ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟ ರಿ., ಇದರ ನೂತನ ಅಧ್ಯಕ್ಷರಾಗಿ ವಂಡ್ಸೆ ಗ್ರಾ.ಪಂ. ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಪುನರಾಯ್ಕೆಯಾಗಿದ್ದಾರೆ.
ಕುಂದಾಪುರ ತಾಲೂಕು ಸಭಾಂಗಣದಲ್ಲಿ ನಡೆದ ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟದ ಸಭೆಯಲ್ಲಿ ಮುಂದಿನ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಅವರು ಸತತ ಮೂರನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ಕುಂಭಾಶಿ ಗ್ರಾ.ಪಂ. ಅಧ್ಯಕ್ಷೆ ಶ್ವೇತಾ ಎಸ್.ಆರ್., ಉಪಾಧ್ಯಕ್ಷರಾಗಿ ಕಾಲ್ತೋಡು ಗ್ರಾ.ಪಂ.ಸದಸ್ಯ ಅಣ್ಣಪ್ಪ ಶೆಟ್ಟಿ, ಕೋಟೇಶ್ವರ ಗ್ರಾ.ಪಂ ಸದಸ್ಯೆ ರಾಗಿಣಿ ದೇವಾಡಿಗ, ತಲ್ಲೂರು ಗ್ರಾ.ಪಂ. ಸದಸ್ಯ ಉದಯ ಕುಮಾರ್ ತಲ್ಲೂರು, ಕಾರ್ಯದರ್ಶಿಗಳಾಗಿ ಹಂಗಳೂರು ಗ್ರಾ.ಪಂ.ಸದಸ್ಯ ರೋಶನ್, ಹಟ್ಟಿಯಂಗಡಿ ಗ್ರಾ.ಪಂ.ಅಧ್ಯಕ್ಷೆ ಅಮೃತ ಭಂಡಾರಿ, ಕಿರಿಮಂಜೇಶ್ವರ ಗ್ರಾ.ಪಂ.ಸದಸ್ಯ ಆನಂದ ಪೂಜಾರಿ, ಖಜಾಂಚಿಯಾಗಿ ಹೇರೂರು ಗ್ರಾ.ಪಂ. ಸದಸ್ಯ ಸೂಲಿಯಣ್ಣ ಶೆಟ್ಟಿ ಆಯ್ಕೆಯಾಗಿದ್ದಾರೆ.
ಸಂಚಾಲಕರು: ವಂಡ್ಸೆ ವಲಯ-ಅಂಪಾರು ಗ್ರಾ.ಪಂ. ಸದಸ್ಯ ಕಿರಣ್ ಹೆಗ್ಡೆ, ಕುಂದಾಪುರ ವಲಯ- ಕಾಳಾವರ ಗ್ರಾ.ಪಂ. ಸದಸ್ಯ ರಮೇಶ ಶೆಟಿ ವಕ್ವಾಡಿ, ಬೈಂದೂರು ವಲಯ-ಹಳ್ಳಿಹೊಳೆ ಗ್ರಾ.ಪಂ.ಅಧ್ಯಕ್ಷ ಪ್ರದೀಪ್ ಕೊಠಾರಿ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಎಸ್.ಜನಾರ್ದನ್ ಮರವಂತೆ, ಗೌರವ ಸಲಹೆಗಾರರಾಗಿ ನ್ಯಾಯವಾದಿ ಟಿ.ಬಿ.ಶೆಟ್ಟಿ, ಸಿ.ಡ್ಲೂ.ಡಿ ಸಂಸ್ಥೆ, ನಮ್ಮ ಭೂಮಿ ಕನ್ಯಾನ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ೬೦ ಗ್ರಾ.ಪಂ.ಗಳ ಓರ್ವ ಸದಸ್ಯರು.
ಕುಂದಾಪುರ ತಾಲೂಕು ಸಭಾಂಗಣದಲ್ಲಿ ನಡೆದ ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟದ ಸಭೆಯಲ್ಲಿ ಒಕ್ಕೂಟದ ಗೌರವಾಧ್ಯಕ್ಷ ಎಸ್.ಜನಾರ್ದನ್ ಮರವಂತೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗೌರವ ಸಲಹೆಗಾರರಾದ ಟಿ.ಬಿ ಶೆಟ್ಟಿ ಒಕ್ಕೂಟದ ರಚನೆ, ಹೋರಾಟದ ಅನಿವಾರ್ಯತೆ, ಕುಂದಾಪುರ ಒಕ್ಕೂಟದ ವಿಶೇಷತೆಗಳ ಬಗ್ಗೆ ಮಾತನಾಡಿದರು. ಒಕ್ಕೂಟದ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ನಮ್ಮ ಭೂಮಿಯ ಶ್ರೀನಿವಾಸ ಗಾಣಿಗ ಕಾರ್ಯಕ್ರಮ ನಿರ್ವಹಿಸಿದರು. ನಮ್ಮ ಭೂಮಿಯ ಕೃಪಾ ವಂದಿಸಿದರು.