ಸರಸ್ವತಿ ವಿದ್ಯಾಲಯದಲ್ಲಿ ಭಾವೈಕ್ಯತಾ ಸಪ್ತಾಹ

Call us

Call us

Call us

ಗಂಗೊಳ್ಳಿ: ಪ್ರತಿಯೊಬ್ಬ ವ್ಯಕ್ತಿಯೂ ಮೊದಲು ತಾನು ಎಲ್ಲರಂತೆ ಒಬ್ಬ ಮನುಷ್ಯಜೀವಿ ಎನ್ನುವುದನ್ನು ನೆನಪಿಡಬೇಕು. ಜಾತಿ ಧರ್ಮ ವರ್ಣಗಳ ಆಧಾರದ ಮೇಲೆ ಯಾವ ವ್ಯಕ್ತಿಯನ್ನೂ ಅಳೆಯಬಾರದು. ಬೇರೆಯವರು ನಮಗೇನು ಮಾಡಬಾರದೆಂದು ಬಯಸುತ್ತೇವೋ ನಾವು ಅದನ್ನು ಬೇರೆಯವರಿಗೆ ಮಾಡಬಾರದು. ಭಾವೈಕ್ಯತೆ ಅನ್ನುವುದು ಕೃತಿಯಲ್ಲಿ ಮೂಡಿಬರಬೇಕು ಎಂದು ಸರಸ್ವತಿ ವಿದ್ಯಾಲಯದ ವಿದ್ಯಾರ್ಥಿನಿಯರಾದ ಆಯಿಷಾ ರೆಝಿನಾ ಮತ್ತು ಜಯಲಕ್ಷ್ಮಿ ಅಭಿಪ್ರಾಯಪಟ್ಟರು.

Call us

Click Here

ಅವರು ಇತ್ತೀಚೆಗೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಇವರ ಜಂಟಿ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಭಾವೈಕ್ಯತಾ ಸಪ್ತಾಹದ ಉದ್ಘಾಟನಾ ಕಾರ‍್ಯಕ್ರಮದಲ್ಲಿ ಮಾತನಾಡಿದರು.
ಸರಸ್ವತಿ ವಿದ್ಯಾಲಯ ಕಾಲೇಜಿನ ಪ್ರಾಂಶುಪಾಲ ಆರ್ ಎನ್ ರೇವಣ್‌ಕರ್ ಅಧ್ಯಕ್ಷತೆ ವಹಿಸಿದ್ದರು. ಸರಸ್ವತಿ ವಿದ್ಯಾಲಯದ ಅರ್ಥಶಾಸ್ತ್ರ ಉಪನ್ಯಾಸಕಿ ಸುಗುಣ ಆರ್ ಅವರು ಸಪ್ತಾಹಕ್ಕೆ ಚಾಲನೆ ನೀಡಿದರು. ಉಪನ್ಯಾಸಕಿ ಕವಿತಾ ಎಮ್ ಸಿ ಸ್ವಾಗತಿಸಿದರು.ದಿಶಾ, ಅನುಷಾ,ಅಶ್ವಿನಿ,ಐಶ್ವರ್ಯ,ಆಶಾ,ಸೌಜನ್ಯ,ದಶಮಿ,ಆಶಾ ಭಾವೈಕ್ಯ ಗಾನ ಹಾಡಿದರು. ಕನ್ನಡ ಉಪನ್ಯಾಸಕ ಸುಜಯೀಂದ್ರ ಹಂದೆ ಕಾರ‍್ಯಕ್ರಮ ನಿರೂಪಿಸಿದರು.ಆಶ್ಮಿತಾ ಧನ್ಯವಾದ ಅರ್ಪಿಸಿದರು.

ವರದಿ: ನರೇಂದ್ರ ಎಸ್ ಗಂಗೊಳ್ಳಿ.

Leave a Reply