ರಾಜಕೀಯದಲ್ಲಿ ನನಗೆ ನಟಿಸಲು ಬರುವುದಿಲ್ಲ. ಸಾಮಾಜಿಕ ನ್ಯಾಯ ಸಿದ್ಧಾಂತ ಪಾಲಿಸಿದ್ದೇನೆ – ಶಾಸಕ ಹಾಲಾಡಿ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ನಾನು ಶಾಸಕನಾಗಲು ನೂರಾರು ಕಾರ್ಯಕರ್ತರು ಶ್ರಮ ವಹಿಸಿದ್ದಾರೆ. ನೀವೆಲ್ಲರೂ ನನ್ನ ಮೇಲಿಟ್ಟ ನಂಬಿಕೆಗಳಿಗೆ ನಾನು ಋಣಿಯಾಗಿದ್ದೇನೆ. ನಿಮ್ಮೆಲ್ಲರ ಋಣ ತೀರಿಸಲು ಇನ್ನೊಂದು ಜನ್ಮವೇ ಬೇಕು ಎಂದು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು.

Call us

Click Here

ಅವರು ಶುಕ್ರವಾರ ಕೋಟೇಶ್ವರದ ಸರಸ್ವತಿ ಸಭಾಂಗಣದಲ್ಲಿ ಬಿಜೆಪಿ ಕಾರ್ಯಕರ್ತರ ಬೃಹತ್ ಸಭೆಯಲ್ಲಿ ಮಾತನಾಡಿ ನಾನು ದೊಡ್ಡ ರಾಜಕಾರಣಿಯಲ್ಲ. ನನಗೆ ವೇಷ ಹಾಕಲು ಬರುವುದಿಲ್ಲ. ಸಹಜವಾಗಿ ಬದುಕಿದ್ದೇನೆ. ನನ್ನ ಇಚ್ಚಾಶಕ್ತಿ ಸ್ಪಷ್ಟವಾಗಿದೆ. ನಾನು ಒಮ್ಮೆ ತೀರ್ಮಾನಿಸಿದರೆ ಅದನ್ನೇ ಪಾಲಿಸುತ್ತೇನೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸಾಮಾಜಿಕ ನ್ಯಾಯವನ್ನು ಒಪ್ಪಿಕೊಂಡು ಕೆಲಸ ಮಾಡಿದ್ದೇನೆ. ಜಾತ್ಯಾತೀತವಾಗಿ ನನ್ನನ್ನು ಮತದಾರರು ಆಯ್ಕೆಮಾಡಿದ್ದಾರೆ ಎಂದ ಅವರು ನಾವು ನಿಮಗೆ ಗ್ಯಾರೆಂಟಿ ಕಾರ್ಡ್ ನೀಡುವುದಿಲ್ಲ. ನಿಮಗೆ ನಾನೇ ಗ್ಯಾರೆಂಟಿ ಎಂದರು.

DCIM100MEDIADJI_0858.JPG

ಚುನಾವಣೆ ಎನ್ನುವುದು ಎರಡು ತಂಡಗಳ ನಡುವಿನ ಧರ್ಮ ಯುದ್ಧವಾಗಬೇಕೇ ಹೊರತು ಹೊಲಸು ರಾಜಕೀಯವಾಗಬಾರದು. ಸಭೆಯೊಂದರಲ್ಲಿ ಕಾಂಗ್ರೆಸ್ ಅಭ್ಯರ್ಥಿಯು, ನನಗೆ ವಯಸ್ಸಾಗಿದೆ ಎಂದು ಹೇಳಿದ್ದನ್ನು ಕೇಳಿದೆ. ನನ್ನ ವರಸ್ಸಿನ ಜಾತಕ ಅವರ ಬಳಿ ಇರಬಹುದು ಆದರೆ ನನಗೆ ಯಾವುದರಲ್ಲಿ ವಯಸ್ಸಾಗಿದೆ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಚುನಾವಣೆಗೆ ನಿಲ್ಲಲು ನಾನೇ ಹೇಳಿದ್ದು ಎನ್ನುವ ಮಾತುಗಳನ್ನು ಮತದಾರರ ಬಳಿ ಹೇಳುತ್ತಿದ್ದಾರೆ. ಇದು ಆ ಪಕ್ಷಕ್ಕೇ ನಾಚಿಕೆಗೇಡಿನ ಸಂಗತಿ ಎಂದರು.

ನಾನು ನಂಬಿದ ಕಾರ್ಯಕರ್ತರಿಗೆ ಮೋಸ ಮಾಡುವ ಪ್ರಶ್ನೆಯೇ ಇಲ್ಲ. ನನ್ನ ತಲೆಗೆ ಗುಂಡಿಟ್ಟರೂ ನನ್ನ ಬದ್ದತೆ ಬಿಜೆಪಿಯೇ. ಮತ್ತೆ ಕುಂದಾಪುರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಹುಲ್ ಗಾಂಧೀ ಭಾರತ್ ಜೋಡೋ ಯಾತ್ರೆ ಮಾಡಿದರು. ನೀವು ಕಾಂಗ್ರೆಸ್ ನವರಿಗೆ ಕೇಳಿ ಭಾರತವನ್ನು ಒಡೆದದ್ದು ಯಾರು? ಜಮ್ಮು ಕಾಶ್ಮೀರದಲ್ಲಿ ರಾಹುಲ್ ಗೆ ಉಗ್ರಗಾಮಿಗಳು ಏನೂ ಮಾಡಿಲ್ಲ ಎಂದು ರಾಹುಲ್ ಹೇಳಿಕೆ ಪ್ರಸ್ತಾಪಿಸಿ, ಮನುಷ್ಯರಲ್ಲಿ ಸಂಬಂಧಿಕರಿಗೆ ಸಂಬಂಧಿಕರು ಏನೂ ಮಾಡುವುದಿಲ್ಲ ಎಂದರು.

Click here

Click here

Click here

Click Here

Call us

Call us

ಬಿಜೆಪಿ ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಕಳೆದ ನಲ್ವತ್ತು ವರ್ಷಗಳಿಂದ ನಿಮ್ಮ ಮಧ್ಯೆ ಬೆಳಿದಿದ್ಧೇನೆ. ಮುಂದೆಯೂ ನಿಮ್ಮ ಜೊತೆ ಇರುತ್ತೇನೆ. ನಿಮ್ಮೆಲ್ಲರ ಆಶೀರ್ವಾದ ಬೇಕಿದೆ ಎಂದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಕಾರ್ಯಕರ್ತರನ್ನು ಉದ್ಧೇಶಿಸಿ ಮಾತನಾಡಿದರು. 17 ಮಂದಿಯನ್ನು ಹಾಲಾಡಿ ಶ್ರೀನಿವಾಸ್ ಶೆಟ್ಟಿ ಪಕ್ಷದ ಬಾವುಟ ನೀಡಿ ಪಕ್ಷಕ್ಕೆ ಸೇರ್ಪಡೆಗೊಳಿಸಿದರು.

ಕುಂದಾಪುರ ಮಂಡಲದ ಪ್ರಧಾನ ಕಾರ್ಯದರ್ಶಿ ಸುರೇಶ್ ಬೀಜಾಡಿ ಸ್ವಾಗತಿಸಿ, ಸತೀಶ ಪೂಜಾರಿ ವಕ್ವಾಡಿ ಕಾರ್ಯಕ್ರಮ ನಿರೂಪಿಸಿದರು. ಮಂಡಲದ ಅಧ್ಯಕ್ಷ ಶಂಕರ ಅಂಕದಕಟ್ಟೆ ಪ್ರಾಸ್ತಾವಿಕ ಮಾತನಾಡಿದರು.

Leave a Reply