ಬಳ್ಕೂರು: ಬ್ಯಾಂಕಿಗೆಂದು ತೆರಳಿದ ಮಹಿಳೆ ಆತ್ಮಹತ್ಯೆಗೆ ಶರಣು

Click Here

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಮಹಿಳೆಯೋರ್ವರು ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಳ್ಕೂರು ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಬಳ್ಕೂರು ಸಮೀಪದ ಬಿ.ಹೆಚ್. ರೋಡ್‌ ನಿವಾಸಿ ವಿನಯ್ ಭಂಡಾರಿ ಎಂಬುವರ ಪತ್ನಿ ಶ್ರುತಿ (39) ಎಂದು ಗುರುತಿಸಲಾಗಿದೆ.

Call us

Click Here

ಹೇರ್‌ ಸೆಲೂನ್‌ ನಡೆಸುತ್ತಿದ್ದು ವಿನಯ್‌ ಅವರ ಪತ್ನಿ ಶ್ರುತಿ ಆತ್ಮಹತ್ಯೆಗೆ ಶರಣಾಗಿರುವುದು ಕುಟುಂಬಿಕರಿಗೆ ಆಘಾತವನ್ನುಂಟುಮಾಡಿದೆ. ಕೆಲ ವರ್ಷಗಳ ಹಿಂದೆ ಅವರು ಪ್ರೀತಿಸಿ ಮದುವೆಯಾಗಿದ್ದು, ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಹೊಸದಾಗಿ ಖರೀದಿ ಮಾಡಿದ್ದ ಜಾಗದ ನೊಂದಣಿಗಾಗಿ ಶೃತಿ ಹಾಗೂ ವಿನಯ್‌ ಇಬ್ಬರೂ ಕುಂದಾಪುರಕ್ಕೆ ಹೋಗಿ ಮನೆಗೆ ಮರಳಿದ್ದು, ಬಳಿಕ ವಿನಯ್‌ ಅವರು ಕೆಲಸಕ್ಕೆ ತೆರಳಿದ್ದರು. ಜಾಗದ ಮಾಲಕರಿಗೆ ಹಣ ನೀಡಲು ಶ್ರುತಿ ಅವರ ಖಾತೆಯಿಂದ ಚೆಕ್‌ ನೀಡಲಾಗಿತ್ತು. ಅವರು ಚೆಕ್‌ ವಿತ್‌ ಡ್ರಾ ಮಾಡುವ ವೇಳೆಗೆ ಸ್ವಲ್ಪ ಹಣ ಕಡಿಮೆ ಇರುವುದಾಗಿ ತಿಳಿಸಿದ್ದರು. ಅದನ್ನು ಪರೀಕ್ಷಿಸುವ ಸಲುವಾಗಿ ಶ್ರುತಿ ಅವರು ಕಂಡ್ಕೂರಿನ ಬ್ಯಾಂಕಿಗೆ ಸ್ಕೂಟಿಯಲ್ಲಿ ತೆರಳಿದ್ದರು. ಆದರೆ ಸ್ವಲ್ಪ ಹೊತ್ತಿನ ಬಳಿಕ ಅವರು ಪೋನ್‌ ಕರೆ ಸ್ವೀಕರಿಸಿರಲಿಲ್ಲ.

ಬ್ಯಾಂಕಿಗೆಂದು ತೆರಳಿದವರು ಬಳ್ಕೂರಿನ ವಾರಾಹಿ ಹೊಳೆಯ ಬದಿಯಲ್ಲಿ ಸ್ಕೂಟಿಯನ್ನು ನಿಲ್ಲಿಸಿರುವುದು ಸಾರ್ವಜನಿಕರ ಗಮನಕ್ಕೆ ಬಂದಿದ್ದು, ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಶೋಧ ಕಾರ್ಯ ನಡೆಸಿದ್ದಾರೆ. ಬುಧವಾರ ಸಂಜೆ ಮೃತ ದೇಹವನ್ನು ಮೇಲಕ್ಕೆತ್ತಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತರು ಪತಿ, ಪುತ್ರಿ ಹಾಗೂ ಬಂಧುಗಳನ್ನು ಅಗಲಿದ್ದಾರೆ.

ಯಾವುದೇ ಸಮಸ್ಯೆಗೂ ಆತ್ಮಹತ್ಯೆ ಪರಿಹಾರವಲ್ಲ. ಅಂತಹ ಕಠಿಣ ಸಂದರ್ಭದಲ್ಲಿ ನಿಮ್ಮ ಆತ್ಮೀಯರ ಜೊತೆ ಮಾತನಾಡಿ. ಇಲ್ಲವೇ ವೈದ್ಯಕೀಯ ಸಲಹೆಗಾರರನ್ನು ಸಂಪರ್ಕಿಸಿ

Click here

Click here

Click here

Click Here

Call us

Call us

Leave a Reply