ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ, ಜು.17: ಇಲ್ಲಿನ ಯುವ ಮೆರಿಡಿಯನ್ ಕನ್ವೆನ್ಷನ್ ಸೆಂಟರ್ ಕುಂದಾಪುರ ಮತ್ತು ಕಶ್ವಿ ಚೆಸ್ ಸ್ಕೂಲ್ ರಿ. ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಮತ್ತು ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್ ಸಹಯೋಗದೊಂದಿಗೆ ಯುವ ಕರ್ನಾಟಕ ಸ್ಟೇಟ್ ಸ್ಕೂಲ್ಸ್ ಚೆಸ್ ಚಾಂಪಿಯನ್‌ಶಿಪ್ 2024 ಆಗಸ್ಟ್ 10 ಹಾಗೂ 11ರಂದು ಯುವ ಮೆರಿಡಿಯನ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಲಿದೆ.
ಪಠ್ಯ ಕ್ರಮ ಸ್ಟೇಟ್, ಸಿ. ಬಿ. ಎಸ್. ಇ, ಐ. ಸಿ. ಎಸ್. ಇ ಹಾಗೂ ಇತರೆ ವಯೋಮಿತಿಯ 7, 9, 11, 13, 15 ಮತ್ತು 17 ರ ಹುಡುಗ ಮತ್ತು ಹುಡುಗಿಯರ ಎಲ್ಲಾ ವಿಭಾಗದಲ್ಲಿ ಪ್ರತ್ಯೇಕವಾಗಿ ಚೆಸ್ ಚಾಂಪಿಯನ್ ಶಿಪ್ ನಡೆಯಲಿದ್ದು ಪ್ರತಿ ವಯೋಮಿತಿಯ ವಿಭಾಗದಲ್ಲಿ ಒಬ್ಬ ವಿಜೇತರಾದವರು ಪಂಜಾಬ್‌ನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಸ್ಕೂಲ್ಸ್ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಲಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ 600 ಹೆಚ್ಚು ಸ್ಪರ್ಧಾಳುಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಕಶ್ವಿ ಚೆಸ್ ಸ್ಕೂಲ್‌ನ ಸ್ಥಾಪಕ ಅಧ್ಯಕ್ಷರಾದ ನರೇಶ್ ರಾವ್ ತಿಳಿಸಿದ್ದಾರೆ.