ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 155 ನೇ ಜಯಂತಿಯ ಅಂಗವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಚಾಲಿತ ವಿಶ್ವದಲ್ಲಿ ಗಾಂಧೀ ತತ್ತ್ವ ಸಿದ್ಧಾಂತಗಳ ಮಹತ್ವದ ಬಗ್ಗೆ, ವಿಶ್ಲೇಷಿಸಿ ಪಬಂಧವನ್ನು ಬರೆಯಲು ಅನುವಾಗುವಂತೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮತ್ತು ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ.
ಜಿಲ್ಲಾ ಮಟ್ಟದ ಸ್ಪರ್ಧೆಗೆ ಪ್ರಬಂಧಗಳನ್ನು ಬರೆದು ಅಕ್ಟೋಬರ್ 31 ರ ಒಳಗಾಗಿ ಇ-ಮೇಲ್ kstaessay.kannada@gmail.com & kstaessay.english@gmail.com ಗೆ ಸಲ್ಲಿಸಬಹುದಾಗಿದೆ. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ನವೆಂಬರ್ 12 ರಂದು ಅಕಾಡೆಮಿಯಲ್ಲಿ ಆಯೋಜಿಸಲಾಗುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಸ್ಥಳದಲ್ಲೇ ಪ್ರಬಂಧವನ್ನು ಬರೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಚಂದ್ರಶೇಖರ ಮೂರ್ತಿ ಎಸ್. ಮೊ: 9686449019, 9686919019 ಹಾಗೂ ದೂ.ಸಂಖ್ಯೆ: 080-29721550 ಅಥವಾ ಅಕಾಡೆಮಿಯ ವೆಬ್‌ಸೈಟ್ www.kstacademy.in ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.