Site icon Kundapra.com ಕುಂದಾಪ್ರ ಡಾಟ್ ಕಾಂ

ಡಾ| ಬಿ. ಬಿ. ಹೆಗ್ಡೆ ಕಾಲೇಜು: ವಿಸ್ತರಣಾ ಚಟುವಟಿಕೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್ ವಿಭಾಗವು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಚಿಕೆನ್ ಸಾಲ್ ನಲ್ಲಿ ವಿಸ್ತರಣಾ ಚಟುವಟಿಕೆಯನ್ನು ಹಮ್ಮಿಕೊಂಡಿದ್ದು, ಶಾಲಾ ಮಕ್ಕಳಿಗೆ ಬರೆಯುವ ಪರಿಕರಗಳನ್ನು ನೀಡಿದ್ದಲ್ಲದೆ, ಶಿಸ್ತು, ಸ್ವಚ್ಛತೆ, ಉತ್ತಮ ನಡವಳಿಕೆಗಳ ಕುರಿತು ಮಾಹಿತಿ ನೀಡಲಾಯಿತು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಪ್ರೇಮ ಕುಮಾರಿ ಹಾಗೂ ಶಿಕ್ಷಕವೃಂದ, ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ದೀಪಿಕಾ ಜಿ. ಪ್ರಾಧ್ಯಾಪಕರಾದ ರವೀನಾ ಸಿ. ಪೂಜಾರಿ, ಸ್ಟಾಲಿನ್ ಡಿಸೋಜ, ಸ್ವಾತಿ ರಾವ್ ಉಪಸ್ಥಿತರಿದ್ದರು.

Exit mobile version