ಯಕರ್ತ ಎಲ್. ಎನ್. ಹಾಜಿ ಇಬ್ರಾಹಿಂ ಸಾಹೇಬ್ ಕೋಟ, ಕುಂದಾಪುರದ ಚರ್ಚ್‌ನ ಧರ್ಮ ಗುರುಗಳಾದ ಅತಿ ವಂದನೀಯ ಫಾದರ್ ಅನಿಲ್ ಡಿಸೋಜ ರವರು ಮುಖ್ಯ ಅತಿಥಿಗಳಾಗಿದ್ದರು.

ಸರ್ವೆಜನಾಃ ಸುಖಿನೋ ಭವಂತು, ಸರ್ವ ಧರ್ಮಗಳ ಶಾಂತಿಯ ನೆಲವೀಡು ನಮ್ಮ ಭಾರತ ಎಂದು ಎಚ್.ವಿ.ನರಸಿಂಹಮೂರ್ತಿಯವರು ಹೇಳಿದರು. ದೇವನೊಬ್ಬನೆ, ನಾಮ ಹಲವು ಸೌಹಾರ್ದತೆಯಲ್ಲಿ ಜೀವನ ಸಾಗಿಸೋಣ ಎಂದು ಹಾಜಿ ಇಬ್ರಾಹಿಂ ಸಾಹೇಬ್ ಕೋಟ ಹೇಳಿದರು. ಶಾಂತಿ ಸೌಹಾರ್ಧತೆಯಿಂದ ಬಾಳಲು ಪರಧರ್ಮ ಸಹಿಷ್ಣುತೆ ಅತೀ ಅಗತ್ಯ ಎಂದು ಅತಿ ವಂದನೀಯ ಫಾದರ್ ಅನಿಲ್ ಡಿಸೋಜಾ ನುಡಿದರು. ರೋಟರಿ ಸನ್‌ರೈಸ್ ಅಧ್ಯಕ್ಷರಾದ ಕೆ. ನರಸಿಂಹ ಹೊಳ್ಳರವರು ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಕುವೆಂಪುರವರ ಚಿಂತನೆಯಂತೆ ವಿಶ್ವ ಮಾನವರಾಗೋಣ ಎಂದರು. ವಲಯ ಒಂದರ ಎಲ್ಲಾ ರೋಟರಿ ಕ್ಲಬ್ ಅಧ್ಯಕ್ಷರು ವೇದಿಕೆಯಲ್ಲಿ ಆಸೀನರಾಗಿದ್ದು ರೋಟರಿ ಕುಂದಾಪುರ ಅಧ್ಯಕ್ಷರಾದ ಉದಯ ಕುಮಾರ ಶೆಟ್ಟಿಯವರು ಸ್ವಾಗತಿಸಿದರು. ರೋಟರಿ ಸಿದ್ಧಾಪುರ ಅಧ್ಯಕ್ಷರಾದ ಪ್ರದೀಪ ಯಡಿಯಾಳ್, ರೋಟರಿ ಮಿಡ್‌ಟೌನ್ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ, ಎಲ್.ಜೆ.ಫೆರ್ನಾಂಡೀಸ್ ಅಥಿತಿಗಳನ್ನು ಪರಿಚಯಿಸಿದರು. ಬೈಂದೂರು ರೋಟರಿ ಅಧ್ಯಕ್ಷರಾದ ಮಂಜುನಾಥ ಶೆಟ್ಟಿ ಮತ್ತು ಕುಂದಾಪುರ ದಕ್ಷಿಣ ರೋಟರಿ ಅಧ್ಯಕ್ಷರಾದ ಒಜಲೀನ್ ರೆಬೆಲ್ಲೊ ಸ್ಮರಣಿಕೆ ನೀಡಿದರು. ವಲಯ ಒಂದರ ಆಸಿಸ್ಟಂಟ್ ಗವರ್ನರ್ ಮಧುಕರ ಹೆಗ್ಡೆ, ವಲಯ ಸೇನಾನಿಗಳಾದ ಹಾಜಿ ಅಬೂಶೇಖ್ ಸಾಹೇಬ್, ಡಾ|| ರವಿಕಿರಣ ಸನ್‌ರೈಸ್ ಕಾರ್ಯದರ್ಶಿ ನಾಗೇಶ್ ನಾವುಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದಿನಕರ ಆರ್.ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು, ದಂಡಪಾಣೆ ಸದಾನಂದ ಉಡುಪ, ಕೆ. ಎಸ್. ಮಂಜುನಾಥ, ಉಲ್ಲಾಸ ಕ್ರಾಸ್ತಾ, ಪ್ರಾಪ್ತಿ ಹೆಗ್ಡೆ ಸಹಕರಿಸಿದರು. ಗಂಗೊಳ್ಳಿ ರೋಟರಿ ಅಧ್ಯಕ್ಷರಾದ ರಾಘವೇಂದ್ರ ಭಂಡಾರ್ಕಾರ್ ವಂದಿಸಿದರು.

Leave a Reply