ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ತೆಕ್ಕಟ್ಟೆ ದಬ್ಬೆಕಟ್ಟೆ ಪ್ರಮುಖ ರಸ್ತೆಯಲ್ಲಿ ಚಲಿಸುತ್ತಿದ್ದ ಬಸ್ನ ಸ್ಟೇರಿಂಗ್ ಎಂಡ್ ಜಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಮೂರು ದ್ವಿಚಕ್ರ ವಾಹನಗಳು ಹಾಗೂ ಸೈಕಲ್ ಜಖಂಗೊಂಡ ಘಟನೆ ನಡೆದಿದೆ.
ಕೊರ್ಗಿಯಿಂದ ಕುಂದಾಪುರದೆಡೆಗೆ ಸಾಗುತ್ತಿದ್ದ ಶ್ರೀ ಮಹಾದೇವಿ ಸರ್ವೀಸ್ ಬಸ್ನ ಸ್ಟೇರಿಂಗ್ ಎಂಡ್ ಜಾರಿ ಹೋಗಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಏಕಾಏಕಿ ಇಲ್ಲಿನ ತೆಕ್ಕಟ್ಟೆ ವಿನಯ ಬಾರ್ ಎದುರಿನಲ್ಲಿ ನಿಲ್ಲಿಸಿದ್ದ 2 ಸೈಕಲ್, ಟಿವಿಎಸ್ ಎಕ್ಸೆಲ್, ಟಿವಿಎಸ್ ಅಪಾಚಿ ಹಾಗೂ ಯಮಹಾ ಲಿಬೆರೋ ಸಹಿತ ಒಟ್ಟು ಮೂರು ದ್ವಿ ಚಕ್ರವಾಹನಗಳು ಬಸ್ನ ಅಡಿಭಾಗದಲ್ಲಿ ಸಿಲುಕಿ ಜಖಂಗೊಳಿಸಿ ಸಮೀಪದಲ್ಲಿರುವ ತೆಂಗಿನ ಮರಕ್ಕೆ ಢಿಕ್ಕಿ ಹೊಡೆದಿತ್ತು. ಬಸ್ನಲ್ಲಿದ್ದ ಮೂವರು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ಕೋಟ ಪೊಲೀಸ್ ಠಾಣಾಧಿಕಾರಿ ರಾಜಗೋಪಾಲ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.