ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಆ.24: ಸೈಂಟ್ ಕ್ಷೇವಿಯರ್ ಆಂಗ್ಲ ಮಾದ್ಯಮ ಸ್ಕೂಲ್ ಉದ್ಯಾವರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಡೆದ ಜಿಲ್ಲಾ ಮಟ್ಟದ ಚದುರಂಗ ಸ್ಪರ್ದೆಯಲ್ಲಿ ಕುಂದಾಪುರದ ಶ್ರೀ ಸಿದ್ಧಿವಿನಾಯಕ ಚೆಸ್ ಅಕಾಡೆಮಿಯ ಒಂಬತ್ತು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ ಆಗಿದ್ದಾರೆ.
ವಿದ್ಯಾರ್ಥಿಗಳಾದ ಯಶಸ್ವಿ ಪೂಜಾರಿ, ವರ್ನಿತ ಕುಂದರ್, ಜೋಷ್ವಿನ್, ಶ್ರೀದನ್ ಇವರೆಲ್ಲ ಹೈಸ್ಕೂಲ್ ವಿಭಾಗದಲ್ಲಿ ಶ್ರಾವ್ಯ, ಜೋಶ್ವಿನ್, ನಮಿಶ್ ಪೂಜಾರಿ, ಪ್ರದ್ಯುಮ್ನ ಅಡಿಗ, ವರ್ಷಿನಿ ಕುಂದರ್ ಪ್ರೈಮರಿ ವಿಭಾಗದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ.