ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಹಾಲಾಡಿ ರಸ್ತೆಗೆ ಅಡ್ಡಲಾಗಿ ಬಿದ್ದದ್ದ ಮರವೊಂದನ್ನು ತೆರಳವುಗೊಳಿಸುತ್ತಿದ್ದ ಸಂದರ್ಭ, ಇನ್ನೊಂದು ಮರ ಉರುಳಿ ಬಿದ್ದಿದ್ದು ಬೈಂದೂರು ಶಾಸಕರು ಹಾಗೂ ಬೆಂಬಲಿಗರು ಕೂದಲೆಳೆಯ ಅಂತರದಿಂದ ಪಾರಾಗಿದ್ದಾರೆ.
ಕಾರ್ಯ ನಿಮಿತ್ತ ಹಾಲಾಡಿ ಮಾರ್ಗವಾಗಿ ತೆರಳುತ್ತಿದ್ದ ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ತಮ್ಮ ಬೆಂಬಲಿಗರೊಂದಿಗೆ ಮರ ತೆರವು ಕಾರ್ಯಕ್ಕೆ ಕೈಜೋಡಿಸಿದರು. ಈ ವೇಳೆ ಮತ್ತೊಂದು ಮರ ಅಲ್ಲಿಯೇ ಉರುಳಿ ಬಿದ್ದಿದೆ. ಮರ ಬೀಳುವುದನ್ನು ಕಂಡ ಶಾಸಕರು ಮತ್ತು ಬೆಂಬಲಿಗರು ಪಕ್ಕಕ್ಕೆ ಓಡಿದ್ದರಿಂದ ಯಾವುದೇ ಹಾನಿ ಸಂಭವಿಸಿಲ್ಲ. ಬಳಿಕ ಎರಡೂ ಮರವನ್ನು ತೆರವುಗೊಳಿಸಿ ಮುಂದೆ ಸಾಗಿದ್ದಾರೆ.