ಪ್ರೊ. ಎ. ವಿ. ನಾವಡ ಸಂಪಾದಿಸಿದ ‘ಮುದ್ದಣ ಕೃತಿ ಕರಜನ’ ಕೃತಿ ಬಿಡುಗಡೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು:
‘ಹಳೆಗನ್ನಡ ಹಿಂದಕ್ಕೆ ಸರಿದು ಹೊಸಗನ್ನಡ ಮುನ್ನೆಲೆಗೆ ಬರುವ ಸ್ಥಿತ್ಯಂತರ ಕಾಲದ ಕವಿ ಮುದ್ದಣ’. ತುಳು ಸೇರಿದಂತೆ ಪ್ರಾದೇಶಿಕ ಘಾಟಿನ ಭಾಷೆಯನ್ನು ಬಳಸಿರುವ ಮುದ್ದಣ ಹಳೆಗನ್ನಡ, ಹೊಸಗನ್ನಡ- ವನ್ನು ಹಿತವಾಗಿ ಬೆಸೆದ ಬರಹಗಾರ. ಸರಾಗವಾಗಿ ಆಸಕ್ತಿಯಿಂದ ಓದಿಸಿಕೊಂಡು ಹೋಗುವ ಶೈಲಿ ಅವರದ್ದು ಎಂದು ಸಂಶೋಧಕ ಹಂಪ ನಾಗರಾಜಯ್ಯ ಹೇಳಿದರು.

Call us

Click Here

ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಪ್ರೊ. ಎ. ವಿ. ನಾವಡ ಸಂಪಾದಿಸಿದ ‘ಮುದ್ದಣ ಕೃತಿ ಕರಜನ’ – ಮುದ್ದಣ ಕವಿಯ ಸಮಗ್ರ ಕಾವ್ಯ ಸಂಪುಟ ಬುಧವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಹಳೆಗನ್ನಡ ಕಾವ್ಯಗಳು ಈಗ ಕಪಾಟುಗಳಲ್ಲೇ ಉಳಿಯುತ್ತಿವೆ. ಹೊಸ ತಲೆಮಾರಿನ ಓದುಗರೂ ಆಸಕ್ತಿ ವಹಿಸುತ್ತಿಲ್ಲ. ವಿಶ್ವವಿದ್ಯಾಲಯ-ಎ.ವಿ. ನಾವಡ ಅವರು ಸಂಪಾದಿಸಿರುವ ‘ಮುದ್ದಣ ಕೃತಿ ಕರಜನ’ ಕಾವ್ಯ ಸಂಪುಟದ ಮೊದಲ ಪ್ರತಿಯನ್ನು ಸಾಹಿತಿ ಹಂಪ ನಾಗರಾಜಯ್ಯ ಅವರಿಂದ ವಿಧಾನ ಸಭೆಯ ಅಧ್ಯಕ್ಷ ಯು.ಟಿ.ಖಾದರ್ ಸ್ವೀಕರಿಸಿದರು. ಶೇಷಾದ್ರಿಪುರಂ ಶಿಕ್ಷಣ ದತ್ತಿ ಗೌರವ ಪ್ರಧಾನ ಕಾರ್ಯದರ್ಶಿ ವೂಡೇ ಪಿ. ಕೃಷ್ಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಭಾಗವಹಿಸಿದ್ದರು. ಪ್ರಜಾವಾಣಿ ಚಿತ್ರಗಳಲ್ಲೂ ಮನ್ನಣೆ ಸಿಗುತ್ತಿಲ್ಲ ಎಂದು ವಿಷಾದಿಸಿದರು.

ಕೃತಿ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಮಾತನಾಡಿ, ‘ಮುದ್ದಣ ಬರೆದ ರತ್ನಾವತಿ ಕಲ್ಯಾಣ, ಕುಮಾರವಿಜಯ, ಶ್ರೀರಾಮ ಪಟ್ಟಾಭಿಷೇಕ, ಅದ್ಭುತ ರಾಮಾಯಣ, ಶ್ರೀ ರಾಮಾಶ್ವಮೇಧ ಮುದ್ದಣ ತನ್ನ ಕಾವ್ಯಕ್ಕೆ ಸೃಷ್ಟಿಸಿದ ಅದ್ಭುತ ವಿಮರ್ಶಕಿಯೇ ಮನೋರಮೆ. ಈ ರೀತಿಯ ಸಂಭಾಷಣೆಯನ್ನು ಕಟ್ಟಿಕೊಟ್ಟ ಮೊದಲ ಮತ್ತು ಕೊನೆಯ ಕವಿ ಆತ. ತನ್ನ ಕಥೆಯನ್ನೇ ಹೇಳುವ, ಕೇಳುವ ಹಿಂದಿನ ಪರಂಪರೆಯ ಮುಂದುವರಿದ ಭಾಗ ಅವರು ಎಂದು ಹೇಳಿದರು.

ಕೃತಿಕಾರ ಎ.ವಿ. ನಾವಡ ಅವರು, ‘ಮುದ್ದಣ ಬರೆದ ಹಸ್ತಪ್ರತಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿದೆ. ಅದನ್ನು ಪ್ರಕಟಿಸುವ ಬುದ್ಧಿ ವಿಶ್ವವಿದ್ಯಾಲಯಕ್ಕೆ ಬರಲಿ’ ಎಂದು ಹಾರೈಸಿದರು.

Click here

Click here

Click here

Click Here

Call us

Call us

ಕೃತಿಗಳು ಜೊತೆಗೆ ಬೇರೆ ಹಾಡುಗಳು ಎಲ್ಲವನ್ನು ಸೇರಿಸಿ ತಂದಿರುವ ಈ ಕೃತಿಯು ಗ್ರಂಥ ಸಂಪಾದನೆ ಶಾಸ್ತ್ರದ ಉತ್ತಮ ಆಕರವಾಗಿದೆ. ಆಕರಸೂಚಿ, ಪಠ್ಯ, ತದ್ಭವ, ತುಳುಪದ, ನಿಘಂಟು ಹೀಗೆ ಎಲ್ಲವನ್ನು ಈ ಗ್ರಂಥ ಒಳಗೊಂಡಿದೆ’ ಎಂದು ವಿವರಿಸಿದರು.

ವಿಧಾನಸಭೆ ಅಧ್ಯಕ್ಷ ಯು. ಟಿ.ಖಾದ‌ರ್, ಶೇಷಾದ್ರಿಪುರ ಶಿಕ್ಷಣ ದತ್ತಿ ಗೌರವ ಪ್ರಧಾನ ಕಾರ್ಯದರ್ಶಿ ವೂಡೇ ಪಿ. ಕೃಷ್ಣ, ಕರ್ನಾಟಕ ಸಂಸ್ಕೃತ ವಿ.ವಿ ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ. ವೆಂಕಟೇಶ, ಶೇಷಾದ್ರಿಪುರ ಸಂಜೆ ಕಾಲೇಜಿನ ಪ್ರಾಂಶುಪಾಲ ಎನ್‌.ಎಸ್. ಸತೀಶ್, ಗೋಧೂಳಿ ಕನ್ನಡ ಸಂಘದ ಸಂಚಾಲಕ ಸತ್ಯಮಂಗಲ ಮಹಾದೇವ ಭಾಗವಹಿಸಿದ್ದರು.

ಜಾನಪದ ಸಂಶೋಧಕ ಹಾಗೂ ಹಿರಿಯ ಸಾಹಿತಿ ಪ್ರೊ. ಎ.ವಿ. ನಾವಡ ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು. ಇದಕ್ಕೂ ಮೊದಲು ಕುಂದಾಪುರದ ಭಂಡಾರ್ಕಾರ್ಸ್‌ ಕಾಲೇಜಿನಲ್ಲಿ ಉಪನ್ಯಾಸಕಾರಾಗಿ ಸೇವೆ ಸಲ್ಲಿಸುವುದರ ಜೊತೆಗೆ ಕುಂದನಾಡಿನ ಜಾನಪದ ಸಂಸ್ಕೃತಿಯ ಅಧ್ಯಯನದಲ್ಲಿಯೂ ನಿರಂತರವಾಗಿ ತೊಡಗಿಸಿಕೊಂಡಿದ್ದರು.

Leave a Reply