ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹೊನ್ನಾವರದ ಪರೇಶ್ ಮೇಸ್ತ ಅನುಮಾನಾಸ್ಪದ ಸಾವಿಗೆ ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಿ ಕುಂದಾಪುರದ ಕೊಂಕಣಿ ಖಾರ್ವಿ ಸಮಾಜ ಭಾಂದವರು ಇಲ್ಲಿನ ಶ್ರೀ ಮಹಾಕಾಳಿ ದೇವಸ್ಥಾನ ಹಾಗೂ ವಿದ್ಯಾರಂಗ ಮಿತ್ರಮಂಡಳಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಕೊಂಕಣ ಖಾರ್ವಿ ಸಮಾಜದ ಯುವಕನಾದ ಪರೇಶ್ ಮೇಸ್ತನ ಸಾವು ಅನುಮಾನ ಮುಡಿಸುತ್ತಿರುವುದಲ್ಲದೇ ಆತನ ಮರಣೋತ್ತರ ಪರೀಕ್ಷೆ ಸರಿಯಾಗಿ ನಡೆದಿರುವ ಬಗ್ಗೆ ಸಂಶಯವಿದೆ. ಈ ಬಗ್ಗೆ ಮರುಪರಿಶೀಲಿಸಿ ಆತನ ಒದಗಿಸಿಕೊಡಬೇಕೆಂದ ಅವರು ಆಗ್ರಹಿಸಿದರು.
ಕುಂದಾಪುರ ಶ್ರೀ ಮಹಾಕಾಳಿ ದೇವಸ್ಥಾನದಿಂದ ಮೌನ ಮೆರವಣಿಗೆ ಹೊರಟು ಶಾಸ್ತ್ರಿ ವೃತ್ತದಿಂದ ಕುಂದಾಪುರ ಮಿನಿವಿಧಾನಸೌಧಕ್ಕೆ ತೆರಳಿ ತಹಶಿಲ್ದಾರರ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು. ಕೊಂಕಣ ಖಾರ್ವಿ ಸಮಾಜದ ಪ್ರಮುಖರು ಮೌನ ಪ್ರತಿಭಟನಾ ಮೆರವಣಿಗೆಯ ನೇತೃತ್ವ ವಹಿಸಿದ್ದರು.