ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕು ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ಬೈಂದೂರು ಇತಿಹಾಸದಲ್ಲಿ ಪ್ರಥಮ ಬಾರಿಗೆ ಬೈಂದೂರು-ಗಂಗಾನಾಡು ರಸ್ತೆಯ ಭರತನಗರದಲ್ಲಿ ಸೌಪರ್ಣಿಕ ಡೆವಲಪರ‍್ಸ್ ಹಾಗೂ ಮಹಾವೀರ ಕನ್ಸ್ಸ್ಟ್ರಕ್ಷನ್ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ’ಓಂ ಮಹಾವೀರ’ ಸುಸಜ್ಜಿತ ವಸತಿ ಸಮುಚ್ಚಯಕ್ಕೆ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಲಾಯಿತು. ಈ ಸಂದರ್ಭ ಜಿ.ಪಂ ಸದಸ್ಯ ಶಂಕರ ಪೂಜಾರಿ, ಕೆ. ಬಾಬು ಶೆಟ್ಟಿ, ಕೊಲ್ಲೂರು ದೇವಳದ ಮಾಜಿ ಧರ್ಮದರ್ಶಿ ಜಯಾನಂದ ಹೋಬಳಿದಾರ್, ಉದ್ಯಮಿಗಳಾದ ಟಿ. ನಾರಾಯಣ ಹೆಗ್ಡೆ, ಕೆ. ವೆಂಕಟೇಶ ಕಿಣಿ, ಭೀಮೇಶ್ ಕುಮಾರ್, ನಾಗೇಶ ನಾಯ್ಕ್ ಗೊರಟೆ, ಗೋಪಾಲಕೃಷ್ಣ ಜಿ. ಮುಂತಾದವರು ಹಾಜರಿದ್ದರು.
ಭರತ್ ನಗರದಲ್ಲಿ ನಿರ್ಮಾಣವಾಗಲಿರುವ 1 ಬಿಹೆಚ್‌ಕೆ ಹಾಗೂ 2 ಬಿಹೆಚ್‌ಕೆ ಅಪಾರ್ಟ್‌ಮೆಂಟ್‌ಗಳು ಎಲ್ಲಾ ರೀತಿಯಲ್ಲಿಯೂ ಅನುಕೂಲಕರವಾಗಿದೆ. ನೂತನ ಅಪಾರ್ಟ್‌ಮೆಂಟ್ ಬೈಂದೂರು ರೈಲ್ವೆ ನಿಲ್ದಾಣಕ್ಕೆ ಹತ್ತಿರದಲ್ಲಿದೆ. 500ಮೀಟರ್ ದೂರದಲ್ಲಿ ಸರಕಾರಿ ಪ್ರಥಮದರ್ಜೆ ಕಾಲೇಜು, 700 ಮೀಟರ್ ದೂರದಲ್ಲಿ ಸೈಂಟ್‌ಥಾಮಸ್ ರೆಸಿಡೆನ್ಸಿಯಲ್ ಶಾಲೆ, ಹಾಗೂ 1.5ಕಿ.ಮೀ ದೂರದಲ್ಲಿ ಮುಖ್ಯ ಬಸ್ ನಿಲ್ದಾಣ, ಮಾರ್ಕೆಟ್ ಹಾಗೂ ಇನ್ನಿತರ ಸೇವೆಗಳು ಲಭ್ಯವಾಗಲಿದೆ.
ಇದನ್ನೂ ಓದಿ ► ಬೈಂದೂರಿನಲ್ಲಿ ಪ್ರಪ್ರಥಮ ಭಾರಿಗೆ ಸರ್ವ ಸುಸಜ್ಜಿತ ವಸತಿ ಸಮುಚ್ಚಯ – http://kundapraa.com/?p=24076



















