ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಆಯೋಜಿಸಲಾಗಿದ್ದ ಉಡುಪಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಉಪ್ಪುಂದ ಕಂಚಿಕಾನು ನಿವಾಸಿ ಮಂಜುನಾಥ ದೇವಾಡಿಗ ಭಾಗವಹಿಸಿ, ಮೈಸೂರಿನಲ್ಲಿ ನಡೆಯಲಿರುವ ವಿಭಾಗ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾನೆ.
ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ 100ಮೀ ಓಟದಲ್ಲಿ ದ್ವಿತೀಯ ಹಾಗೂ 200ಮೀ ಓಟದಲ್ಲಿ ತೃತೀಯ ಬಹುಮಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುವ ಮಂಜುನಾಥ್, ಬೈಂದೂರು ನೇಷನ್ ಲವರ್ಸ್ ಸಂಸ್ಥೆಯ ಸದಸ್ಯನಾಗಿದ್ದಾನೆ. ಈತ ಕಂಚಿಕಾನು ಪರಮೇಶ್ವರ ದೇವಾಡಿಗ ಹಾಗೂ ಚಿಕ್ಕು ದಂಪತಿಗಳ ಪುತ್ರ.