ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಂಗಳೂರು ಲಯನ್ಸ್ ಕ್ಲಬ್‌ನ 2020-21ನೇ ಸಾಲಿನ ನೂತನ ಅಧ್ಯಕ್ಷರಾಗಿ ಸರಕು ಸಾಗಣೆ ಗುತ್ತಿಗೆದಾರರಾದ ರಮೇಶ ಕೆ. ಕುಂದರ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ವಿಲ್ಫೈಡ್ ಮೆನೆಜಿಸ್ ಮತ್ತು ಖಜಾಂಜಿಯಾಗಿ ಕೆ.ರಮೆಶ್ ಶೆಟ್ಟಿ ಕಾರ್ಯನಿರ್ವಹಿಸಲಿದ್ದಾರೆ. ಪ್ರಥಮ ಉಪಾಧ್ಯಕ್ಷರಾಗಿ ಮ್ಯಾಥಿವ್ ಜೋಸೆಫ್, ದ್ವಿತೀಯ ಉಪಾಧ್ಯಕ್ಷರಾಗಿ ರಜತ್ ಹೆಗ್ಡೆ ಆಯ್ಕೆಯಾಗಿರುತ್ತಾರೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಉಡುಪಿ: ಏಕಗವಾಕ್ಷಿ ಯೋಜನೆಯಡಿ ರಾಜ್ಯ ಮಟ್ಟದ ಪುಸ್ತಕ ಆಯ್ಕೆಗಾಗಿ 2020ನೇ ಸಾಲಿನ ಜನವರಿ 1 ರಿಂದ ಜೂನ್ 30 ರವರೆಗೆ ಪ್ರಥಮ ಮುದ್ರಣವಾಗಿ ಪ್ರಕಟವಾದ ಸಾಹಿತ್ಯ, ಸ್ವರ್ಧಾತ್ಮಕ ಪಠ್ಯ, ಸಾಂದರ್ಭಿಕ, ಮಕ್ಕಳ ಸಾಹಿತ್ಯ, ವಿಚಾರ ಸಾಹಿತ್ಯ, ಸ್ಪರ್ಧಾತ್ಮಕ ಪರೀಕ್ಷೆ ಇತ್ಯಾದಿ ವಿಷಯಗಳ ಕನ್ನಡ, ಆಂಗ್ಲ ಮತ್ತು ಭಾರತೀಯ ಇತರ ಭಾಷೆಯ ಗ್ರಂಥಗಳ ಆಯ್ಕೆಗಾಗಿ ಲೇಖಕರು, ಲೇಖಕ-ಪ್ರಕಾಶಕರು ಮತ್ತು ಪ್ರಕಟಣಾ ಸಂಸ್ಥೆಗಳಿAದ ಪುಸ್ತಕಗಳನ್ನು ಆಹ್ವಾನಿಸಲಾಗಿದೆ. ಕೋವಿಡ್-19 ಹಿನ್ನೆಲೆ ಪುಸ್ತಕಗಳನ್ನು ಗ್ರಂಥಸ್ವಾಮ್ಯ ವಿಭಾಗ, ರಾಜ್ಯ ಕೇಂದ್ರ ಗ್ರಂಥಾಲಯ, ಕಬ್ಬನ್ ಉದ್ಯಾನವನ, ಬೆಂಗಳೂರು, ಇಲ್ಲಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿರುವ ಹಿನ್ನೆಲೆ ಬೆಂಗಳೂರಿನ ಹಂಪಿನಗರದ ನಗರ ಕೇಂದ್ರ ಗ್ರಂಥಾಲಯ, ಪಶ್ಚಿಮ ವಲಯ, ಇಲ್ಲಿ ಜುಲೈ 30 ರೊಳಗೆ ಪುಸ್ತಕಗಳನ್ನು ಕಾಪಿರೈಟ್ ಮಾಡಿಸುವುದು. ಕಾಪಿರೈಟ್ ಮಾಡಿಸಿದ ಪುಸ್ತಕದ ಒಂದು ಪ್ರತಿಯನ್ನು ಅರ್ಜಿಯೊಂದಿಗೆ ಜುಲೈ 31 ರೊಳಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆ, ವಿಶ್ವೇಶ್ವರಯ್ಯ ಮುಖ್ಯ ಗೋಪುರ, ಡಾ. ಅಂಬೇಡ್ಕರ್ ವೀಧಿ, 4ನೇ ಮಹಡಿ, ಬೆಂಗಳೂರು…
ಕುಂದಾಪ್ರ ಡಾಟ್ ಕಾಂ ಸುದ್ದಿ ಉಡುಪಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವಿವಿಧ ಸೇವೆಗಳಿಗಾಗಿ ಸೇವಾ ಸಿಂಧು ವೆಬ್ ಸೈಟ್‌ನಲ್ಲಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಸ್ವೀಕರಿಸಲಾಗುವುದು. ಯುವಕ/ಯುವತಿ/ಸಂಘ/ಕ್ಲಬ್ ಗಳ ನೊಂದಣಿಗಾಗಿ ಅರ್ಜಿ,ಪ್ರೋತ್ಸಾಹಿತ ಕ್ರೀಡಾ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ, ಏಕಲವ್ಯ ಪ್ರಶಸ್ತಿ, , ಜೀವಮಾನ ಸಾಧನೆ ಪ್ರಶಸ್ತಿ, ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಗಾಗಿ ಸೇವಾ ಸಿಂಧುವೆಬ್ ಸೈಟ್ https://sevasindhu.karnataka.gov.in ನಲ್ಲಿ ಅರ್ಜಿಗಳನ್ನು ಸಲ್ಲಿಸುವಂತೆ ಸೂಚಿಸಿದೆ. ಹೆಚ್ಚಿನ ಮಾಹಿತಿಗಾಗಿ ಡಾ. ರೋಶನ್‌ಕುಮಾರ್ ಶೆಟ್ಟಿ, ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ,ಉಡುಪಿ ಜಿಲ್ಲೆ (0820-2521324, 94808-86467) ಇವರನ್ನು ಸಂಪರ್ಕಿಸಲು ಕೋರಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಉಡುಪಿ: 2020-21 ನೇ ಸಾಲಿನ ಪರಿಶಿಷ್ಟ ವರ್ಗದ ಕಲ್ಯಾಣ ನಿರ್ದೇಶನಾಲಯದ ವತಿಯಿಂದ ಪರಿಶಿಷ್ಟ ವರ್ಗದ ಕಾನೂನು ಪದವೀಧರರಿಗೆ ಆಡಳಿತ ನ್ಯಾಯಾಧೀಕರಣದಲ್ಲಿ ಹೆಚ್ಚಿನ ತರಬೇತಿ ಪಡೆಯಲು 2 ವರ್ಷದ ತರಭೇತಿ ಅವಧಿಗೆ ಮಾಸಿಕ ರೂ.10000/- ಹಾಗೂ ಕಾನೂನು ವೃತ್ತಿಗೆ ಸಂಬAಧಿಸಿದ ಪುಸ್ತಕಗಳಿಗೆ ತರಬೇತಿ ಅವಧಿಯಲ್ಲಿ ರೂ 5,000/- ನೀಡುವ ಬಗ್ಗೆ ಪರಿಶಿಷ್ಟ ವರ್ಗದ ಕಾನೂನು ಪದವೀಧರರಿಂದ ಅರ್ಜಿ ಆಹ್ವಾನಿಸಲಾಗಿದೆ. ಆದಾಯ ಮಿತಿರೂ 2,00,000/-ದೊಳಗಿರಬೇಕು. ಅರ್ಜಿ ಪ್ರತಿಯನ್ನು ಯೋಜನಾ ಸಮನ್ವಯಾಧಿಕಾರಿ, ಸಮಗ್ರ ಗಿರಿಜನ ಅಭಿವೃದ್ದಿ ಯೋಜನೆ ಜಿಲ್ಲಾ ಸಂಕಿರ್ಣ ,ಬಿ ಬ್ಲಾಕ್ ,ಎರಡನೇ ಮಹಡಿ,ರಜತಾದ್ರಿ ,ಮಣಿಪಾಲ ಈ ಕಛೇರಿಯಿಂದ ಪಡೆದು ಜುಲೈ 31 ರೊಳಗೆ ಸಲ್ಲಿಸಲು ಸೂಚಿಸಿದೆ. ಹೆಚ್ಚಿನ ಮಾಹಿತಿಗಾಗಿ ಕಛೇರಿಯ ದೂರವಾಣಿ ಸಂಖ್ಯೆ 0820-2574814 ಸಂಪರ್ಕಿಸಬಹುದು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಜು.9ರ ಶುಕ್ರವಾರ 34 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಇಂದು 673 ನೆಗೆಟಿವ್: ಈ ತನಕ ಒಟ್ಟು 21,409 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 17,508 ನೆಗೆಟಿವ್, 1,477 ಪಾಸಿಟಿವ್ ಬಂದಿದ್ದು, 2,424 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು ಬಂದಿರುವ ವರದಿಯಲ್ಲಿ 673 ನೆಗೆಟಿವ್, 34 ಪಾಸಿಟಿವ್ ಬಂದಿದೆ. ಒಟ್ಟು 1261 ಮಂದಿ ಹೋಮ್ ಕ್ವಾರಂಟೈನಿನಲ್ಲಿದ್ದಾರೆ. 250 ಸಕ್ರಿಯ ಪ್ರಕರಣ: ಜಿಲ್ಲೆಯಲ್ಲಿ ಒಟ್ಟು 1,477 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 1,224 ಮಂದಿ ಬಿಡುಗಡೆಯಾಗಿದ್ದು, 250 ಮಂದಿ ಕೊರೋನಾ ಸೋಂಕಿತರಿಗೆ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಮೂವರು ವ್ಯಕ್ತಿಗಳು ಮೃತಪಟ್ಟಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಕರ್ನಾಟಕ ಸರಕಾರ, ಆಯುಷ್ ಇಲಾಖೆ ಬೆಂಗಳೂರು, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆಯುಷ್ ಇಲಾಖೆ ಉಡುಪಿ, ತಾಲೂಕು ಆಯುಷ್ ಘಟಕ ಕುಂದಾಪುರ, ಸರಕಾರಿ ಆಯುರ್ವೇದ ಚಿಕಿತ್ಸಾಲಯ ಕಾಲ್ತೋಡು ಮತ್ತು ಗೀತಾನಂದ ಫೌಂಡೇಶನ್ ಕೋಟ ಇವರ ಸಹಯೋಗದಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಗಳಿಗೆ ಆಯುಷ್ ಔಷಧಿ ವಿತರಣಾ ಕಾರ್ಯಕ್ರಮ ಗಂಗೊಳ್ಳಿಯ ಪೊಲೀಸ್ ಠಾಣೆಯಲ್ಲಿ ಗುರುವಾರ ಜರಗಿತು. ಕಾಲ್ತೋಡು ಸರಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ. ವೀಣಾ ಕಾರಂತ್ ಅವರು ಮನುಷ್ಯನ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಆಯುರ್ವೇದ ಔಷಧಿಗಳು ಸಹಕಾರಿಯಾಗುತ್ತದೆ. ಹಿಂದಿನಿಂದ ಪೂರ್ವಜರು ಬಳಸುತ್ತಿದ್ದ ಗಿಡಮೂಲಿಕೆ ಔಷಧಿಗಳು, ಆಯುರ್ವೇದ ಔಷಧಿಗಳನ್ನು ಸೇವಿಸುವುದರಿಂದ ಮನುಷ್ಯನಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಯಾಗಿ, ಕೋವಿಡ್-೧೯ ವೈರಸ್‌ನಿಂದ ರಕ್ಷಣೆ ಪಡೆಯಲು ಸಹಾಯವಾಗುತ್ತದೆ. ಕರೋನಾ ತಡೆಗಟ್ಟುವ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕೇಂದ್ರ ಆಯುಷ್ ಸಚಿವಾಲಯ ಅನುಮೋದಿತ ಆಯುಷ್ ಔಷಧಿಗಳನ್ನು ಕರೋನಾ ವೈರಸ್ ನಿರ್ಮೂಲನೆಯಲ್ಲಿ ಮುಂಚೂಣಿಯಲ್ಲಿರುವ ಪೊಲೀಸ್ ಸಿಬ್ಬಂದಿಗಳಿಗೆ ವಿತರಿಸಲಾಗುತ್ತಿದ್ದು, ಇದರ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕೋಟ: ಸಮೀಪದ ಮಣೂರಿನಲ್ಲಿ ಜ.26 ರಾತ್ರಿ ನಡೆದ ಯತೀಶ್ ಕಾಂಚನ್ ಹಾಗೂ ಭರತ್ ಎನ್ನುವವರ ಜೋಡಿ ಕೊಲೆ ಪ್ರಕರಣದ ನಾಲ್ವರು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ತಿರಸ್ಕರಿಸಿದ್ದಾರೆ. ಜೋಡಿ ಕೊಲೆ ಪ್ರಕರಣದ ಆರೋಪಿಗಳಾದ ಸುಜಯ್ , ಮಹೇಶ್ ಕುಮಾರ್, ರವಿಚಂದ್ರ, ಅಭಿಷೇಕ್ ಪಾಲನ್ ಎನ್ನುವರ ಜಾಮೀನು ತಿರಸ್ಕ್ರತಗೊಂಡಿದೆ. ಕೋಟ ಜೋಡಿ ಕೊಲೆ ಪ್ರಕರಣದಲ್ಲಿ ಇವರು ಪ್ರಮುಖ ಆರೋಪಿಗಳಾಗಿದ್ದಾರೆ. ಆರೋಪಿಗಳಿಂದ ಕೊಲೆಗೆ ಬಳಸಿದ ಮಾರಕಾಯುಧಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರತ್ಯಕ್ಷದರ್ಶಿಗಳು ಕೂಡ ಆರೋಪಿಗಳನ್ನು ಗುರುತು ಪತ್ತೆ ಪರೇಡಿನಲ್ಲಿ ಗುರುತಿಸಿದ್ದಾರೆ. ಆದ್ದರಿಂದ ಇವರಿಗೆ ಜಾಮೀನು ನೀಡಿದಲ್ಲಿ ಸಾಕ್ಷಿದಾರರಿಗೆ ಬೆದರಿಕೆ ಹಾಕಿ ಸಾಕ್ಷ್ಯ ನಾಶ ಮಾಡುವ ಸಂಭವವಿದೆ ಎಂಬ ವಾದ ಆಲಿಸಿದ ನ್ಯಾಯಾಧೀಶರು ನಾಲ್ವರು ಆರೋಪಿಗಳ ಜಾಮೀನು ಅರ್ಜಿ ತಿರಸ್ಕರಿಸಿ ಆದೇಶ ನೀಡಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಜು.9ರ ಗುರುವಾರ 22 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಇಂದು 466 ನೆಗೆಟಿವ್: ಈ ತನಕ ಒಟ್ಟು 20,711 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 16,835 ನೆಗೆಟಿವ್, 1,443 ಪಾಸಿಟಿವ್ ಬಂದಿದ್ದು, 2,433 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು ಬಂದಿರುವ ವರದಿಯಲ್ಲಿ 843 ನೆಗೆಟಿವ್, 22 ಪಾಸಿಟಿವ್ ಬಂದಿದೆ. ಒಟ್ಟು 1235 ಮಂದಿ ಹೋಮ್ ಕ್ವಾರಂಟೈನಿನಲ್ಲಿದ್ದಾರೆ. 223 ಸಕ್ರಿಯ ಪ್ರಕರಣ: ಜಿಲ್ಲೆಯಲ್ಲಿ ಒಟ್ಟು 1,443 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 1,217 ಮಂದಿ ಬಿಡುಗಡೆಯಾಗಿದ್ದು, 223 ಮಂದಿ ಕೊರೋನಾ ಸೋಂಕಿತರಿಗೆ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಮೂವರು ವ್ಯಕ್ತಿಗಳು ಮೃತಪಟ್ಟಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತೀವ್ರವಾಗಿ ಗಾಯಗೊಂಡಿದ್ದ ಕಡಲಾಮೆಯನ್ನು ಬುಧವಾರ ಕೋಡಿ ಕಿನಾರ ಬಳಿಯ ಕಡಲ ತಡಿಯಲ್ಲಿ ರಕ್ಷಿಸಲಾಗಿದೆ. ವಲಯ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ಅವರ ನೇತೃತ್ವದಲ್ಲಿ ಕ್ಲೀನ್ ಕುಂದಾಪುರ ಪ್ರಾಜೆಕ್ಟ್‌ನ ಭರತ್ ಬಂಗೇರ, ರೀಫ್ ವಾಚ್ ಇಂಡಿಯಾದ ಶಂತನು, ತೇಜಸ್ವಿನಿ, ಎಫ್.ಎಸ್.ಎಲ್ ಇಂಡಿಯಾದ ದಿನೇಶ್ ಸಾರಂಗ ಅವರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಉಪ್ಪುಂದ ಗ್ರಾಮದ ಬೇಬಿ ದೇವಾಡಿಗ ಅವರ ಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ಹಾಗೂ ಹಾಗೂ ಗೃಹ ಪ್ರವೇಶದ ದಿನ ಊಟೋಪಚಾರಕ್ಕೆ ದೇಣಿಗೆ ನೀಡಿದ ಉದ್ಯಮಿ ಗುರುರಾಜ ಪೂಜಾರಿ ಅವರಿಗೆ ಉಪ್ಪುಂದ ದೇವಾಡಿಗ ಸಂಘದಿಂದ ಗೌರವಿಸಲಾಯಿತು. ಈ ಸಂದರ್ಭ ಜಿಲ್ಲಾ ಪಂಚಾಯತ್ ಸದಸ್ಯರಾದ ಗೌರಿ ದೇವಾಡಿಗ, ತಾಲೂಕು ಪಂಚಾಯತ್ ಸದಸ್ಯರಾದ ಜಗದೀಶ್ ದೇವಾಡಿಗ ಹಾಗೂ ಪ್ರಮೀಳಾ ದೇವಾಡಿಗ, ಉಪ್ಪುಂದ ದೇವಾಡಿಗ ಸಂಘದ ಅದ್ಯಕ್ಷರಾದ ಮಾಧವ ದೇವಾಡಿಗ, ಕಾರ್ಯದರ್ಶಿ ನರಸಿಂಹ ದೇವಾಡಿಗ, ಉಪಾಧ್ಯಕ್ಷ ರಾಮಚಂದ್ರ ದೇವಾಡಿಗ, ದೇವಾಡಿಗ ಮಹೀಳಾ ಸಂಘದ ಅಧ್ಯಕ್ಷರಾದ ನಾಗಮ್ಮ ದೇವಾಡಿಗ ಹಾಗೂ ಸದಸ್ಯರು ಉಪಸ್ಥಿತರಿದ್ದರು
