ಕುಂದಾಪುರ: ಸ್ವಯಂಪ್ರೇರಿತ ರಕ್ತದಾನ ಶಿಬಿರ & ಸಾಯಿ ಸ್ಪಂದನಾ ಫೌಂಡೇಶನ್ ಉದ್ಘಾಟನೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಶ್ರೀ ಸಾಯಿ ಸ್ಪಂದನಾ ಫೌಂಡೇಶನ್, ಕುಂದಾಪುರ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ.) ಉಡುಪಿ, ರಕ್ತದಾನಿಗಳ ಬಳಗ ಕುಂದಾಪುರ, ಜಬ್ ಜಬ್ ಫ್ರೆಂಡ್ಸ್ ಕುಂದಾಪುರ, ಖಾರ್ವಿ ಆನ್ಲೈನ್. ಕಾಂ , ಫ್ರೆಂಡ್ಸ್ ಸರ್ಕಲ್ ಫ್ರೇಂಡ್ಸ್ ಕುಂದಾಪುರ ಹಾಗೂ ರಕ್ತನಿಧಿ ವಿಭಾಗ ಕೆ.ಎಂ.ಸಿ, ಮಣಿಪಾಲ ಇವರ ಸಹಕಾರದಲ್ಲಿ ಕುಂದಾಪುರ ಕಲಾಮಂದಿರದಲ್ಲಿ ‘ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಾಗೂ ಶ್ರೀ ಸಾಯಿ ಸ್ಪಂದನಾ ಫೌಂಡೇಶನ್ ಕುಂದಾಪುರ ಸಂಸ್ಥೆಯ ಉದ್ಘಾಟನೆ ಮತ್ತು ಲೋಗೋ ಬಿಡುಗಡೆ ಕಾರ್ಯಕ್ರಮ ಜರುಗಿತು.

Call us

Click Here

ವೈದ್ಯ ಡಾ. ಆದರ್ಶ ಹೆಬ್ಬಾರ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಕುಂದಾಪುರದಲ್ಲಿ ದಿನನಿತ್ಯ 15 ರಿಂದ 20 ಯೂನಿಟ್ ರಕ್ತದ ಅವಶ್ಯಕತೆ ಇದ್ದು, ಹೆರಿಗೆ ಹಾಗೂ ಅಪಘಾತದ ತುರ್ತು ಸಂದರ್ಭದಲ್ಲಿ ಸಕಾಲದಲ್ಲಿ ರಕ್ತದ ಪೂರೈಕೆ ಆಗದಿದ್ದ ರೋಗಿಯ ಜೀವಕ್ಕೆ ಅಪಾಯ. ಇಂತಹ ಸಂದರ್ಭದಲ್ಲಿ ತುರ್ತು ರಕ್ತದಾನಿಗಳ ಅವಶ್ಯಕತೆ ಇದ್ದು ಇದರ ಪೂರೈಕೆಗಾಗಿ ಶ್ರೀಸಾಯಿ ಸ್ಪಂದನಾ ಸಂಸ್ಥೆ ಮುಂದಿನ ದಿನಗಳಲ್ಲಿ ಶ್ರಮಿಸಲಿದ್ದು ರೋಗಿಗಳ ಪಾಲಿಗೆ ಆಶದಾಯಕವಾಗಿದೆ ಎಂದು ಅಭಿಪ್ರಾಯಪಟ್ಟರು.

ಅರುಣ್ ಖಾರ್ವಿಯವರು ಅಧ್ಯಕ್ಷತೆ ವಹಿಸಿದ್ದರು. ರಕ್ತದ ಆಪತ್ಬಾಂಧವ ಸತೀಶ್ ಸಾಲಿಯಾನ್ ಮಣಿಪಾಲ ಇವರು ಶ್ರೀಸಾಯಿ ಸ್ಪಂದನಾ ಸಂಸ್ಥೆಯ ಲೋಗೋ ಬಿಡುಗಡೆ ಮಾಡಿದರು ನಂತರದಲ್ಲಿ ಮಾತನಾಡಿದ ಅವರು ಕುಂದಾಪುರ ಪರಿಸರದ ಸಮಾಜಸೇವಾ ಮನೋಭಾವದ ಯುವಕರನ್ನು ಒಗ್ಗೊಡಿಸಿಕೊಂಡು ಶ್ರೀ ಸಾಯಿ ಸ್ಪಂದನಾ ಸಂಸ್ಥೆ ಮುಂದಿನ ದಿನಗಳಲ್ಲಿ ರಕ್ತದಾನ ಹಾಗೂ ಅರೋಗ್ಯ ಕ್ಷೇತ್ರದಲ್ಲಿ ಯಾವುದೇ ಫಲಾಪೇಕ್ಷ ಇಲ್ಲದೆ ಒಳ್ಳೆ ಕೆಲಸವನ್ನು ಮಾಡಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಗಳಾಗಿ ರಕ್ತದಾನ ಶಿಬಿರದ ಆಯೋಜಕರಾಗಿರುವ ಚರಣ್ ಗಂಗೊಳ್ಳಿ, ಚೇತನ್ ಖಾರ್ವಿ, ಸೂರಜ್ ಸಾರಂಗ್, ಪ್ರಶಾಂತ್ ತಲ್ಲೂರು, ಕೋಟಾನ್ ಸುಧಾಕರ್ ಖಾರ್ವಿ, ಜನಾರ್ಧನ್ ಖಾರ್ವಿಯವರು ವೇದಿಕೆ ಅಲಂಕರಿಸಿದರು.

ದಿನನಿತ್ಯ ತುರ್ತು ಕರೆಗೆ ಸ್ಪಂದಿಸಿ ರಕ್ತದಾನಿಗಳನ್ನು ಉಡುಪಿ ಕುಂದಾಪುರದ ವಿವಿಧ ಆಸ್ಪತ್ರೆಗಳಿಗೆ ಪೂರೈಸುತ್ತಿರುವ ಅರವಿಂದ ಉಪ್ಪಿನಕುದ್ರು, ಮಹೇಂದ್ರ ಉಪ್ಪಿನಕುದ್ರು, ದಿನೇಶ್ ಕಾಂಚನ್ ಬಾರಿಕೆರೆ, ನವಾಜ್ ಜೆ ಕೆ, ಅಪ್ರಾಜ್ ಕುಂದಾಪುರ, ಗೌರೀಶ್ ಹಳ್ಳಿಹೊಳೆ, ಹಾಗೂ 25ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿರುವ ಗಣೇಶ್ ನಾಯ್ಕ್, ದಯಾನಂದ ಖಾರ್ವಿ (34 ಬಾರಿ), ರಾಘವೇಂದ್ರ ಗಂಗೊಳ್ಳಿ ಇವರನ್ನು ಗುರುತಿಸಿ ಗೌರವಿಸಿದರು.

Click here

Click here

Click here

Click Here

Call us

Call us

ಶಿಬಿರದಲ್ಲಿ ಒಟ್ಟು 44 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶರತ್ ಕಾಂಚನ್ ಆನಗಳ್ಳಿ, ಜೆಸಿಐ ಸುಧಾಕರ್ ಕಾಂಚನ್, ರಿತೇಶ್ ಖಾರ್ವಿ, ರಾಜು ನಾಯ್ಕ್, ಗುರುಪ್ರಸಾದ್ ಖಾರ್ವಿ, ವಿಶ್ವನಾಥ ಇವರುಗಳು ಉಪಸ್ಥಿತರಿದ್ದರು. ಕಾರ್ಯಕ್ರಮ ನಿರೂಪಣೆ ಅರ್ಪಿತಾ ಖಾರ್ವಿ ಯವರು ನೆರವೇರಿಸಿದರು.

Leave a Reply