ಕುಂದಾಪುರ: ಜಿಲ್ಲಾ ಮಟ್ಟದ ‘ಅಂಬೇಡ್ಕರ್ ಓದು’ ಅಭಿಯಾನ ಸಮಾರೋಪ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಮಾಜದ ಕೆಲವೇ ವರ್ಗದವರ ಪರವಾಗಿರದೇ ಸಮಾಜದ ಎಲ್ಲಾ ವರ್ಗದ ಜನರ ದನಿಯಾಗಿ, ನಿರಂತರ ಶ್ರಮವರಿಯದ ಸಮರೋಪಾದಿಯ ಹೋರಾಟ ಮಾಡಿದರು. ಅದರ ಫಲವೇ ನಮ್ಮ ಈ ಸಂವಿಧಾನ. ಅದನ್ನು ಜತನದಿಂದ ರಕ್ಷಿಸುವುದು ಇಂದಿನ ತುರ್ತು ಆಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಉಡುಪಿ ಜಿಲ್ಲೆಯ ಸಂಘಟನಾ ಸಂಚಾಲಕ ವಾಸುದೇವ ಮುದೂರು ಅಭಿಪ್ರಾಯಪಟ್ಟರು.

Call us

Click Here

ಅವರು ಈ ಶೈಕ್ಷಣಿಕ ವರ್ಷದುದ್ದಕ್ಕೂ ನಡೆದ ಜಿಲ್ಲಾ ಮಟ್ಟದ “ಅಂಬೇಡ್ಕರ್ ಓದು” ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಧೇಶಿಸಿ ಮಾತನಾಡಿದರು.

ಕಳೆದ ವರ್ಷ ಅಂಬೇಡ್ಕರ್ ಜಯಂತಿಯಂದು ಅಂಬೇಡ್ಕರ್ ಭಾವಚಿತ್ರ ಹಸ್ತಾಂತರದೊಂದಿಗೆ ಆರಂಭವಾದ ಈ ಕಾರ್ಯಕ್ರಮ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಅವರ ಜೀವನದ ಕುರಿತಾದ ಯಾವುದೇ ಒಂದು ಮಹತ್ವದ ಘಟನೆಯನ್ನು ಆಧರಿಸಿದ ವೀಡಿಯೋ ಭಾಷಣ, ಜೈ ಭೀಮ್ ಕ್ವಿಜ್, ಪೋಸ್ಟರ್ ರಚನೆ, ಸಂವಿಧಾನ ಪ್ರಸ್ತಾವನೆಯ ಸಮೂಹಗಾನ, ಅಂಬೇಡ್ಕರ್ ಹಾಗೂ ಅವರಿಗೆ ಸಂಬಂಧಿಸಿದ ಯಾವುದೇ ಘಟನೆಯನ್ನು ಆಧರಿಸಿದ ಚಿತ್ರ ರಚನೆ ಇತ್ಯಾದಿ ಸ್ಪರ್ಧೆಗಳು, ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಹಾಗೂ ಅಂಬೇಡ್ಕರ್ ಬದುಕು, ಬರೆಹ, ಚಿಂತನೆಗಳನ್ನು ಆಧರಿಸಿದ ಕಿರುನಾಟಕ ಉತ್ಸವ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ, ಪ್ರಮಾಣ ಪತ್ರ, ಅಂಬೇಡ್ಕರ್ ಸಮಗ್ರ ಬರಹ, ಭಾಷಣದ ಒಂದು ಪ್ರತಿ ಹಾಗೂ ಸಂವಿಧಾನ ಓದು ಕೃತಿಗಳನ್ನು ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಬುಧ್ದಿಸ್ಟ್ ಸೊಸೈಟಿ ಆಫ್ ಇಂಡಿಯಾದ ಉಪಾಧ್ಯಕ್ಷರಾದ ಅಜಯಕುಮಾರ್, ಕೋಟೇಶ್ವರ ರೋಟರಾಕ್ಟ್ ಕ್ಲಬ್ ಅಧ್ಯಕ್ಷರಾದ ರಾಕೇಶ ಶೆಟ್ಟಿ ಉಪಸ್ಥಿತರಿದ್ದರು. ಕಿರು ನಾಟಕ ಉತ್ಸವದಲ್ಲಿ ಸಂತಮೇರಿ ಪ್ರೌಢಶಾಲೆ ಕುಂದಾಪುರ, ಸರಕಾರಿ ಪ್ರೌಢಶಾಲೆ ಗುಜ್ಜಾಡಿ ಮತ್ತು ಸರಕಾರಿ ಪ್ರೌಢಶಾಲೆ ಗುಜ್ಜಾಡಿ ಇಲ್ಲಿನ ವಿದ್ಯಾರ್ಥಿಗಳು ಬಾಗವಹಿಸಿದರು

ಬೆಳಗಿನ ಆರಂಭದ ಕಾರ್ಯಕ್ರಮದಲ್ಲಿ ಸಮುದಾಯ ಕುಂದಾಪುರದ ಅಧ್ಯಕ್ಷರಾದ ಡಾ. ಸದಾನಂದ ಬೈಂದೂರ್ ಪಡುಕೋಣೆಯ ಜನಶಕ್ತಿ ಸೇವಾಟ್ರಸ್ಟ್ನ ಫಿಲಿಪ್ ಡಿಸೋಜಾ, ಚಿಂತಕ ರಾಮಕೃಷ್ಣ ಹೆರ್ಳೆ, ಕುಂದಾಪುರ ಪೋಲೀಸ್ ಠಾಣಾಧಿಕಾರಿ ಪ್ರಸಾದ್ ಕುಮಾರ್ ಹಾಗೂ ಬುಧ್ದಿಸ್ಟ್ ಸೊಸೈಟಿ ಆಫ್ ಇಂಡಿಯಾದ ರಾಘವೇಂದ್ರ ಉಪಸ್ಥಿತರಿದ್ದರು.

Click here

Click here

Click here

Click Here

Call us

Call us

ಸಮುದಾಯ ಕುಂದಾಪುರದ ಅಧ್ಯಕ್ಷರಾದ ಡಾ. ಸದಾನಂದ ಬೈಂದೂರ್ ಸ್ವಾಗತ ಕೋರಿ “ಅಂಬೇಡ್ಕರ್ ಓದು” ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಸರಕಾರಿ ಪ್ರೌಢಶಾಲೆ ಗುಜ್ಜಾಡಿ ಇಲ್ಲಿನ ವಿದ್ಯಾರ್ಥಿಗಳು ಆರಂಭಗೀತೆ ಹಾಡಿದರು. ಸಮುದಾಯ ಕುಂದಾಪುರದ ಕಾರ್ಯದರ್ಶಿ ವಾಸುದೇವ ಗಂಗೇರ ಅವರು ಕಾರ್ಯಕ್ರಮ ನಿರೂಪಿಸಿದರು.

Leave a Reply