ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬಸ್ರೂರು ವಿಲಾಸಕೇರಿ ದಿ.ಗೋಪಾಲಕೃಷ್ಣ ಶೆಣೈ ಇವರ ಮನೆಗೆ ‘ಸ್ವರಾಜ್ಯ 75’ರ ಕಾಯ೯ಕ್ರಮ ದಡಿಯಲ್ಲಿ ‘ಸ್ವಾತಂತ್ರ್ಯ ಹೋರಾಟಗಾರರ ಮನೆ’ ಎನ್ನುವ ನಾಮ ಫಲಕವನ್ನು ಸ್ವಾತಂತ್ರ್ಯ ದಿನದಂದು ಶಿವಮೊಗ್ಗ ಚಾಟ೯ರ್ಡ್ ಇಂಜಿನಿಯರ್ ಅಜಯ್ ಕುಮಾರ್ ಶಮಾ೯ ಅವರು ನಾಮಫಲಕ ಅನಾವರಣಗೊಳಿಸಿದರು.
ಸಂಪನ್ಮೂಲ ವ್ಯಕ್ತಿ ಬಸ್ರೂರು ಶ್ರೀ ಶಾರದಾ ಕಾಲೇಜು ಉಪನ್ಯಾಸಕರಾದ ಅಕ್ಷಯ್ ಹೆಗ್ಡೆ ‘ಭಾರತದ ಸ್ವಾತಂತ್ರ್ಯಕ್ಕೆ ಕರಾವಳಿಗರ ಕೊಡುಗೆ’ ಎನ್ನುವ ವಿಚಾರವನ್ನು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಬಿ.ಎಸ್.ಎಫ್ ನಿವೃತ್ತ ಮಾಜಿ ಸೈನಿಕರಾದ ಗಣಪತಿ ಖಾವಿ೯, ಸ್ವಾತಂತ್ರ್ಯ ಹೋರಾಟಗಾರರ ಮೊಮ್ಮಗ ಅಶೋಕ್ ಕಾಮತ್ ಉಪಸ್ಥಿತರಿದ್ದರು.
ವಿಳ್ಯದೆಲೆ ನೀಡುವುದರ ಮೂಲಕ ಸಂಚಾಲಕರಾದ ಪ್ರದೀಪ ಕುಮಾರ್ ಬಸ್ರೂರು ಕಾಯ೯ಕ್ರಮ ಆರಂಭಿಸಿದರು. ಖ್ಯಾತ ಬರಹಗಾರ ವಸಂತ ಗಿಳಿಯಾರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಶೋಕ್ ಕೆರೆಕಟ್ಟೆ ಧನ್ಯವಾದಗೈದರು.