ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬೆಂಗಳೂರು ನಾಗರಬಾವಿ ಸಮೀಪ ಮಾಳಗಾಳದ ಮಧು ಸ್ವೀಟ್ಸ್ & ಕಾಂಡಿಮೆಂಟ್‌ಗೆ ಪ್ರಕಾಶ ಎನ್ನುವ ವ್ಯಕ್ತಿ ಬಂದು ಹಣವನ್ನು ಕೇಳಿ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.
ಮಂಗಳವಾರ ಸಂಜೆ ಕಾಂಡಿಮೆಂಟ್ಸ್ ಮಾಲೀಕರಾದ ರಘುನಾಥ ಅವರಿಗೆ ಹಾಗೂ ಬುಧವಾರ ಬೆಳಿಗ್ಗೆ ಅವರ ಸಹೋದರ ದಯಾನಂದ ಶೆಟ್ಟಿ ಅವರಿಗೆ ಬೆದರಿಕೆ ಹಾಕಿ ಅಂಗಡಿಯ ಗಾಜು ಪುಡಿಗೈದಿರುವುದು ಹಾಗೂ ಮನೆಯ ಬಳಿ ತೆರಳಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಘುನಾಥ ಶೆಟ್ಟಿ ಅವರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಬಂಟ್ಸ್ ಸೇವಾದಳದ ಪ್ರಮುಖರು ಕರಾವಳಿಯ ಉದ್ಯಮಿಗಳು ಅಂಗಡಿ ಬಳಿ ಜಮಾಯಿಸಿ ಘಟನೆಯನ್ನು ಖಂಡಿಸಿದರು. ಬಳಿಕ ಪೊಲೀಸ್ ಠಾಣೆಗೆ ಭೇಟಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಮಧ್ಯಾಹ್ನದ ವೇಳೆಗೆ ಆರೋಪಿಯನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ನಿಲ್ಲದ ರೌಡಿಗಳ ದಾಂದಲೆ: ಕ್ಯಾಂಡಿಮೆಂಟ್ಸ್ ಗಾಜು ಪುಡಿಗೈದು ಬೆದರಿಕೆ – https://kundapraa.com/?p=65178 .
ಬೆಂಗಳೂರಿನಲ್ಲಿ ಯಾವುದೇ ಬೇಕರಿ, ಕಾಂಡಿಮೆಂಟ್ಸ್ ಮತ್ತು ಕ್ಯಾಂಟೀನ್ ಹಾಗೂ ಸಣ್ಣ ವ್ಯಾಪಾರಿಗಳು ಭಯ ಪಡುವ ಅವಶ್ಯಕತೆ ಇಲ್ಲ. ಮುಂದಿನ ದಿನಗಳಲ್ಲಿ ವ್ಯಾಪರಸ್ಥರಿಗೆ ಯಾವುದೇ ತೊಂದರೆ (ಅಹಿತಕರ ಘಟನೆ) ಆಗದಂತೆ ನೋಡಿಕೊಳ್ಳುವುದು ಮತ್ತು ಅಂತಹ ಘಟನೆ ಸಂಭವಿಸಿದರೆ ಆರೋಪಿಗಳಿಗೆ ತಕ್ಕ ಶಿಕ್ಷೆ ಆಗುವಂತೆ ನೋಡಿಕೊಳ್ಳಲಾಗುತ್ತದೆ. ಇಂತ ವಿಷಯದಲ್ಲಿ ನಾವೆಲ್ಲರೂ ನಮ್ಮ ಒಗ್ಗಟ್ಟನ್ನ ಹಿಂದೆಯೂ ತೋರಿಸಿದ್ದೇವು ಮುಂದೆಯೂ ತೋರಿಸುತ್ತೇವೆ. – ಉಮೇಶ್ ಕುಮಾರ್ ಶೆಟ್ಟಿ, ಬಂಟ್ಸ್ ಸೇವಾದಳ