ಬಿಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ: ರಂಗ ಮಂದಿರದ ಶಂಕುಸ್ಥಾಪನೆ

Click Here

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ತಾಲೂಕಿನ ಬಿಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ ಸಂಘದ ನೇತೃತ್ವದಲ್ಲಿ ನೂತನವಾಗಿ ನಿರ್ಮಾಣವಾಗುವ ರಂಗ ಮಂದಿರದ ಶಂಕುಸ್ಥಾಪನೆ ಕಾರ್ಯಕ್ರಮ ಡಿ.19ರಂದು ನಡೆಯಿತು.

Call us

Click Here

ಹಿರಿಯ ನಾಗರಿಕರಾದ ವಿಶ್ವೇಶ್ವರ ಅಡಿಗ ಶಂಕುಸ್ಥಾಪನೆ ನೆರವೇರಿಸಿ, ಸರಕಾರಿ ಶಾಲೆಯನ್ನು ಉಳಿಸಿ, ಇಲ್ಲಿನ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ ಇದಕ್ಕೆ ಎಲ್ಲರ ಸಹಕಾರ ಬೇಕು ಎಂದರು.

ಡಾ. ಗೋವಿಂದ ಬಾಬು ಪೂಜಾರಿ ಅವರು ಮಾತನಾಡಿ, ನಮ್ಮೂರ ಶಾಲೆಯನ್ನು ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದತ್ತು ಸ್ವೀಕಾರ ಮಾಡಿ ವಿದ್ಯಾರ್ಥಿಗಳ  ಕಲಿಕೆಗೆ ಪೂರಕವಾಗಿ ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳಾಗಿದೆ. ಶಾಲಾ ವಾಹನ ಒದಗಿಸಲಾಗಿದೆ, ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ, ಸ್ಮಾಟ್ ಕ್ಲಾಸ್ ಸೇರಿದಂತೆ ಖಾಸಗಿ ಶಾಲೆಗಳಿಗೆ ಪೈಪೊಟಿಯಂತೆ ಮಾದರಿ ಶಾಲೆಯನ್ನಾಗಿ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ ನಾವು ಕಲಿತ ಶಾಲೆಯನ್ನು ಅಭಿವೃದ್ಧಿಪಡಿಸಲು ಎಲ್ಲರು ಶ್ರಮಿಸಬೇಕು ಎಂದರು.

ಉದ್ಯಮಿ ಭಾಸ್ಕರ್ ಪೂಜಾರಿ ಬಿಜೂರು, ಸವಿತಾ ದಿನೇಶ್ ಗಾಣಿಗ, ಶ್ರೀಧರ್ ಬಿಜೂರು, ನಿವೃತ್ತ ಮುಖ್ಯಶಿಕ್ಷಕ ಗಿರೀಶ್ ಶ್ಯಾನುಬಾಗ್, ಕೃಷ್ಣ ಬಿಜೂರು, ಎಸ್.ಡಿ.ಎಂ. ಸಿ ಅಧ್ಯಕ್ಷೆ ಶಾರದಾ ದೇವಾಡಿಗ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಂದೀಶ್ ದೇವಾಡಿಗ, ರಾಜೇಂದ್ರ ಬಿಜೂರು, ರಾಘವೇಂದ್ರ ದೇವಾಡಿಗ ಬೈಟು, ಜಯರಾಮ ಶೆಟ್ಟಿ ಬಿಜೂರು, ಸುರೇಶ ಬಿಜೂರು, ಆನಂದ ಪೂಜಾರಿ, ತಿಮ್ಮಪ್ಪ ದೇವಾಡಿಗ, ಉಮೇಶ್ ಮೊಗವೀರ, ಸುಬ್ರಹ್ಮಣ್ಯ ಎಸ್.ಬಿ., ರಾಘ ಚಿಕ್ಕಟ್ಟಿ, ಶಂಕರ ತಿಪ್ಪನಡಿ, ಮುಖ್ಯ ಶಿಕ್ಷಕ ಮಂಜುನಾಥ ಎಸ್. ಸಂಘದ ಹಾಗೂ ಎಸ್‌ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು.

Leave a Reply