ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮಾಜಿ ಶಾಸಕ ಎ. ಜಿ. ಕೊಡ್ಗಿ ಅವರ ಕನಸಿನ ಕೂಸಾದ ಪಶ್ಚಿಮವಾಹಿನಿ ಯೋಜನೆಯಿಂದ ಕರಾವಳಿಯ ಮೂರು ಜಿಲ್ಲೆಯ ಕೃಷಿಕರಿಗೆ ಸಾಕಷ್ಟು ಅನುಕೂಲವಾಗಿದ್ದರೂ, ಸಂಬಂತ ಅಧಿಕಾರಿಗಳ ಅಸಮಪರ್ಕಕ ಕಾರ್ಯನಿರ್ವಹಣೆಯಿಂದಾಗಿ ಇತ್ತೀಚಿನ ಬಹುತೇಕ ಕಿಂಡಿ ಅಣೆಕಟ್ಟುಗಳ ಕಾಮಗಾರಿ ಕಳಪೆಯಾಗಿದ್ದು, ರೈತರಿಗೆ ಸಾಕಷ್ಟು ಅನಾನುಕೂಲತೆ ಸೃಷ್ಟಿಸುತ್ತಿದೆ ಎಂದು ಜಿಲ್ಲಾ ರೈತರ ಸಂಘದ ಅಧ್ಯಕ್ಷ ಹಾಗೂ ಮಾಜಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಕಿಡಿಕಾರಿದರು.
ಹೇರಂಜಾಲು ಗುಡೇ ದೇವಸ್ಥಾನ ಏತ ನೀರಾವರಿ ಯೋಜನೆಯ ಸಂತ್ರಸ್ತರ ಸಮಾಲೋಚನೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಯಾವುದೇ ಕಾಮಗಾರಿ ಪರಿಪೂರ್ಣ ಆಗಬೇಕಾದರೆ ಸ್ಥಳೀಯರು ಕಾಮಗಾರಿಯ ಆರಂಭದಲ್ಲೇ ಜಾಗ್ರತೆಯಿಂದ ಎಚ್ಚರಿಕೆ ವಹಿಸುವುದು ಅಗತ್ಯ, ನಮಗೆ ಅಕಾರಿಗಳೇ ಉತ್ತರದಾಯಿಗಳೇ ಹೊರತು ಗುತ್ತಿಗೆದಾರರಲ್ಲ ಎಂದ ಅವರು ರೈತರ ಹೋರಾಟಕ್ಕೆ ಹಾಗೂ ಸಂತ್ರಸ್ತರ ಜೊತೆಗೆ ನಿಲ್ಲುತ್ತೇವೆ, ನ್ಯಾಯುತ ಹೋರಾಟಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದರು.
ರೈತ ಸಂಘದ ಮುಖಂಡ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ, ಯೋಜನೆ ಕುರಿತು ಮಾಹಿತಿ ತಿಳಿದುಕೊಳ್ಳಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಗುತ್ತಿಗೆದಾರರು ಸರಕಾರವನ್ನು ನಡೆಸುತ್ತಿರುವ ಅನುಮಾನ ಜನರಲ್ಲಿ ಉಂಟಾಗಿದೆ. ಹೇರಂಜಾಲು ನದಿಯಲ್ಲಿ ಸಂಕ್ರಾಂತಿ ಬಳಿಕ ಕಟ್ಟಿನ ನೀರಿನ ಹರಿವು ಕಡಿಮೆ ಆಗುವುದರಿಂದ 120 ದಿನಗಳ ನೀರು ಎತ್ತುವ ಸರ್ಕಾರದ ಆಶಯ ಈಡೇರುವುದಿಲ್ಲ, ಹೊಳೆಯ ಎರಡು ಕಡೆಯ ಗದ್ದೆಗಳಿಗೆ ನೀರು ನುಗ್ಗಿ ಹಾನಿಯಾಗುತ್ತದೆ.
ಗುತ್ತಿಗೆದಾರರ ಯೋಜನೆಯಿಂದ ಮೂರು ಗ್ರಾಮದ ಜನರು ಸಮಸ್ಯೆ ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಯಂತಿ, ಕ್ರಷ್ಣ ಪೂಜಾರಿ, ಪ್ರಭಾಕರ್ ಶೆಟ್ಟಿ, ಅನೂಸುಯ ಟೇಚರ್, ಶೇಖರ ಶೆಟ್ಟಿ, ಸದಾನಂದ ಶೆಟ್ಟಿ ಮಾತನಾಡಿದರು.
ಸರಕಾರಿ ನಡಾವಳಿ ಹಾಗೂ ಅಂದಾಜು ಪಟ್ಟಿಯಂತೆ, ಹಳಗೇರಿ ಕಟ್ಟಿನ ಕೆಳಗಡೆ ಜಾಕ್‌ವೆಲ್‌ನ್ನು ನಿರ್ಮಿಸಿ ಅದರಿಂದ ನೀರನ್ನು ಕೆರೆಗಳಿಗೆ ಹಾಯಿಸಬೇಕಾಗಿರುತ್ತದೆ. ಆದರೆ ಈಗ ಹಳಗೇರಿ ಕಟ್ಟಿನ ಮೇಲ್ಗಡೆ ಜಾಕ್‌ವೆಲ್ ಕಾಮಗಾರಿ ಆರಂಭಿಸಿದ್ದು ಅದನ್ನು ತಡೆಹಿಡಿದು, ಕಟ್ಟಿನ ಕೆಳಗಡೆ ನಿರ್ಮಿಸುವುದು. ಉಪ್ಪುನೀರು ತಡೆಗಟ್ಟಿನಲ್ಲಿ ಇನ್ನೂ ಒಂದು ಮೀಟರ್ ನೀರನ್ನು ಏರಿಸುವಂತೆ ಇರುತ್ತದೆ. ಈಗಾಗಲೇ ಈ ಕಟ್ಟಿನ ನೀರು ಪೂರ್ಣ ಪ್ರಮಾಣ ಏರಿದಾಗ ಕ್ರಷಿಭೂಮಿಗೆ ನುಗ್ಗುತ್ತಿದ್ದು, ಇನ್ನೂ ಒಂದು ಮೀಟರ್ ಏರಿಸುವುದರಿಂದ 3 ಗ್ರಾಮಗಳು, ಅನೇಕ ಗದ್ದೆಗಳು, ಕೃಷಿ ತೋಟಗಳು ಮುಳುಗುತ್ತದೆ.
ಹಾಗೆ ಯೋಜನೆ ರೀತಿಯಲ್ಲಿ ಅಂದಾಜು ಪಟ್ಟಿಯಲ್ಲಿರುವಂತೆ ಹೊಳೆದಂಡೆ ಕಟ್ಟುವುದರಿಂದ (ಸೀಪೇಜ್ ವಾಟರ್) ಉಜುರುನೀರು ಗದ್ದೆಗೆ ಬರುವುದಲ್ಲದೇ ಮಳೆಗಾಲದ ಪ್ರವಾಹದ ನೀರು ಹೋಗಲಿಕ್ಕೂ ಕೂಡ ಸ್ಥಳಾವಕಾಶ ಇಲ್ಲದ ರೀತಿಯಲ್ಲಿ ಹೊಳೆಯ ಎರಡೂ ಕಡೆಗಳಲ್ಲಿ ಹೊಳೆದಂಡೆಯನ್ನು ಕಟ್ಟುವುದನ್ನು ಹಾಗೂ ನೀರು ಏರಿಸುವುದನ್ನು ಯೋಜನೆಯಿಂದ ಕೈ ಬಿಡುವುದು, ಅಂದಾಜು 230 ಹೆಕ್ಟೇರ್ ಭೂಪ್ರದೇಶದಲ್ಲಿ ಎರಡನೇ ಬೆಳೆ ಮಾಡುವುದು ಈ ಯೋಜನೆಯಿಂದ ಅಸಾಧ್ಯವಾಗಿರುತ್ತದೆ. ಈ ಯೋಜನೆ ಅಚ್ಚುಕಟ್ಟು ಪ್ರದೇಶವಾಗಿರುವುದರಿಂದ ನೀರಾವರಿ ತೆರಿಗೆ ಈ ಪ್ರದೇಶಗಳಿಗೆ ಬರುವ ಸಾಧ್ಯತೆಗಳು ಇರುವುದರಿಂದ ಈ ತೆರಿಗೆಯನ್ನು ವಿಸುವುದಿಲ್ಲವೆಂದು ಸಣ್ಣನೀರಾವರಿ ಇಲಾಖೆಯಿಂದ ಖಾತರಿಪತ್ರ ನೀಡುವಂತೆ ನಿರ್ಣಯಿಸಲಾಯಿತು.