ಹೊಸೂರು: ಶ್ರೀ ಮೂಕಾಂಬಿಕಾ ದೇವಳದ ಪ್ರೌಢಶಾಲೆಗೆ ರಜತ ಮಹೋತ್ಸವ ಸಂಭ್ರಮ – ಪೋಸ್ಟರ್ ಅನಾವರಣ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ತಾಲೂಕಿನ ಹೊಸೂರು ಶ್ರೀ ಮೂಕಾಂಬಿಕಾ ದೇವಳದ ಪ್ರೌಢಶಾಲೆ ರಜತ ಮಹೋತ್ಸವದ ಸಂಭ್ರಮದಲ್ಲಿದ್ದು, ಬುಧವಾರ ಕೊಲ್ಲೂರು ದೇವಸ್ಥಾನದ ಆಡಳಿತ ಧರ್ಮದರ್ಶಿ ಕೆರಾಡಿ ಚಂದ್ರಶೇಖರ ಶೆಟ್ಟಿ ಅವರು “ರಜತ ಸಂಭ್ರಮ”ದ ಪೋಸ್ಟರ್ ಅನಾವರಣಗೊಳಿಸಿದರು. ಡಿಸೆಂಬರ್ 25ರ ಬೆಳಿಗ್ಗೆ 8ರಿಂದ ಮರುದಿನ ಬೆಳಿಗ್ಗೆ 8ರ ತನಕ ವಿವಿಧ ಕಾರ್ಯಕ್ರಮಗಳು ರಜತ ಸಂಭ್ರಮದ ಅಂಗವಾಗಿ ನಡೆಯಲಿದೆ.

Call us

Click Here

ಪೋಸ್ಟರ್ ಅನಾವರಣಗೊಳಿಸಿ ಬಳಿಕ ಅವರು ಮಾತನಾಡಿ, ದೇವಳದ ವತಿಯಿಂದ ನಡೆಸಲಾಗುತ್ತಿರುವ ಪ್ರೌಢಶಾಲೆ ಮೌಲ್ಯದಾರಿತ ಶಿಕ್ಷಣದ ಮೂಲಕ ನೂರಾರು ವಿದ್ಯಾರ್ಥಿಗಳನ್ನು ಸಮಾಜದಲ್ಲಿ ಸತ್ಪಜೆಯಾಗಿ ರೂಪಿಸಿದೆ. ಸಂಸ್ಥೆಯಿಂದ ಶಿಕ್ಷಣ ಪಡೆದವರೆಲ್ಲರೂ ಒಂದಾಗಿ ಈ ಸಂಭ್ರಮವನ್ನು ಆಚರಿಸಬೇಕಿದೆ. ಹಳೆ ವಿದ್ಯಾರ್ಥಿಗಳು, ಊರವರು, ಶಿಕ್ಷಕರು ಹಾಗೂ ಸಮಿತಿಯ ನೇತೃತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಗಲಿ ಎಂದರು.

ಹಳೇ ವಿದ್ಯಾರ್ಥಿ ಸಂಘದ ಅದ್ಯಕ್ಷರಾದ ಕೆ. ಎಲ್. ಜಯರಾಮ್ ಶೆಟ್ಟಿ ಕಾನಬೇರು ಅವರು ಮಾತನಾಡಿ ಡಿಸೆಂಬರ್ 25ರ ಬೆಳಿಗ್ಗೆ 8ರಿಂದ ಮರುದಿನ 8ರ ತನಕ ನಿರಂತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ರಜತ ಮಹೋತ್ಸವದ ನೆನಪಿಗಾಗಿ ವಾಹನ ವ್ಯವಸ್ಥೆ, ಆಂಗ್ಲ ಮಾಧ್ಯಮ ವಿಭಾಗ ಸೇರಿದಂತೆ ಹಲವು ಮೂಲಸೌಕರ್ಯಗಳನ್ನು ಒದಗಿಸಲು ಯೋಜನೆ ಹಾಕಿಕೊಳ್ಳಲಾಗಿದ್ದು, ಎಲ್ಲಾ ಹಳೆ ವಿದ್ಯಾರ್ಥಿಗಳು ಕೈಜೋಡಿಸುವಂತೆ ಮನವಿ ಮಾಡಿದರು.

ಈ ವೇಳೆ ದೇವಳದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಸದಸ್ಯ ವಂಡಬಳ್ಳಿ ಜಯರಾಮ್ ಶೆಟ್ಟಿ, ಸಂಸ್ಥೆಯ ಹಳೆ ವಿದ್ಯಾರ್ಥಿ, ಹೆಗ್ಗದ್ದೆ ಸ್ಟುಡಿಯೋ ಸಂಪಾದಕ ಸಂದೀಪ್ ಶೆಟ್ಟಿ ಹೆಗ್ಗದ್ದೆ, ಮುಖ್ಯೋಪಾಧ್ಯಾಯರಾದ ಚಂದ್ರ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ಹೊಸೂರು, ಶಿಕ್ಷಕರಾದ ರವಿಶಂಕರ ಹೆಗ್ಡೆ, ವೇಣುಗೋಪಾಲ ಶೆಟ್ಟಿ, ಕೀರ್ತನಾ ಶೆಟ್ಟಿ, ರತ್ನಾಕರ ದೇವಾಡಿಗ, ಹಳೆ ವಿದ್ಯಾರ್ಥಿಗಳಾದ ದೀಕ್ಷಿತ್ ಕುಮಾರ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಕೆರಾಡಿ, ಉಮೇಶ್, ಅಜಿತ್ ಕೆರಾಡಿ ಮೊದಲಾದವರು ಉಪಸ್ಥಿತರಿದ್ದರು.

Leave a Reply