ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಮ್ಮ ಕುಂದಾಪ್ರ ಕನ್ನಡ ಬಳಗದ ವತಿಯಿಂದ ಕಾಲಿನ ಕ್ಯಾನ್ಸರ್ ನಿಂದ ಬಳಲುತಿದ್ದ ಪ್ರತಿಭಾವಂತ ವಿದ್ಯಾರ್ಥಿ ಸುಮಿತ್ ವೆಂಕಟರಮಣ ಮೊಗೇರ ತೆಂಗಿನಗುಂಡಿ ಅವರಿಗೆ 60 ಸಾವಿರ ರುಪಾಯಿ ಚೆಕ್ ಹಸ್ತಾಂತರಿಸಲಾಯಿತು.
ಈ ಸಂಧರ್ಭದಲ್ಲಿ ನಮ್ಮ ಕುಂದಾಪ್ರ ಕನ್ನಡ ಬಳಗದ ಅಧ್ಯಕ್ಷ ಸಾದನ್ ದಾಸ್, ಸದಸ್ಯರಾದ ವಾಸುದೇವ ದೇವಾಡಿಗ, ರತನ್ ನಾವುಂದ, ಅರುಣ್ ಕುಮಾರ್ ಶಿರೂರು ಹಾಗೂ ವಿದ್ಯಾರ್ಥಿಯ ಪೋಷಕರು ಹಾಜರಿದ್ದರು