ನಾವಡರ ‘ಸೇನಾನುಭವ’ ಪುಸ್ತಕ – ಇದು ಸೈನಿಕರೊಬ್ಬರ ಅನುಭವದ ಸಾರ

Call us

Call us

Call us

ನಿವೃತ್ತ ಸೈನಿಕ, ಲೇಖಕ ಚಂದ್ರಶೇಖರ ನಾವಡ ಅವರು ಇತ್ತಿಚೆಗೆ ತಮ್ಮ ಎಲ್ಲ ಅನುಭವದ ಸಾರವನ್ನು ಒಟ್ಟುಗೂಡಿಸಿ ‘ಸೇನಾನುಭವ’ ಎನ್ನುವ ಪುಸ್ತಕವನ್ನು ಹೊರ ತಂದಿದ್ದಾರೆ. ಸರಳ ಭಾಷೆಯಲ್ಲಿ ಬರೆದಿರುವ ಈ ಪುಸ್ತಕ ಎಂತವರನ್ನು ಸುಲಭವಾಗಿ ಆಕರ್ಷಿಸಿ ಓದಿಸಿಕೊಂಡು ಹೋಗುತ್ತದೆ. ‘ಕಠಿಣ ಪಥದ ರೋಮಾಂಚಕಾರಿ ಪಯಣ’ ಎಂದು ಪುಸ್ತಕದ ಟೈಟಲ್’ನಲ್ಲಿ ನಮೂದಿಸಿದಂತೆ ನಾವಡರು ತಮ್ಮ ಸೇನಾ ದಿನಗಳ ಶಿಸ್ತು, ಕಠಿಣ ಪರಿಶ್ರಮವನ್ನು ಮನಮುಟ್ಟುವಂತೆ ವಿವರಿಸಿದ್ದಾರೆ.

Call us

Click Here

ಉಡುಪಿ ಜಿಲ್ಲೆಯ ಬೈಂದೂರಿನ ರಾಮ ನಾವಡ ಮತ್ತು ಗೋದಾವರಿ ದಂಪತಿಗಳ ಪುತ್ರನಾಗಿ ಜನಿಸಿದ(1965) ಚಂದ್ರಶೇಖರ ನಾವಡರು ಬಿಎ ಪದವೀಧರರು. ಇವರು ಭಾರತೀಯ ಸೇನೆಯ ಶಿಕ್ಷಣ ವಿಭಾಗದಲ್ಲಿ ಸೇರ್ಪಡೆಗೊಂಡು ಸೇನೆಯ ವಿವಿಧ ಪಡೆಗಳಲ್ಲಿ ಸೇವೆಯನ್ನು ನಿರ್ವಹಿಸಿದ್ದಾರೆ. 2010ರಲ್ಲಿ ಜಮ್ಮು ಕಾಶ್ಮೀರ ಲೈಟ್ ಇನ್ಫಟ್ರಿ ಬಟಾಲಿಯನ್ನೊಂದಿಗೆ ವಿಶ್ವ ಸಂಸ್ಥೆಯ ಶಾಂತಿಪಾಲನಾ ಪಡೆಯ ಭಾಗವಾಗಿ ಆಪ್ರಿಕಾದ ಕಾಂಗೊ ಗಣರಾಜ್ಯದಲ್ಲಿ ಸೇವೆ ಸಲ್ಲಿಸಿದ ಹಿರಿಮೆ ಇವರದ್ದು. 2012ರಲ್ಲಿ ಸೇನೆಯಿಂದ ಸ್ವಯಂ ನಿವೃತ್ತಿ ಪಡೆದು ಪ್ರಸ್ತುತ ಯೂನಿಯನ್ ಬ್ಯಾಂಕ್ನದಲ್ಲಿ ಸೇವೆ ಸಲ್ಲಿಸುತ್ತಿದ್ದು ಪತ್ರಿಕೆಗಳಲ್ಲಿ ಅಂಕಣ ಬರಹಗಳ ಮೂಲಕ ಜನರಲ್ಲಿ ದೇಶಪ್ರೇಮ, ಸೈನ್ಯ ಹಾಗೂ ಸಾಮಾಜಿಕ ವಿಚಾರಗಳ ಕುರಿತು ಬೆಳಕು ಚೆಲ್ಲುವ ಕಾರ್ಯ ಮಾಡುತ್ತಿದ್ದಾರೆ. ನನಗೆ ನಾವಡರ ಪರಿಚಯವಾಗಿದ್ದು ಅವರ ಬರಹಗಳನ್ನು ಪತ್ರಿಕೆಗಳಲ್ಲಿ ಓದಿದ ಮೇಲೆ. ಅವರೊಂತರ ಸ್ನೇಹ ಜೀವಿ, ಮಾರ್ಗದರ್ಶಕರು ಎಲ್ಲವೂ ಹೌದು. ಅವರೊಬ್ಬ ಮಾಜಿ ಸೈನಿಕರಲ್ಲದೆ, ಅವರೊಳಗೊಬ್ಬ ಪತ್ರಕರ್ತ, ಲೇಖಕ, ಚಿಂತಕ ಎಲ್ಲರೂ ಇದ್ದಾರೆ ಎಂದರೆ ತಪ್ಪಾಗಲಾರದು.

ಸೇನೆಯ ಶಿಕ್ಷಣ ವಿಭಾಗದಲ್ಲಿ ಸೇವೆ ಸಲ್ಲಿಸಿದ ನಾವಡರು ಸಮಾಜದಲ್ಲಿ ಶಿಕ್ಷರ ಗೌರವ ಕಡಿಮೆಯಾಗುತ್ತಿದೆ ಎನ್ನುವ ಇಂದಿನ ದಿನಗಳಲ್ಲಿ ಸೈನ್ಯ ಶಿಕ್ಷಕರಂತೆ ಕಠಿಣ ಶಿಸ್ತು, ಅಧ್ಯಯನಶೀಲತೆ, ಸದಾಚಾರ, ಸವಿನಯಗಳನ್ನು ಅನುಸರಿಸಿದರೆ ಶಿಕ್ಷಕರು ತಮ್ಮ ಸ್ಥಾನಮಾನಗಳನ್ನು ಹೆಚ್ಚಿಸಿಕೊಳ್ಳುವುದರಲ್ಲಿ ಸಂದೇಹವಿಲ್ಲ ಎನ್ನುತ್ತಾರೆ.

ಪಾಕಿಸ್ತಾನದಂತಹ ಕುಟಿಲ ಶತ್ರುವಿನ ಜೊತೆಯಲ್ಲಿ ಚಳಿ ಮಳೆ ಬಿರು ಬಿಸಿಲಿನ ಜೊತೆ ನೈಸರ್ಗಿಕ ವಿಕೋಪಗಳನ್ನು ಎದುರಿಸಬೇಕಾದ ಸೈನಿಕನ ಜೀವನವೇ ಒಂದು ತಪಸ್ಸು ಎನ್ನುವ ಮಾತನ್ನು ಒಂದು ಕಡೆ ಹೇಳುತ್ತಾರೆ.

ತಮ್ಮ ಸೇನಾ ಕ್ಯಾಂಪ್ನರಲ್ಲಿ ಎಲ್ಲೊ ಒಂದು ಕನ್ನಡದ ನುಡಿ ಕೇಳಿದರೂ ಕಿವಿ ಚುರುಕಾಗುತ್ತಿತ್ತು ಕಾಶ್ಮೀರದ ಯಾವುದೊ ಗುಡ್ಡದಲ್ಲಿ ಬಿದ್ದಿದ್ದ ಗಣೇಶ ಬೀಡಿಯ ರೆಪರ್ನಲ್ಲಿ ಕನ್ನಡದ ಅಕ್ಷರಗಳನ್ನು ನೋಡಿ ಆದಂತ ಸಂತೋಷ ಅವರ್ಣನೀಯ ಎಂದು ತಾಯಿನಾಡಿನ ಪ್ರೀತಿಯ ಕುರಿತು ಒಂದು ಉದಾಹರಣೆ ನೀಡುತ್ತಾರೆ. ಅಲ್ಲದೆ ಸೇನೆಯಲ್ಲಿ ಸಿಖ್ಖರ ಧೈರ್ಯ ಸಾಹಸಗಳನ್ನು ಕೊಂಡಾಡಿದ್ದಾರೆ.

Click here

Click here

Click here

Click Here

Call us

Call us

ಸೇನೆಯೆಂದರೆ ಬರಿ ಯುದ್ಧ, ಮುದ್ದು ಗುಂಡುಗಳೊಂದಿಗೆ ಕಾದಾಡುವುದಲ್ಲ ಜೊತೆಗೆ ಸೇನೆಯಲ್ಲಿ ವೈದ್ಯ, ಶಿಕ್ಷಕ, ಅಡುಗೆಯವರು ಅಲ್ಲದೆ ಬೇರೆ ಬೇರೆ ತಾಂತ್ರಿಕ ಹುದ್ದೆಗಳು ಭಾರತೀಯ ಸೇನೆಯಲ್ಲಿದ್ದು ನಮ್ಮ ಸುಶಿಕ್ಷಿತ ಯುವಕರು ಸೇನೆಗೆ ಸೇರಲು ಮುಂದೆ ಬರಬೇಕು ಎನ್ನುತ್ತಾರೆ. ಅಲ್ಲದೆ ಸೇನೆಯ ವಿವಿಧ ವಿಭಾಗಗಳು ವಿವಿಧ ಉದ್ಯೋಗಾವಕಾಶಗಳ ಕುರಿತು ಪುಸ್ತಕದಲ್ಲಿ ವಿವರಿಸಿದ್ದಾರೆ. ಹಾಗೂ ಈಗಾಗಲೇ ವಿವಿಧ ಹುದ್ದೆಗಳಲ್ಲಿದ್ದವರು ಹಾಗೂ ಸ್ವ ಉದ್ಯೋಗ ಮಾಡಿಕೊಂಡು ಈಗಲೂ ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂಬ ಬಯಕೆ ಇರುವವರು 18ರಿಂದ 42 ವಯಸ್ಸಿನವರು ಪ್ರಾದೇಶಿಕ ಸೇನೆಯಲ್ಲಿ ಕಮಿಷನ್ಡ್ ಅಧಿಕಾರಿಗಳಾಗಿ ಸೇವೆ ಸಲ್ಲಿಸುವ ಅವಕಾಶವಿದ್ದು ಈ ಎಲ್ಲದರ ಸಂಪೂರ್ಣ ಮಾಹಿತಿಯನ್ನು ಅವರು ಪುಸ್ತಕದಲ್ಲಿ ತೆರೆದಿಟ್ಟಿದ್ದಾರೆ.

ಸೈನ್ಯದಲ್ಲಿ ವಿವಿಧತೆಯಲ್ಲಿ ಏಕತೆ ಕುರಿತು ಮಾತನಾಡುತ್ತಾ ಕರ್ತವ್ಯ ಮತ್ತು ದೇಶ ಹಿತದ ಮುಂದೆ ಧಾರ್ಮಿಕತೆ ಮತ್ತಿತರ ವಿಚಾರಗಳು ಗೌಣವಾಗಿ ಬಿಡುತ್ತದೆ ದೇಶ ರಕ್ಷಣೆ ಭಾರತೀಯ ಉದಾತ್ತ ಆದರ್ಶಗಳ ಮುಂದೆ ಅವರಲ್ಲಿರುವ ಪ್ರಾಂತಿಯ ಸಂಕುಚಿತ ಭಾವನೆಗಳೆಲ್ಲ ಸಮಾಧಾಯಾಗಿ ಬಿಡುತ್ತದೆ ಭ್ರಾತೃತ್ವದ ಹೊಸ ಬಂಧನದಲ್ಲಿ ಅವರೆಲ್ಲ ಬಂಧಿಸಲ್ಪಡುತ್ತಾರೆ. ಪ್ರತಿಯೊಬ್ಬರ ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತ ಸದಾ ಅಣ್ಣ ತಮ್ಮಂದಿರಂತೆ ಬದುಕುತ್ತಿರುವ ಸೈನಿಕರ ಈ ಶಿಸ್ತು ಸೌಹಾರ್ದತೆ ಸೇನೆಯ ಹೊರಗೆ ದೇಶದ ಪ್ರಜೆಗಳಲ್ಲಿ ಸಾಧ್ಯವಿಲ್ಲವೇಕೆ ಎಂದು ಪ್ರಶ್ನಿಸಿದ್ದಾರೆ ನಾವಡರು.

ಅಲ್ಲದೆ ಯುದ್ಧೋತ್ಸಹದಲ್ಲಿರುವ ಇಂದಿನ ಯುವಕರಿಗೆ ಯುದ್ದವೆಂದರೆ ಆಟವಲ್ಲ ಎಂಬ ಮಾತನ್ನು ಹೇಳುತ್ತಾರೆ. ಗಡಿಯಲ್ಲಿ ನಿಯೋಜನೆಗೊಂಡಿರುವ ಸೈನಿಕರು ಹಾಗೂ ಅಲ್ಲಿ ತಲೆತಲಾಂತರದಿಂದ ಬದುಕುತ್ತಿರುವ ಜನರ ಭಯದ ಬದುಕಿನ ಅನುಭವ ಎಲ್ಲೊ ದೂರದಲ್ಲಿ ಹಾಯಾಗಿ ತಿಂದುಂಡು ಮಲಗಿದವರಿಗೆ ಹೇಗೆ ತಿಳಿಯಲು ಸಾಧ್ಯ ಎನ್ನುತ್ತಾರೆ.

ಸೈನಿಕರು ದೇಶದ ನಾಗರೀಕರೆ ಆಗಿದ್ದರೂ ನಾಗರೀಕರಿಗಿರುವ ಸ್ವಾತಂತ್ರ್ಯ ಸೈನಿಕರಿಗಿಲ್ಲ ಸಾಮಾನ್ಯ ಪ್ರಜೆಗಳಿಗಿರುವ ಮೂಲಭೂತ ಹಕ್ಕುಗಳ ಗ್ಯಾರಂಟಿ ಕೂಡ ಇಲ್ಲ ತಮಗಾದ ನೋವು ಅವಮಾನಗಳನ್ನು ತಮ್ಮೊಳಗೆ ಸಹಿಸಾಕೊಳ್ಳಬೇಕಾದ ಪಾಡು ಸೈನಿಕನದ್ದು ಹೀಗಿರುವಾಗ ಬೇರೆ ವೃತ್ತಿಪರರಿಗೆ ಇಷ್ಟು ಸರಸಾಗಾಟಗಿ ಟೀಕೆ ಅವಮಾನಗಳು ಬಂದಿದ್ದರೆ ಅದರ ಪರಿಣಾಮವೇ ಬೇರೆ ಇರುತ್ತಿತ್ತೇನೊ ಎಂದು ಬೇಸರ ವ್ಯಕ್ತಪಡಿಸುತ್ತಾರೆ. ಅಂತದ್ರಲ್ಲಿ ಇವತ್ತು ಹಿರಿಯರು ತಂದುಕೊಟ್ಟ ಸ್ವಾತಂತ್ರ್ಯದ ತ್ಯಾಗ ಬಲಿದಾನವನ್ನು ಮರೆತು ಜಾತಿ ಮತ ಭಾಷೆಗಳ ಹೆಸರಿನಲ್ಲಿ ಕಿತ್ತಾಡುತ್ತಿದ್ದಾರೆ ಯಾವ ಒಂದೇ ಮಾತರಂ ನಮ್ಮನು ಒಂದುಗೂಡಿಸಿತ್ತೊ ಅದನ್ನು ಹೇಳಲು ಹಿಂಜರಿಯುತ್ತಿದ್ದಾರೆ. ರಾಜಕಾರಣಿಳು ಓಟ್ ಬ್ಯಾಂಕಿಗಾಗಿ ಒಡೆದು ಆಳುತ್ತಿದ್ದಾರೆ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸದಾ ಸೇನೆಯ ಕುರಿತು ಒಂದಿಲ್ಲೊಂದು ಅಗೌರವದ ಹೇಳಿಕೆಗಳನ್ನು ನೀಡುವ ರಾಜಕಾರಣಿಗಳಿಗೆ, ಹಾಗೂ ಬುದ್ಧಿ ಜೀವಿಗಳಿಗೆ ತಮ್ಮ ಮೊನಚು ನುಡಿಗಳ ಮೂಲಕ ಚೆನ್ನಾಗಿ ಚಾಟಿಯೇಟು ಬೀಸಿದ್ದಾರೆ.

ದೇಶದ ವಿರುದ್ಧ ಘೋಷಣೆ ಕೂಗುತ್ತ, ಸೈನಿಕರ ಮೇಲೆ ಕಲ್ಲು ತೂರಾಟ ಮಾಡುವ ದೇಶ ದ್ರೋಹಿಗಳ ಎದುರು ಕಾನೂನು ಅಸಹಾಯಕ ವಾಗಬೇಕೇ? ಎಂದು ಪ್ರಶ್ನಿಸಿದ್ದಾರೆ ನಾವಡರು. ಸ್ವಾತಂತ್ರ್ಯ ಮತ್ತು ಸ್ವಚ್ಚಂದತೆಯ ನಡುವಿನ ವ್ಯತ್ಯಾಸವನ್ನು ತಿಳಿಯಲು ಸಮಾಜದ ಒಂದು ವರ್ಗ ವಿಪಲವಾಗಿದೆ ಸಂವಿಧಾನ, ಸರ್ಕಾರದ ಮುಖ್ಯಸ್ಥರು ಸೇನೆಯ ಕುರಿತಾಗಿ ಕೀಳಾಗಿ ಮಾತನಾಡುವುದು, ಘೋಷಣೆ ಕೂಗುವುದು ಸ್ವಾತಂತ್ರ್ಯದ ಪರಿಧಿಯಲ್ಲಿ ಬರುವುದಿಲ್ಲ ಎಂಬುದನ್ನು ತಿಳಿ ಹೇಳಿದ್ದಾರೆ. ಯಾರು ದೇಶಕ್ಕಾಗಿ ಜೀವಿಸುತ್ತಾರೊ ಅವರೇ ನಿಜವಾದ ಹೀರೊಗಳು ಎನ್ನುವುದನ್ನು ಈ ಪುಸ್ತಕದಲ್ಲಿ ತುಂಬಾ ಚೆನ್ನಾಗಿ ವಿವರಿಸಿದ್ದಾರೆ. ದೇಶ ನನಗೇನು ಕೊಟ್ಟಿದೆ ಎನ್ನುವುದಕ್ಕಿಂತ ದೇಶಕ್ಕಾಗಿ ನಾನೇನು ನೀಡಿದೆ ಎಂದು ಚಿಂತಿಸುವುದನ್ನು ನಮ್ಮ ಯುವ ಪೀಳಿಗೆಗೆ ಶಿಕ್ಷಕರು, ಪೋಷಕರು, ಹಿರಿಯರು, ಚಿಂತಕರು ಹೇಳಿಕೊಡಬೇಕು ಎನ್ನುವುದು ನಾವಡರ ಕಳಕಳಿ. ಆರ್ಟಿಕಲ್ 370 ರದ್ದು ಒಂದು ದಿಟ್ಟ ನಿರ್ಧಾರ ಎಂದು ಸ್ವಾಗತಿಸಿ ಈ ಕುರಿತು ಒಂದಿಷ್ಟು ವಿವರಣೆಗಳನ್ನು ನೀಡಿದ್ದಾರೆ. 1949 ರ ಜನವರಿ 15ರಂದು ಬ್ರಿಟಿಷ್ ಸೇನಾ ಮುಖ್ಯಸ್ಥ ಜನರಲ್ ಸರ್ ಫ್ರಾನ್ಸಿಸ್ ಬೂಚರ್ರಿಂದ ಅಧಿಕಾರ ಸ್ವೀಕರಿಸಿದ ಜನರಲ್ ಕಾರ್ಯಪ್ಪನವರನ್ನು ಕಾಯ ಅಳಿದರೂ ಕೀರ್ತಿ ಅಳಿಯದ ಮಹಾನ್ ಸೇನಾ ನಾಯಕ ಎಂದು ಕರೆದಿದ್ದಾರೆ

ಸೈನಿಕ ಸಮ್ಮಾನ ಪುನರ್ವಸತಿ ಅನುಭವದ ಸದ್ಬಳಕೆ ನಿವೃತ್ತ ಸೈನಿಕರ ಸಮಸ್ಯೆಗಳ ಕುರಿತು ವಿವರಿಸುತ್ತ ಸೈನಿಕರ ಗೌರವಿಸಿ ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕಾದದ್ದು ನಾಗರೀಕ ಸಮಾಜದ ಜವಾಬ್ದಾರಿ ಎಂದಿದ್ದಾರೆ. ಸೈನಿಕ ಕಲ್ಯಾಣ ಇಲಾಖೆ ಇರುವುದು ಮಾಜಿ ಸೈನಿಕರಿಗೆ ಸಹಾಯ ಮಾಡಲು ಸರ್ಕಾರ ಕನ್ನಡಿಗರಾದ ಮಾಜಿ ಸೈನಿಕರನ್ನು ಇಲಾಖೆಯ ನಿರ್ದೇಶಕ, ಉಪ ನಿರ್ದೇಶಕ ಹುದ್ದೆಗೆ ಪರಿಗಣಿಸಬೇಕು ನೌಕರಿ, ಸಹಾಯ ಸಹಕಾರ ಬಯಸಿ ಬರುವ ಮಾಜಿ ಸೈನಿಕರಿಗೆ ಇಲಾಖೆಯಿಂದ ಸಕಾಲದಲ್ಲಿ ನೆರವು ಸಿಗಬೇಕೆಂಬುದು ನಾವಡರ ಕಳಕಳಿ.

ರವಿರಾಜ್ ಬೈಂದೂರು

ಒಟ್ಟಿನಲ್ಲಿ ಮಾಜಿ ಸೈನಿಕರಾದ ಬೈಂದೂರು ಚಂದ್ರಶೇಖರ ನಾವಡರ ಪುಸ್ತಕದಲ್ಲಿ ಸ್ವಂತ ಸೈನಿಕ ಜೀವನಾನುಭವದ ಸಾರವೇ ಇದೆ ತಮ್ಮ ಸೇವಾವಧಿಯಲ್ಲಿನ ನೋವು ನಲಿವು ಹಾಗೂ ಸುಂದರ ಅನುಭವಗಳನ್ನು ಸ್ವತಃ ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ ಸುಂದರ ಮುಖಪುಟದ ಪುಸ್ತಕದ ಅಂದವನ್ನು ಬೆಳಗೋಡು ರಮೇಶ್ ಭಟ್ಟರ ಮುನ್ನುಡಿಯು ಮತ್ತಷ್ಟು ಹೆಚ್ಚಿಸಿದೆ. ಸೈನಿಕರಾಗಬಯಸುವವರಿಗೆ, ಸೈನ್ಯ ಸೈನಿಕರ ಬಗ್ಗೆ ಒಂದಿಷ್ಟು ತಿಳಿದುಕೊಳ್ಳಬೇಕು ಎನ್ನುವವರಿಗೆ, ಇದೊಂದು ಉತ್ತಮ ಪುಸ್ತಕ. ನಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆಯಾಗಿ ನೀಡುವುದಕ್ಕೆ, ನಿಮ್ಮ ಮಕ್ಕಳಿಗೆ ದೇಶ ಪ್ರೇಮ ಹಾಗೂ ಓದುವ ಹವ್ಯಾಸ ಬೆಳೆಸಲು ಇಂತಹ ಪುಸ್ತಕಗಳು ಸಹಕಾರಿ. ಒಂದು ಸಮಾಜನ ಬದ್ಲಾಯಿಸ್ಬೇಕು ಆ ಸಮಾಜನ ಮುಂದೆ ತರಬೇಕು ಎನ್ನುವ ಮನಸ್ಥಿತಿ ಇದ್ರೆ ಆ ಸಮಾಜದ ಯುವಕರಗಳ ಕೈಯಲ್ಲಿ ಬಾವುಟಗಳನ್ನಲ್ಲ ಪುಸ್ತಕಗಳನ್ನು ಕೊಡ್ಬೇಕು ಎನ್ನುವ ಮಾತು ಈ ಪುಸ್ತಕ ಓದಿದ ಮೇಲೆ ಮತ್ತೆ ನೆನಪಾಗುತ್ತಿದೆ. ಈ ಪುಸ್ತಕ ಹೈಸ್ಕೂಲ್ ಹಾಗೂ ಕಾಲೇಜು ಮಕ್ಕಳಿಗೆ ಒಂದು ಮಾರ್ಗದರ್ಶನದ ಕೈಪಿಡಿ ಇದ್ದಂತಿದೆ. ಶಿಕ್ಷಕರು, ಪಾಲಕರು ಇಂತ ಪುಸ್ತಕಗಳನ್ನು ಕೊಂಡು ಓದುಲು ತಮ್ಮ ಮಕ್ಕಳನ್ನು ಉತ್ತೇಜಿಸಬೇಕು.

ಸೇನಾನುಭವ ಪುಸ್ತಕದ ಬೆಲೆ ಕೇವಲ -150 ಈ ಕೃತಿ ಬೈಂದೂರಿನ ಪ್ರಮುಖ ಪುಸ್ತಕದ ಅಂಗಡಿಗಳಲ್ಲಿ ಲಭ್ಯವಿದ್ದು ಬೈಂದೂರಿನ ಹೊರಗಿನ ಆಸಕ್ತ ಓದುಗರಿಗೆ ಗೂಗಲ್ ಅಥವಾ ಫೋನ್ ಪೇ ನಲ್ಲಿ ಹಣ ಪಾವತಿಸಿ, ತಿಳಿಸಿದರೆ ಅಂಚೆ ಮೂಲಕ ಪುಸ್ತಕ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಬೈಂದೂರು ಚಂದ್ರಶೇಖರ ನಾವಡರು ತಿಳಿಸಿದ್ದಾರೆ. ಮೊಬೈಲ್ ಸಂಖ್ಯೆ – 8762124699

ರವಿರಾಜ್ ಬೈಂದೂರು

 

 

Leave a Reply