ಪಂಚಗಂಗಾವಳಿ ಅಧ್ಯಯನಕ್ಕೆ “ಇಂಟ್ಯಾಕ್”. ದೆಹಲಿಯಿಂದ ಕುಂದಾಪುರಕ್ಕೆ ಬಂದ ತಜ್ಞರ ತಂಡ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಭಾರತ ದೇಶದ ಅಮೂರ್ತ ಪ್ರಾಕೃತಿಕ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಉದ್ದೇಶದಿಂದ ಸೇವೆ ಸಲ್ಲಿಸುತ್ತಿರುವ, ರಾಜಧಾನಿ ದೆಹಲಿಯಲ್ಲಿ ಮುಖ್ಯ ಕಛೇರಿ ಹೊಂದಿರುವ ಇಂಟ್ಯಾಕ್ (INTACH) ಸಂಸ್ಥೆ, ಕುಂದಾಪುರದ ಪಂಚಗಂಗಾವಳಿಯನ್ನು ಅಧ್ಯಯನಕ್ಕಾಗಿ ಆರಿಸಿಕೊಂಡು ಈಗಾಗಲೇ ತನ್ನ ಕೆಲಸ ಆರಂಭಿಸಿದೆ. ಇಂಟ್ಯಾಕ್‌ನ ನ್ಯಾಚುರಲ್ ಹೆರಿಟೇಜ್ ಡಿವಿಜನ್‌ನ ಮೂವರು ತಜ್ಞರು ಈಗಾಗಲೇ ಜೂನ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಎರಡು ಬಾರಿ ಆಗಮಿಸಿ ಮಾಹಿತಿ ಸಂಗ್ರಹದ ಪೂರ್ವಭಾವಿ ಕೆಲಸ ಆರಂಭಿಸಿದ್ದಾರೆ. ಇದು ಕುಂದಾಪುರಕ್ಕೆ ಹೆಮ್ಮೆಯ ವಿಚಾರವಾಗಿದೆ.

Call us

Click Here

ಇಂಟ್ಯಾಕ್, ನಾಲ್ಕು ದಶಕಗಳ ಇತಿಹಾಸ ಹೊಂದಿರುವ ಪ್ರಪಂಚದ ಶ್ರೇಷ್ಠ ಸರಕಾರೇತರ ಸಂಸ್ಥೆಯಾಗಿದೆ. ಆದರೆ ಕೇಂದ್ರ ಸರಕಾರದ ಇಲಾಖೆಗಳು ಸಂಸ್ಥೆಯ ಅಧ್ಯಯನ ಸಂರಕ್ಷಣೆಯ ಕಾರ್ಯಕ್ಕೆ ನೆರವು ನೀಡುತ್ತಿವೆ. ಪರಿಸರ, ಕಲೆ, ಪಾರಂಪರಿಕ, ಸಂಸ್ಕೃತಿ, ಶಿಲ್ಪಕಲೆ ಮುಂತಾದ ಹಲವು ವಿಷಯಗಳಲ್ಲಿ ಸಂಶೋಧನೆ ನಡೆಸುತ್ತಿರುವ ಈ ಸಂಸ್ಥೆಯ ನ್ಯಾಚುರಲ್ ಹೆರಿಟೇಜ್ ಡಿವಿಜನ್‌ನ ಪ್ರಿನ್ಸಿಪಾಲ್ ಡೈರೆಕ್ಟರ್ ಮನು ಭಟ್ನಾಕರ್, ಸಾಯಿಂಟಿಫಿಕ್ ಆಫೀಸರ್ ಡಾ. ಸುಮೇಶ ಎನ್. ಡುದಾನಿ ಮತ್ತು ಎನ್‌ವಿರೊನ್‌ಮೆಂಟಲ್ ಪ್ಲಾನರ್ ಶ್ರಿಂತಿಕಾ ಮೌರ್ಯ ಕುಂದಾಪುರದಲ್ಲಿ ಅಧ್ಯಯನಕ್ಕೆ ತೊಡಗಿದ ತಜ್ಞರಾಗಿದ್ದಾರೆ.

ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು, ಅಧ್ಯಾಪಕರು, ಸಾಹಿತಿ, ಕಲಾವಿದರು, ಧಾರ್ಮಿಕ ಕ್ಷೇತ್ರಗಳ ಆಡಳಿತ ಮಂಡಳಿ, ಸ್ಥಳೀಯ ಸಂಸ್ಥೆಗಳು, ಮಾಧ್ಯಮಗಳು, ಜನ ಸಾಮಾನ್ಯರು, ಪಂಚಗಂಗಾವಳಿ ಹಾಗೂ ಪರಿಸರದ ಪಾರಂಪಾರಿಕ ಆಚರಣೆಗಳು, ಜನಪದ ಕಲೆ ಉತ್ಸವ ಜನಜೀವನ, ನೈಸರ್ಗಿಕ ವೈಶಿಷ್ಟ್ಯ ಯಾವುದರ ಬಗ್ಗೆಯೂ ಮಾಹಿತಿ ನೀಡಬಹುದು ಎಂದು ತಿಳಿಸಿ ಸಹಕಾರ ಅಪೇಕ್ಷಿಸಿದ್ದಾರೆ. ಡಾ. ಸುಮೇಶ ಎನ್. ಡುದಾನಿ 9611250225 ಅವರಿಗೆ ವಿವರ ನೀಡಬಹುದಾಗಿದೆ.

ಕುಂದಾಪುರದ ಪಂಚಗಂಗಾವಳಿಯ ನದಿಗಳಾದ ಸೌಪರ್ಣಿಕಾ, ಖೇಟ, ಚಕ್ರ, ವಾರಾಹಿ ನದಿಗಳು ತಮ್ಮದೇ ಆದ ವೈಶಿಷ್ಟ್ಯ ಹೊಂದಿವೆ. ಪಶ್ಚಿಮ ಘಟ್ಟದಿಂದ ಕರಾವಳಿಯತ್ತ ಹರಿದು ಬಂದು ಕುಂದಾಪುರದಲ್ಲಿ ಒಂದಾಗಿ ಸಾಗರ ಸೇರುವ ಈ ನದಿ ತಟಗಳಲ್ಲಿ ಹಲವು ಸಂಸ್ಕೃತಿಗಳು ಮೇಳೈಸಿವೆ.

ಮಲೆನಾಡಿನ ಪ್ರಾಕೃತಿಕ ವೈಶಿಷ್ಟ್ಯ ಹೊತ್ತುಕೊಂಡು ಬರುವ ನದಿಗಳು ಸಾವಿರಾರು ಔಷಧೀಯ ಸಸ್ಯಗಳನ್ನು ಪ್ರಕೃತಿಗೆ ನೀಡಿವೆ. ಕರಾವಳಿಯತ್ತ ಹರಿದು ಬರುವ ಈ ನದಿ ತಟಗಳಲ್ಲಿ ಹಲವು ದೇವಾಲಯಗಳು ನೆಲೆ ನಿಂತಿವೆ. ಪ್ರತಿಯೊಂದು ದೇವಾಲಯದ ಪರಂಪರೆಯು ವಿಶಿಷ್ಟವಾಗಿದೆ. ಇಲ್ಲಿನ ಜನಪದ ಸಂಸ್ಕೃತಿ, ಭಾಷೆ, ಕರ್ನಾಟಕದಲ್ಲೇ ವಿಶೇಷ ಸ್ಥಾನ ಪಡೆದಿದೆ. ಪ್ರವಾಸೋದ್ಯಮಕ್ಕೆ ಬಹಳ ಅನುಕೂಲವಿರುವ ಹಲವಾರು ಜಲಪಾತಗಳು, ನದಿ ತೀರದ ಸೌಂದರ್ಯ, ಅರಣ್ಯಗಳಲ್ಲಿರುವ ವಿಶಿಷ್ಟ ತಳಿಗಳು, ಪ್ರಾಕೃತಿಕ ತಾಣಗಳು, ಪಂಚಗಂಗಾವಳಿ ಪರಿಸರ ಅಧ್ಯಯನಕ್ಕೆ ಬಹಳ ಅನುಕೂಲವಾಗಿವೆ.

Click here

Click here

Click here

Click Here

Call us

Call us

ಕೃಷಿ, ತೋಟಗಾರಿಕೆ ಹಾಗೂ ಮೀನುಗಾರಿಕೆ ಇಲ್ಲಿನ ಪ್ರಮುಖ ಜೀವನದ ಆಧಾರಗಳು. ನದಿ ಹಾಗೂ ಇಲ್ಲಿನ ಪ್ರಕೃತಿಗೆ ಹೊಂದಿಕೊಂಡಂತೆ ಹಲವು ಉದ್ಯಮಗಳು ಜನಜೀವನಕ್ಕೆ ಆಸರೆಯಾಗಿವೆ. ಇಲ್ಲಿನ ಜನರ ಪಾಂಡಿತ್ಯವೂ ಸಹ ಬಹಳ ಪ್ರಸಿದ್ಧಿಯಾಗಿದೆ. ಯಕ್ಷಗಾನ, ಯಕ್ಷಗಾನ ಗೊಂಬೆಯಾಟ, ಕೋಲ, ದೈವಾರಾಧನೆ, ರಥೋತ್ಸವ, ಜಾನಪದ ಆಟಗಳು, ಸಾಹಿತ್ಯ, ಅಧ್ಯಯನಕ್ಕೆ ಅನುಕೂಲವಾಗಿವೆ. ಮುಖ್ಯವಾಗಿ ಪಂಚನದಿಗಳು ಹರಿವು ದೇಶದಲ್ಲೇ ವಿಶಿಷ್ಟವಾದುದು ಎಂದು ತಜ್ಞರು ಬಣ್ಣಿಸಿದ್ದಾರೆ. ರಾಷ್ಟ್ರಮಟ್ಟದಲ್ಲಿ ಪಂಚಗಂಗಾವಳಿ ಅಭಿವೃದ್ಧಿ ಹೊಂದಲು ಕುಂದಾಪುರದ ಜನತೆ ಸಹಕಾರ ನೀಡಬೇಕಾಗಿದೆ.

Leave a Reply