Site icon Kundapra.com ಕುಂದಾಪ್ರ ಡಾಟ್ ಕಾಂ

ಸಳ್ಕೋಡು ಶಾಲೆಯಲ್ಲಿ ಬೀಜ ಬಿತ್ತನೆ ಅಭಿಯಾನನಕ್ಕೆ ಚಾಲನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು:
ಸಮೀಪದ ಸಳ್ಕೋಡು ಸ.ಹಿ.ಪ್ರಾ. ಶಾಲೆಯಲ್ಲಿ ಕುಂದಾಪುರ ಪ್ರಾದೇಶಿಕ ಅವರಣ್ಯ ವಲಯದ ಬೀಜ ಬಿತ್ತನೆ ಅಭಿಯಾನ 2022-23 ನಡೆಯಿತು.

ಬೀಜ ಬಿತ್ತೋಣ ಅರಣ್ಯ ಬೆಳೆಸೋಣ ಧ್ಯೆಯ ವಾಕ್ಯದೊಂದಿಗೆ ಬೀಜ ಬಿತ್ತನೆಗೆ ಚಾಲನೆ ನೀಡಿಲಾಯಿತು. ಜೊತೆಗೆ ಸಸಿ ಹಾಗೂ ಸೀಡ್ ಬಾಲ್ ವಿತರಿಸಲಾಯಿತು.

ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷರಾದ ಸುರೇಂದ್ರ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಯಾಗಿ ಜಡ್ಕಲ್ ಗ್ರಾಮ ಪಂಚಾಯತ್ ಸದಸ್ಯರಾದ ನಾಗೇಶ್ ನಾಯ್ಕ್, ಗ್ರಾಮ ಅರಣ್ಯ ಸಮಿತಿ ಉಪಾಧ್ಯಕ್ಷರಾದ ಮಹಾಬಲ ಪೂಜಾರಿ, ಶಾಲಾ ಮುಖ್ಯೋಪಾಧ್ಯಾಯರಾದ ಬಾಬು ಗೌಡ, ಸೇವಾಪ್ರತಿನಿಧಿ ರಾಮ ಶೆಟ್ಟಿ ಅತ್ತಿಕಾರ್, ಪರಿಸರ ಪ್ರೇಮಿ ಸಂದೇಶ್ ಪ್ರಭು ಉಪಸ್ಥಿತರಿದ್ದರು.

ಉಪವಲಯ ಅರಣ್ಯಾಧಿಕಾರಿ ಸುನಿಲ್ ಪ್ರಾಸ್ತಾವಿಕ ಮಾತನಾಡಿದರು. ಬಾಬು ಗೌಡ ಅವರು ಸ್ವಾಗತಿಸಿ, ಅರಣ್ಯ ರಕ್ಷಕರಾದ ಬಸವರಾಜ್ ಕಾರ್ಯಕ್ರಮ ನಿರ್ವಹಿಸಿ, ಹರಿಪ್ರಸಾದ್ ವಂದಿಸಿದರು.

Exit mobile version