ಲಯನ್ಸ್‌ ಕ್ಲಬ್ ತೆಕ್ಕಟ್ಟೆ: ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ತೆಕ್ಕಟ್ಟೆಯ ಲಯನ್ಸ್‍ ಕ್ಲಬ್ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭವು ಗಾಯತ್ರಿ ಸಭಾಭವನ ಕುಂಭಾಶಿಯಲ್ಲಿ ಜರುಗಿತು.

Call us

Click Here

ಪ್ರತಿಜ್ಞಾವಿಧಿ ಬೋಧಿಸಿ ಪದಪ್ರಧಾನ ನಡೆಸಿಕೊಟ್ಟ ಮಾಜಿ ಜಿಲ್ಲಾ ಗವರ್ನರ್ ನೀಲಕಂಠ ಎಮ್. ಹೆಗ್ಡೆ ಮಾತನಾಡಿ, ತೆಕ್ಕಟ್ಟೆ ಲಯನ್ಸ್‌ ಕ್ಲಬ್ ದಶಮಾನೋತ್ಸವವನ್ನು ಪೂರೈಸಿಕೊಂಡು ಲಯನ್ಸ್‌ ತತ್ವ ಆದರ್ಶಗಳ ಪ್ರಕಾರ ಸಮಾಜಕ್ಕೆ ಬಡವರಿಗೆ ಸೇವೆ ಸಹಾಯ ನೀಡುತ್ತಾ ಬಂದು ಉತ್ತಮ ಕ್ಲಬ್‍ ಆಗಿ ನಡೆದು ಬಂದುದನ್ನು ಪ್ರಶಂಸಿದರು.

ಕ್ಲಬ್‌ನ ನೂತನ ಅಧ್ಯಕ್ಷ ಹರ್ಷವರ್ಧನ್ ಶೆಟ್ಟಿ, ಕಾರ್ಯದರ್ಶಿ ಕಿಶೋರ್ ಕುಮಾರ್ ಶೆಟ್ಟಿ, ಖಜಾಂಚಿ ರಮೇಶ್ ಕೆ. ಶೆಟ್ಟಿ ಮತ್ತು ಇತರ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.

ಈ ಸಂದರ್ಭದಲ್ಲಿ 2023-24ನೇ ಸಾಲಿನಲ್ಲಿ ಸರ್ಕಾರಿ ಪ್ರೌಢಶಾಲೆ ಮತ್ತು ಪಿಯುಸಿಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಧನಸಹಾಯ ಮಾಡಲಾಯಿತು.

ತೆಕ್ಕಟ್ಟೆ ಲಯನ್ಸ್‌ ಕ್ಲಬ್ 2022-23ರಲ್ಲಿ ದತ್ತು ಪಡೆದ 4 ವಿಧ್ಯಾರ್ಥಿಗಳಿಗೆ ಧನಸಹಾಯ ನೀಡಲಾಯಿತು. ಕೃಷಿಯಲ್ಲಿ ಸಾಧನೆ ಮಾಡಿ ಕೇಂದ್ರ ಸರ್ಕಾರದ ಬಿಲೇನಿಯರ್ ಫಾರ್ಮರ್ ಪ್ರಶಸ್ತಿ ಪಡೆದ ತೆಕ್ಕಟ್ಟೆ ರಮೇಶ್ ನಾಯಕ್  ಅವರನ್ನ ಗೌರವಿಸಿ ಪ್ರೊತ್ಸಾಹಿಸಲಾಹಿತು.

Click here

Click here

Click here

Click Here

Call us

Call us

ಶೇಕಡಾ ನೂರು ಫಲಿತಾಂಶ ಬರಲು ಪ್ರಯತ್ನಿಸಿದ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಅಮೃತಕಲಾ ಹಾಗೂ ಗಣಪತಿ ಭಟ್ ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಎಸ್.  ಶೆಟ್ಟಿ ಅವರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಕ್ಲಬ್‍ಗೆ ನೂತನವಾಗಿ ದಿನಕರ ಶೆಟ್ಟಿ ಬೇಳೂರು, ಅರುಣ್ ಕುಮಾರ್ ಶೆಟ್ಟಿ ಉಳ್ತೂರು ಮತ್ತು ಸುರಕ್ಷಾ ಶೆಟ್ಟಿ ಬೇಳೂರು ಅವರನ್ನು ಸೇರ್ಪಡೆಗೊಳಿಸಲಾಯಿತು.

ನಿಕಟಪೂರ್ವ ಅಧ್ಯಕ್ಷ ಕೆ. ಕರುಣಾಕರ್‌ ಶೆಟ್ಟಿ, ಜಿಲ್ಲಾ ರಾಯಭಾರಿ ಅರುಣ್ ಕುಮಾರ್ ಹೆಗ್ಡೆ, ಪ್ರಾಂತೀಯ ಅಧ್ಯಕ್ಷ ಬನ್ನಾಡಿ ಸೋಮನಾಥ್ ಹೆಗ್ಡೆ, ಪ್ರಾಂತೀಯ ಕಾರ್ಯದರ್ಶಿ ಆನಂದ್‌ ಶೆಟ್ಟಿ, ವಲಯಾಧ್ಯಕ್ಷ ಧರ್ಮರಾಜ ಮೊದಲಿಯಾರ್, ಸೀತಾರಾಮ ಶೆಟ್ಟಿ ಮಲ್ಯಾಡಿ, ವಲಯ ಕಾರ್ಯದರ್ಶಿ ಅರುಣ್ ಶೆಟ್ಟಿ ಉಳ್ತೂರು, ಶಂಕರ್ ಶೆಟ್ಟಿ ಬವಲಾಡಿ, ಸುರೇಂದ್ರ ಹೆಗ್ಡೆ, ನಿಕಟಪೂರ್ವ ಕಾರ್ಯದರ್ಶಿ ರಾಜೇಂದ್ರ ಶೆಟ್ಟಿ, ಖಜಾಂಚಿ ಜಯಕರ ಹೆಗ್ಡೆ ಉಪಸ್ಥಿತರಿದ್ದರು. ಕಿಶೋರ ಶೆಟ್ಟಿ ವಂದಿಸಿದರು.

Leave a Reply