ತಲ್ಲೂರು: ರಕ್ತದಾನ ಶಿಬಿರದಲ್ಲಿ 165 ಯೂನಿಟ್ ರಸ್ತ ಸಂಗ್ರಹ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕನ್ಯಾನ ಬಾಡಬೆಟ್ಟು ಶ್ರೀ ಶನೀಶ್ವರ ಮತ್ತು ಶ್ರೀ ಚೌಡೇಶ್ವರಿ ಟ್ರಸ್ಟ್ ನೇತೃತ್ವದಲ್ಲಿ ಮಣಿಪಾಲ ಕೆಎಂಸಿ ರಕ್ತನಿಧಿ ವಿಭಾಗ ಹಾಗೂ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಸಹಕಾರದೊಂದಿಗೆ ತಲ್ಲೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅ.21ರಂದು ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಕುಂದಾಪುರ ಮನೀಶ್ ಆಸ್ಪತ್ರೆಯ ಹೆರಿಗೆ ಮತ್ತು ಸ್ತ್ರೀ ತಜ್ಞೆ ಡಾ. ಪ್ರಮೀಳಾ ನಾಯಕ್ ಉದ್ಘಾಟಿಸಿದರು.

Call us

Click Here

ವಕೀಲರಾದ ಟಿ.ಬಿ. ಶೆಟ್ಟಿ, ಶ್ರಿ ಶನಿಶ್ವರ ಮತ್ತು ಚೌಡೇಶ್ವರಿ ದೇವಸ್ಥಾನ ಬಾಡಬೆಟ್ಟು ಕನ್ಯಾನದ ಧರ್ಮದರ್ಶಿಗಳಾದ ಜಯರಾಮ, ಹಟ್ಟಿಯಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಡಾ.ರಂಗನಾಥ್ ವೈ ಪಿ., ತಲ್ಲೂರು ಗ್ರಾಪಂ ಅಧ್ಯಕ್ಷೆ ಭೀಮವ್ವ, ಸದಸ್ಯರಾದ ಉದಯಕುಮಾರ್ ತಲ್ಲೂರು, ರಕ್ತದ ಆಪತ್ಭಾಂಧವ ಸತೀಶ್ ಸಾಲ್ಯಾನ್, ರಕ್ತದಾನ ಶಿಬಿರದ ಆಯೋಜಕರಾದ ಪ್ರಶಾಂತ್ ತಲ್ಲೂರು ಹಾಗೂ ಅರವಿಂದ್ ಉಪ್ಪಿನಕುದ್ರು ಉಪಸ್ಥಿತ್ತರಿದ್ದರು.

ಈ ಸಂದರ್ಭದಲ್ಲಿ ರಕ್ತದಾನಿಗಾದ ವಿಜಯ್ ಕುಂದಾಪುರ, ಚೇತನ್ ಖಾರ್ವಿ ಹಾಗೂ ಕರಣ ಉಪ್ಪಿನಕುದ್ರು ಅವರನ್ನು ಸನ್ಮಾನಿಸಲಾಯಿತು.

ಅರುಣ್ ಉಪ್ಪಿನಕುದ್ರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವಿಶ್ವನಾಥ್ ಉಪ್ಪಿನಕುದ್ರು ಧನ್ಯವಾದ ಅರ್ಪಿಸಿದರು. ರಕ್ತದಾನ ಶಿಬಿರದಲ್ಲಿ 165 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.

Leave a Reply