ಮಹಾನಗರಿಯ ಕಮಲಶಿಲೆ ಯಕ್ಷೋತ್ಸವದಲ್ಲಿ ಯಶಸ್ವಿ ಪ್ರದರ್ಶನ ಕಂಡ ಶ್ರೀ ದೇವಿ ಮಹಾತ್ಮೆ ಪ್ರಸಂಗ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು:
ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ಅಮ್ಮನವರ ಭಕ್ತಾದಿಗಳೆಲ್ಲಾ ಸೇರಿ ಮಹಾನಗರಿ ಬೆಂಗಳೂರಿನಲ್ಲಿ ಸಂಯೋಜಿಸಿದ ನಾಲ್ಕನೇ ವರ್ಷದ ಯಶಸ್ವಿ ಯಕ್ಷಗಾನ ಬಯಲಾಟ ಶನಿವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ  ಯಶಸ್ವಿ ಪ್ರದರ್ಶನ ಕಂಡಿತು.

Call us

Click Here

ಕಮಲಶಿಲೆ ಯಕ್ಷಗಾನ ಮೇಳದ ಸಾಂಪ್ರದಾಯಿಕ ರಂಗಸ್ಥಳ ಮತ್ತು ಪುಷ್ಪಾಲಂಕೃತ ಬೆಳ್ಳಿ ತೊಟ್ಟಿಲ ಸೊಬಗಿನಲ್ಲಿ ಕಮಲಶಿಲೆ ಯಕ್ಷೋತ್ಸವ 2024 ಮೇಳೈಸಿತು. ಹಿರಿಯ ಭಾಗವತ ಕಿಗ್ಗ ಹಿರಣ್ಣಯ್ಯ ಆಚಾರ್ ಮತ್ತು ಯುವ ಭಾಗವತ ಗಣೇಶ್ ಶೆಟ್ಟಿ ಬೆಪ್ಡಿ ಹಾಗೂ ಗಣೇಶ್ ಬಿಲ್ಯಾಡಿ ಯವರ ‘ಹಳಬೇರು-ಹೊಸ ಚಿಗುರು’  ಸಮಾಗಮಕ್ಕೆ ಮೆರುಗುತಂದ ಚಂಡೆ-ಮದ್ದಳೆ ಮತ್ತು ಕಾಡು ದೇವಡಿಗರ ಅದ್ಭುತ ನಾದಸ್ವರದ ಜೇಂಕಾರ. ಮಧು-ಕೈಟಭ, ಚಂಡ-ಮುಂಡ, ಶುಂಭ ಮತ್ತು ಕಲಿ ರಕ್ತಬೀಜರ ಸಾಂಪ್ರದಾಯಕ ಬಡಗು ತಿಟ್ಟಿನ ವೇಷ – ಕುಣಿತ ಮಹಾನಗರಿ ಪ್ರೇಕ್ಷಕರ ಮನಸೋರೆಗೊಳಿಸಿದೆ.

ಉಪ್ಪುಂದ ನಾಗೇಂದ್ರರ ವಿದ್ಯುನ್ಮಾಲಿ,  ಮಹಿಷಾಸುರ,  ಶ್ರೀದೇವಿ ಮತ್ತು 65 ಹರೆಯದ ಕೊಚ್ಚಾಡಿ ರಾಮ ದೇವಾಡಿಗರ ರಕ್ತೇಶ್ವರಿ ಪಾತ್ರಗಳ ವೇಷಾಲಂಕಾರ ಮತ್ತು ಆಂಗೀಕ ಅಭಿನಯ ಯಶಸ್ವಿ ಪ್ರದರ್ಶನದ ಕೇಂದ್ರ ಬಿಂದು. ಪ್ರತಿಯೊಬ್ಬ ವೇಷದಾರಿಯ ರಂಗ ಚಟುವಟಿಕೆ, ವೇಷ ಭೂಷಣಗಳು, ಕಲಾ ನೈಪುಣ್ಯತೆ, ಕಲಾವಿದರ ತಾರಾ ಮೌಲ್ಯ ಮತ್ತು ಮನೋಜ್ಞ ಅಭಿನಯ, ಸಂಪೂರ್ಣ ಬಡಗುತ್ತಿಟ್ಟಿನ  ಶೈಲಿಯಲ್ಲಿನ ದೇವಿ ಮಹಾತ್ಮೆ ಪ್ರಸಂಗಕ್ಕೆ ಮನಸೋತ ಮಹಾನಗರಿಯ ಪ್ರೇಕ್ಷಕರು ಮನಸೋತರು.

Leave a Reply