ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಲಾವಣ್ಯ ರಿ. ಬೈಂದೂರು 48ನೇ ವಾರ್ಷಿಕೋತ್ಸವ ಹಾಗೂ ಬೈಂದೂರು ಮಾಜಿ ಶಾಸಕ ದಿ. ಕೆ. ಲಕ್ಷ್ಮೀನಾರಾಯಣ ಸ್ಮರಣಾರ್ಥ “ರಂಗಪಂಚಮಿ-2025” ರಂಗತೋತ್ಸವ ಮಾರ್ಚ್ 1 ರಿಂದ 5ರ ವರೆಗೆ ಶ್ರೀ ಶಾರಾದಾ ವೇದಿಕೆಯಲ್ಲಿ ಪ್ರತಿದಿನ ಸಂಜೆ 6.30ಕ್ಕೆ ನಡೆಯಲಿದೆ.
ಮಾರ್ಚ್ 1ರಂದು 48ನೇ ವಾರ್ಷಿಕೋತ್ಸವ ಹಾಗೂ ರಂಗೋತ್ಸವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಬೈಂದೂರು ಲಾವಣ್ಯ ಅಧ್ಯಕ್ಷರಾದ ನರಸಿಂಹ ಬಿ. ನಾಯಕ್ ಅವರು ವಹಿಸಲಿದ್ದಾರೆ. ಧಾರವಾಡ ಉದ್ಯಮಿ ಯು.ಬಿ.ಶೆಟ್ಟಿ ಅವರು ಉದ್ಘಾಟನೆ ನೆರವೆರಿಸಲಿದ್ದಾರೆ. ಕುಂದಾಪುರ ಪ್ರಥಮ ದರ್ಜೆ ಗುತ್ತಿಗೆದಾರರಾದ ಬಿಜೂರು ರಾಮಕೃಷ್ಣ ಶೇರುಗಾರ್ ಅವರು ಶುಭಸಂಸನೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಮೋಹನ್ ರೇವಣ್ಕರ್ ಇನ್ನಿತರರು ಉಪಸ್ಥಿರಿರುವರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಕೆ. ಬಾಬು ಶೆಟ್ಟಿ ಅಭಿನಂದನೆ ಮಾಡಲಿದ್ದಾರೆ. ಈ ವೇಳೆ ಹಿರಿಯ ಕಲಾವಿದರಾದ ಗೋವಿಂದ ಎಂ. ಹಾಗೂ ಸಂಗೀತ ಕಲಾವಿದರಾದ ಕೃಷ್ಣ ಕಾಮತ್ ಹಾಲಾಡಿ ಅವರಿಗೆ ಸನ್ಮಾನ ಮಾಡಲಿದ್ದಾರೆ.
ಅದೇ ದಿನ ಲಾವಣ್ಯ ರಿ. ಬೈಂದೂರು ಇವರಿಂದ ಆಲಿಬಾಬಾ ಮತ್ತು 40 ಕಳ್ಳರು ನಾಟಕ ಪ್ರದರ್ಶನಗೊಳ್ಳಲಿದೆ.
ಮಾರ್ಚ್ 2ರಂದು ಬೆಂಗಳೂರು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ತಲ್ಲೂರು ಶಿವರಾಮ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಲಿದ್ದು, ಇನ್ನಿತರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಉಪ್ಪುಂದ ಖ.ರೈ.ಸೇ.ಸ. ಸಂಘದ ಅಧ್ಯಕ್ಷರಾದ ಪ್ರಕಾಶ್‌ಚಂದ್ರ ಶೆಟ್ಟಿ ಅಭಿನಂದನೆ ಮಾಡಲಿದ್ದಾರೆ. ಈ ವೇಳೆ ಖ್ಯಾತ ಗಾಯಕಿ ಮೇಘನಾ ಕುಂದಾಪುರ ಹಗೂ ಯಕ್ಷಗಾನ ಭಾಗವತರು ಕೃಷ್ಣಯ್ಯ ಬೈಂದೂರು ಅವರಿಗೆ ಸನ್ಮಾನ ಮಾಡಲಿದ್ದಾರೆ.
ಅದೇ ದಿನ ಲಾವಣ್ಯ ಮಹಿಳಾ ಮತ್ತು ಮಕ್ಕಳ ಯಕ್ಷಗಾನ ತಂಡ ಇವರಿಂದ ಶ್ರೀ ಕೃಷ್ಣ ಲೀಲೆ – ಕಂಸವಧೆ ನಾಟಕ ಪ್ರದರ್ಶನಗೊಳ್ಳಲಿದೆ.
ಮಾರ್ಚ್ 3ರಂದು ಮಂಗಳೂರು ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀಧರ ಪಿ. ಅವರು ಅಧ್ಯಕ್ಷತೆ ವಹಿಸಲಿದ್ದು. ಇನ್ನಿತರರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಕೊಂಕಣೆ ರಂಗ ಕಲಾವಿದರಾದ ಶಶಿಧರ ಶೆಣೈ ನಾಯ್ಕನಕಟ್ಟೆ, ಕಲಾವಿದರಾದ ಪ್ರಶಾಂತ ಮಯ್ಯ ದಾರಿಮಕ್ಕಿ ಮತ್ತು ಶ್ರೀಧರ ಗಾಣಿಗ ಉಪ್ಪುಂದ ಅವರಿಗೆ ಸನ್ಮಾನ ಮಾಡಲಿದ್ದಾರೆ.
ಅದೇ ದಿನ ಶ್ರೀ ನಂದಿಕೇಶ್ವರ ನಾಟಕ ಸಂಘ ಮಂಗಳೂರು ಇವರಿಂದ ಮುದುಕನ ಮದುವೆ ನಾಟಕ ಪ್ರದರ್ಶನಗೊಳ್ಳಲಿದೆ.
ಮಾರ್ಚ್ 4ರಂದು ಮರವಂತೆ ಚೇತನ ಚಿಕಿತ್ಸಾಲಯದ ಡಾ. ರೂಪಶ್ರೀ ಮರವಂತೆ ಅಧ್ಯಕ್ಷತೆ ವಹಿಸಲಿದ್ದು, ಇನ್ನಿತರರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಕೊಂಕಣೆ ರಂಗ ಕಲಾವಿದರಾದ ಜೋಸೆಫ್ ಫೆರ್ನಾಂಡಿಸ್ ಬೈಂದೂರು ಹಾಗೂ ಹಿರಿಯ ಮದ್ದಲೆ ವಾದಕರು ನಾರಾಯಣ ದೇವಾಡಿಗ ಹೆಗ್ಗಳೆಮನೆ ಅವರಿಗೆ ಸನ್ಮಾನ ಮಾಡಲಿದ್ದಾರೆ.
ಅದೇ ದಿನ “ನಟನಾ” ಮೈಸೂರು ಇವರಿಂದ ಪ್ರಮೀಳಾರ್ಜುನೀಯಂ ನಾಟಕ ಪ್ರದರ್ಶನಗೊಳ್ಳಲಿದೆ.
ಮಾರ್ಚ್ 5ರಂದು ಉಪ್ಪುಂದ ಖ.ರೈ.ಸೇ.ಸ. ಸಂಘದ ಕಾರ್ಯನಿರ್ವಾಹಣಾಧಿಕಾರಿಯಾದ ವಿಷ್ಣು ಆರ್. ಪೈ ಅಧ್ಯಕ್ಷತೆ ವಹಿಸಲಿದ್ದು, ಇನ್ನಿತರರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಖ್ಯಾತ ಗಾಯಕಿ ಪೂರ್ಣಿಮಾ ವಿ. ಪೈ ಮತ್ತು ಉಡುಪಿ ರಂಗಭೂಮಿ ಸಂಗೀತ ನಿರ್ದೆಶಕರಾದ ಅಣ್ಣಪ್ಪ ದೇವಾಡಿಗ ಬಿಜೂರು ಅವರಿಗೆ ಸನ್ಮಾನ ಮಾಡಲಿದ್ದಾರೆ.
ಅದೇ ದಿನ “ನಟನಾ” ಮೈಸೂರು ಇವರಿಂದ ಉಷಾಹರಣ ನಾಟಕ ಪ್ರದರ್ಶನಗೊಳ್ಳಲಿದೆ.