ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಪೇಟೆ ವೆಂಕಟರಮಣ ದೇವರಿಗೆ ಸ್ವರ್ಣ ಪಲ್ಲಕ್ಕಿ ಕಾಶಿ ಮಠ ಶ್ರೀ ಸಂಯಮೀಂದ್ರರ್ತೀ ಸ್ವಾಮೀಜಿ ಅರ್ಪಿಸಿ ಆರ್ಸೀವಚನ ನೀಡಿದರು.
ಪಲ್ಲಕ್ಕಿ ಸವರ್ಮಣೆ ಮುನ್ನಾ ಸಮಾಜ ಬಾಂಧವರು ಮೆರವಣಿಗೆ ನಡೆಸಿದರು. ಪಲ್ಲಕ್ಕಿ ಸಮರ್ಪಣೆ ನಂತರ, ದೇವರ ಪೂಜೆ ಸ್ವಾಮೀಜಿ ನಡೆಸಿದ ನಂತರ ಉತ್ಸವಮೂರ್ತಿ ಶಿಬಿಕೆಯಲ್ಲಿಟ್ಟು ಪ್ರಕಾರೋತ್ಸವ ನೆಡೆಸಲಾಯಿತು.
ಕಾಶಿ ಮಠ ಶ್ರೀ ಸುಮೀಂದ್ರತೀರ್ಥ ಸ್ವಾಮೀಜಿ ಸ್ವರ್ಣ ಪಲ್ಲಕ್ಕಿ ಅರ್ಪಿಸಿ ಆರ್ಶೀವಚನ ನೀಡಿ, ಭವಂತನಿಂದ ಪಡೆದಿದ್ದು, ಭಗವಂತನಿಗೆ ಅರ್ಪಿಸಿವ ಮೂಲಕ ನಮ್ಮಲ್ಲಿರುವ ಅನೇಕ ಲೋಪಗಳು ಮರೆಯಾಗುತ್ತವೆ. ಎಂದು ಹೇಳಿದರು.
ತನು ಮನ ಧನದ ಮೂಲಕ ಭಗವಂತನ ಸೇವೆ ನಡೆದಿದ್ದು, ಭಕ್ತರ ಕನಸು ನನಸಾಗಿದೆ. ಉತ್ಸವದ ಮೂಲಕ ದೇವರನ್ನು ನೋಡುವಾಗ ಸಿಗುವ ಆನಂದದ ಭೂತಿಗೆ ಇದು ಪೂರಕವಾಗಲಿದೆ ಎಂದರು.
ಶ್ರೀ ಸುಮೀಂದ್ರತೀರ್ಥ ಸ್ವಾಮೀಜಿ ಅವರಿಗೆ ಪಾದ ಪೂಜೆ ಸಲ್ಲಿಸಲಾಯಿತು.
ದೇವಸ್ಥಾನ ಆಡಳಿತ ಮೊಕ್ತೇಸರ ಕೆ.ರಾಧಾಕೃಷ್ಣ ಶೆಣೈ, ಉದ್ಯಮಿಗಳಾದ ಪಿ.ದಯಾನಂದ ಪೈ., ಸುಭಾಶ್ ಕಾಮತ್, ಜತೆ ಮೊಕ್ತೇಸರ ಎಚ್.ಜನಾರ್ದನ ಮಲ್ಯ, ಪಿ. ತ್ರಿವಿಕ್ರಮ ಪೈ ಮುಂತಾದವರು ಇದ್ದರು.
ಚಿನ್ನದ ಪಲ್ಲಕ್ಕಿಯನ್ನು ಉಡುಪಿಯ ಆಭರಣ ಜುವೆಲರ್ಸ್‌ನ ವರ್ಕ್‌ಶಾಪ್ ನಲ್ಲಿ ತಯಾರಿಸಲಾಗಿದೆ. 15ರಂದು ತರಲಾಗಿದ್ದು, ರವಿವಾರ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ – ಶ್ರೀದೇವರ ಪೂಜೆ ಬಳಿಕ ಶ್ರೀ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮೀಂದ್ರತೀರ್ಥ ಶ್ರೀಪಾದರು ಶ್ರೀ ದೇವರಿಗೆ ಸ್ವರ್ಣ ಪಲ್ಲಕ್ಕಿಯನ್ನು ಸಮರ್ಪಿಸಿದರು. ಬಳಿಕ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಇಟ್ಟು ಪ್ರಾಕಾರೋತ್ಸವ ನಡೆಸಲಾಯಿತು.