ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನೈಸರ್ಗಿಕ ಉತ್ಪನ್ನ ಮತ್ತು ಉತ್ತಮ ಪೋಷಕಾಂಶಗಳನ್ನು ಒಳಗೊಂಡಿರುವ ಪೋಷಕ್ ಹಾಗೂ ರಿಲ್ಯಾಕ್ಸ್ ಟೀ ಮನೆ ಮನೆ ಮನೆಗಳನ್ನು ತಲುಪಲಿ ಎಂದು ಬೈಂದೂರು ಕ್ಷೇತ್ರದ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು. ಅವರು ಆಲೂರು-ಕಳಿಯ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದಲ್ಲಿ ಶುಕ್ರವಾರ “ಚಿತ್ರಕೂಟ ಪೋಷಕ್” ಉತ್ಪನ್ನವನ್ನು ಬಿಡುಗಡೆಗೊಳಿಸಿ ಮಾತನಾಡಿ ಕೊರೋನಾ ಬಳಿಕ ಆಯುರ್ವೇದ ಉತ್ಪನ್ನಗಳಿಗೆ ಮಹತ್ವ ಜನರಿಗೆ ಅರಿವಾಗಿದೆ. ಚಿತ್ರಕೂಟವೂ ಉತ್ತಮ ಚಿಕಿತ್ಸೆಗೆ ಹೆಸರಾಗಿದೆ. ಉತ್ತಮ ಮಾರುಕಟ್ಟೆ ಸೌಲಭ್ಯವನ್ನು ಬಳಸಿಕೊಂಡರೆ ಬಹುಬೇಗ ಎಲ್ಲೆಡೆಯೂ ತಲುಪಲು ಸಾಧ್ಯವಿದೆ ಎಂದರು. ರಿಲ್ಯಾಕ್ಸ್ ಟೀ ಉತ್ಪನ್ನ ಬಿಡುಗಡೆಗೊಳಿಸಿದ ಎಂ.ಎಸ್. ಮಂಜ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರಾದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಅವರು ಮಾತನಾಡಿ ಇಂದು ಮಾರುಕಟ್ಟೆಯಲ್ಲಿ ದೊರೆಯುವ ಬಹುಪಾಲು ವಸ್ತುಗಳು ಕಲಬೆರಕೆಯಿಂದ ಕೂಡಿದೆ. ಅವುಗಳು ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತಿದೆ. ಇದರ ನಡುವೆ ಉದ್ಯಮ ಮುನ್ನಡೆಸುವುದರ ಜೊತೆಗೆ ಜನರಿಗೆ ಉತ್ತಮ ಆರೋಗ್ಯ ದೊರೆಯುವಂತಾಗಬೇಕು ಎಂಬ ಸದುದ್ದೇಶದೊಂದಿಗೆ ಚಿತ್ರಕೂಟ ಸಂಸ್ಥೆಯು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಡಾ. ಶಿವರಾಮ ಕಾರಂತ ಪ್ರತಿಷ್ಠಾನ ರಿ.ಕೋಟ, ಡಾ. ಕಾರಂತ ಟ್ರಸ್ಟ್ ರಿ. ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ಆಶ್ರಯದಲ್ಲಿ ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ನಡೆಯುವ ಉಡುಪಿ ಜಿಲ್ಲಾ ಮಹಿಳಾ ಸಾಹಿತ್ಯ-ಸಂಸ್ಕೃತಿ ಸಮ್ಮೇಳನಾಧ್ಯಕ್ಷೆಯಾಗಿ ಶಿಕ್ಷಕಿ-ಸಾಹಿತಿ ಸುಮಿತ್ರಾ ಡಿ. ಐತಾಳ್ ಅವರನ್ನು ಆಯ್ಕೆ ಮಾಡಲಾಗಿದೆ. ಸುಮಿತ್ರಾ ಡಿ ಐತಾಳ್ ಅವರು ಬಿ.ಇಡ್, ಎಂ.ಎ ವ್ಯಾಸಂಗ ಪೂರೈಸಿ, ಸಾಹಿತ್ಯಿಕ ಸಾಂಸ್ಕೃತಿಕ ಚಟುವಟಿಕೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಕವನ ಸಂಕಲನ ಭಾವಗಾನ, ಅಂತರಗಂಗೆ, ಗಡಿಯಾರ, ಹಣತೆ, ಮೌನರತಿ ರಚಿಸಿದ್ದು, ಕಥಾಸಂಕಲನದಲ್ಲಿ ಫಲಿತಾಂಶ ರಚಿಸಿದ್ದಾರೆ.ಅಲ್ಲದೇ ಸುದ್ದಿಮನೆ, ವಿಜಯಕರ್ನಾಟಕ, ಕುಂದಾಪುರ ಮಿತ್ರ, ಕುಂದಪ್ರಭಾ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡಿದೆ. ’ಬಾ ಗೆಳತಿ’ ಮಹಿಳಾ ಸ್ಪಂದನ ಕಾರ್ಯಕ್ರಮ ಸ್ಪಂದನ ದೂರದರ್ಶನದಲ್ಲಿ ಸಾಹಿತ್ಯದ ನುಡಿಯಲ್ಲಿ ಕೂಡಾ ಭಾಗವಹಿಸಿರುತ್ತಾರೆ. ಎಪ್ರಿ 25 ರಂದು ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ಕಾರ್ಯಕ್ರಮ ಬೆಳಿಗ್ಗೆ10ರಿಂದ ಸಂಜೆ 4ಗಂಟೆ ತನಕ ಕಾರ್ಯಕ್ರಮ ನಡೆಯಲಿದ್ದು ಬಹುವಿಧಗೋಷ್ಠಿ, ಸಂವಾದ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಗುಜ್ಜಾಡಿ ಗ್ರಾಮದ ಬೆಣ್ಗೆರೆ ಶ್ರೀ ನಾಗ ದೇವಸ್ಥಾನದಲ್ಲಿ 46ನೇ ನಾಗಮಂಡಲೋತ್ಸವ ಹಾಗೂ ಅಷ್ಟಬಂಧ ಪ್ರತಿಷ್ಢಾಪನಾ ವರ್ಧಂತ್ಯುತ್ಸವ ವಿಜೃಂಭಣೆಯಿಂದ ನಡೆಯಿತು. ಎ.12ರಂದು ಸಾಮೂಹಿಕ ಪ್ರಾರ್ಥನೆಯೊಂದಿಗೆ ಧಾರ್ಮಿಕ ಅನುಷ್ಠಾನಗಳು ಆರಂಭಗೊಂಡು ವಿವಿಧ ಧಾರ್ಮಿಕ ಅನುಷ್ಠಾನಗಳು ಶಾಸ್ತ್ರೋಕ್ತವಾಗಿ ಜರಗಿತು. ಬೆಳಿಗ್ಗೆ ಸಂಹಿತಾ ಕಲಶ ಸ್ಥಾಪನೆ, ಪಾರಾಯಣ, ಅಧಿವಾಸ ಹೋಮ, ಕಲಶಾಭಿಷೇಕ, ಮಹಾಮಂಗಳಾರತಿ, ದರ್ಶನ, ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ನಾಗದರ್ಶನ ಬಳಿಕ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ನಡೆಯಿತು. ಸಂಜೆ 5ಗಂಟೆಗೆ ರಂಗಪೂಜೆ, ಹಾಲಿಟ್ಟು ಸೇವೆ, ವೈ.ವಾಸುದೇವ ವೈದ್ಯ ಮತ್ತು ಬಳಗದವರಿಂದ ಮಂಡಲ ಸೇವೆ ಜರಗಿತು. ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಜಿಪಂ ಸದಸ್ಯೆ ಶೋಭಾ ಜಿ.ಪುತ್ರನ್, ದೇವಸ್ಥಾನದ ಅಧ್ಯಕ್ಷ ಉಮೇಶ ಮೇಸ್ತ, ಕಾರ್ಯದರ್ಶಿ ಶ್ರೀಧರ ಪಿ.ಮೇಸ್ತ, ಯುತ್ ಕ್ಲಬ್ ಪ್ರವೀಣ್ ಮೇಸ್ತ, ಕಾರ್ಯದರ್ಶಿ ಶ್ರೀನಾಥ ಮೇಸ್ತ, ಮಹಿಳಾ ಮಂಡಳಿ ಅಧ್ಯಕ್ಷೆ ರಾಧಾ ರಾಮಕೃಷ್ಣ ಮೇಸ್ತ, ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಹರೀಶ ಮೇಸ್ತ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬ್ರಹ್ಮಲಿಂಗೇಶ್ವರ ಸ್ಪೋರ್ಟ್ಸ್ ಕ್ಲಬ್ ಮಾರಣಕಟ್ಟೆ ಚಿತ್ತೂರು ಹಾಗೂ ಉಡುಪಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಇವರ ಜಂಟಿ ಆಶ್ರಯದಲ್ಲಿ ಪ್ರಥಮ ಬಾರಿಗೆ ಮುಕ್ತ ಹಗ್ಗ ಜಗ್ಗಾಟ ಮತ್ತು ಕಬಡ್ಡಿ ಪಂದ್ಯಾಟ ಚಿತ್ತೂರು ಶಾಲಾ ಮೈದಾನದಲ್ಲಿ ನಡೆಯಿತು. ಪಂದ್ಯಾಟವನ್ನು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ.ಎಂ.ಸುಕುಮಾರ ಶೆಟ್ಟಿ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಬಾಬು ಶೆಟ್ಟಿ, ತಾಲ್ಲೂಕು ಪಂಚಾಯತ್ ಸದಸ್ಯರಾದ ಉದಯ. ಜಿ.ಪೂಜಾರಿ, ಚಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಂತಿ ಪೂಜಾರಿ, ಉಪಾಧ್ಯಕ್ಷರಾದ ದಿವಾಕರ ಆಚಾರ್ಯ, ಸದಸ್ಯರಾದ ರವೀಂದ್ರ ಶೆಟ್ಟಿ, ವರಸಿದ್ದಿ ವಿನಾಯಕ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಚಂದ್ರಶೇಖರ ಶೆಟ್ಟಿ ಕೆರಾಡಿ, ಕೊಲ್ಲೂರು ದೇವಳದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಡಾ. ಅತುಲ್ ಕುಮಾರ್ ಶೆಟ್ಟಿ, ಕೊಲ್ಲೂರು ದೇವಳದ ಮಾಜಿ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ವಂಡಬಳ್ಳಿ ಜಯರಾಮ ಶೆಟ್ಟಿ, ಅಮೆಚೂರ್ ಕಬಡ್ಡಿ ಕುಂದಾಪುರ ತಾಲೂಕು ಗೌರವಾಧ್ಯಕ್ಷರಾದ ರವಿಕಿರಣ್ ಮುರುಡೇಶ್ವರ, ಎಂ.ಎಸ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಡಾ. ವಿ ಎಸ್ ಆಚಾರ್ಯ ಸಭಾಂಗಣದಲ್ಲಿ ಪದವಿ ಪೂರ್ವ ಕಾಲೇಜಿನ ಇಂಟರ್ನಲ್ ಕಂಪ್ಲೆಂಟ್ಸ್ ಕಮಿಟಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಉದ್ಘಾಟಕರಾಗಿ ಭಾಗವಹಿಸಿದ ಪದವಿ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥೆ ಡಾ. ಮಧುಮಾಲ ಹದಿಹರೆಯದ ನಿಭಾವಣೆ ಕುರಿತು ಮಾತನಾಡಿ, ಜೀವನದ ವಿವಿಧ ಹಂತಗಳಲ್ಲಿ, ಅದರಲ್ಲೂ ಹದಿಹರೆಯದ ವಯಸ್ಸಿನಲ್ಲಿ- ಮಾನಸಿಕ ಬದಲಾವಣೆ, ದೈಹಿಕ ಬದಲಾವಣೆ, ಸಾಮಾಜಿಕ ಬದಲಾವಣೆಯೊಂದಿಗೆ ಸಾಧನೆಗೆ ಪೂರಕವಾದ ಸಮಯವಾಗಿರುತ್ತದೆ. ಶೈಕ್ಷಣಿಕ ಒತ್ತಡಗಳು ಉಂಟಾದಾಗ ಪರಿಸ್ಥಿತಿಯೊಂದಿಗೆ ಹೊಂದಿಕೊಳ್ಳುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಹದಿಹರೆಯದ ವಯಸ್ಸಿನಲ್ಲಿ ದೈಹಿಕ ಬದಲಾವಣೆ ಸರ್ವೆಸಾಮಾನ್ಯವಾಗಿದ್ದು, ಅಂತಹ ಸಂದರ್ಭದಲ್ಲಿ ನಮ್ಮ ದೇಹವನ್ನು ನಾವು ಗೌರವಿಸಿ, ಸ್ವಚ್ಛತೆಯನ್ನು ಕಾಪಾಡುವುದರಿಂದ ನಮ್ಮನ್ನು ಇತರರು ಗೌರವಿಸಲು ಸಾಧ್ಯ ಎಂದರು. ಈ ವಯಸ್ಸಿನಲ್ಲಿ ಪೌಷ್ಠಿಕಾಂಶಯುಕ್ತ ಆಹಾರ, ಸರಿಯಾದ ನಿದ್ರೆ, ಉತ್ತಮ ಭಾಂದವ್ಯ, ಆತ್ಮವಿಶ್ವಾಸ ಅಗತ್ಯವಾಗಿರುತ್ತದೆ ಎಂದು ವಿದ್ಯಾರ್ಥಿನಿಯರಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ರಮೇಶ್ ಶೆಟ್ಟಿ ಉಪಸ್ಥಿತರಿದ್ದರು. ಕಾಲೇಜಿನ ಇಂಟರ್ನಲ್ ಕಂಪ್ಲೆಂಟ್ಸ್ ಕಮಿಟಿಯ ಸಂಯೋಜಕಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ತಾಲೂಕು ಪಂಚಾಯತ್ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಗುರುವಾರ ಬೈಂದೂರು ತಾಲೂಕು ಪಂಚಾಯಿತ್ನ ಪ್ರಸ್ತುತ ಅವಧಿಯ ಕೊನೆಯ ಸಾಮಾನ್ಯ ಸಭೆ ಜರುಗಿತು. ಬೈಂದೂರು ತಾ. ಪಂ. ಅಧ್ಯಕ್ಷ ಮಹೇಂದ್ರ ಪೂಜಾರಿ ಮಾತನಾಡಿ ಬೈಂದೂರು ತಾಪಂ ಅಧ್ಯಕ್ಷ ಸ್ಥಾನ ಅಲಂಕರಿಸುವ ಮುನ್ನಾ ಮಾದರಿ ತಾಲೂಕು ಪಂಚಾಯಿತಿಯಾಗಿ ರೂಪಿಸುವ ಗುರಿಯಿಟ್ಟುಕೊಂಡಿದ್ದು, ಅಧಿಕಾರ ಅವಧಿ ಮುಗಿಯುತ್ತಿದ್ದು, ಸಂಪೂರ್ಣ ಮಾದರಿ ತಾಪಂ ಆಗಿ ಮಾಡಲಾಗಿಲ್ಲ. ನಮ್ಮ ಮೇಲಿನ ಜನಪ್ರತಿನಿಧಿಗಳ ಸಹಕಾರ ಸಿಕ್ಕಿದ್ದರೆ ಪೂರ್ಣ ಪ್ರಮಾಣದಲ್ಲಿ ತಾಲೂಕು ಅಭಿವೃದ್ಧಿ ಸಾಧ್ಯವಾಗುತ್ತಿತ್ತು. ಆದರೂ ಒಂದಿಷ್ಟು ಕೆಲಸ ಮಾಡಿದ ಆತ್ಮತೃಪ್ತಿ ಇದೆ. ತಾಪಂ ಸದಸ್ಯರು ಪಕ್ಷಭೇದವಿಲ್ಲದೆ ಅಭಿವೃದ್ಧಿ ವಿಷಯದಲ್ಲಿ ನೀಡಿದ ಸಹಕಾರ ಅಧಿಕಾರಿಗಳ ಬದ್ದತೆ ಅಷ್ಟೂಇಷ್ಟೂ ಕೆಲಸ ಮಾಡಿದ ತೃಪ್ತಿ ತಂದಿದೆ. ಸಹಕರಿಸಿದ ಅಧಿಕಾರಿ ವರ್ಗ ಹಾಗೂ ತಾಪಂ ಸದಸ್ಯರಿಗೆ ಆಭಾರಿಯಾಗಿದ್ದೇನೆ ಎಂದರು. ತಾಪಂ ಸದಸ್ಯ ಪ್ರಮೀಳಾ ದೇವಾಡಿಗ ಮಾತನಾಡಿ ಪಡುವರಿ ಅಂಗನಾಡಿ ಖಾಸಗಿ ಜಾಗದಲ್ಲಿದ್ದು, ಸರ್ಕಾರಿ ಜಾಗ ಗುರುತಿಸಿ ಕೊಡುವಂತೆ ಸಭೆಯಲ್ಲಿ ಒತ್ತಾಯಿಸುತ್ತಾ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಯುವಕ ಮಂಡಲಗಳ ನಿರಂತರ ಚಟುವಟಿಕೆ ನಡೆಸುತ್ತಾ ಸಮಾಜದ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಸಮಾಜದ ಕಟ್ಟಕಡೆಯ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು. ಗಂಗೊಳ್ಳಿಯ ಡಾ. ಬಿ. ಆರ್. ಯುವಕ ಮಂಡಲ, ಅಮೃತ ಯುವತಿ ಮಂಡಲ ಮತ್ತು ಅರ್ಚನಾ ಮಹಿಳಾ ಮಂಡಲಗಳು ಈ ನಿಟ್ಟಿನಲ್ಲಿ ಪರಿಸರದಲ್ಲಿ ಉತ್ತಮ ಕಾರ್ಯಚಟುವಟಿಕೆ ನಡೆಸುತ್ತಿರುವುದು ಶ್ಲಾಘನೀಯ. ಡಾ.ಅಂಬೇಡ್ಕರ್ ಅವರ ಆದರ್ಶ, ಧ್ಯೇಯೋದ್ದೇಶಗಳನ್ನು ಅಳವಡಿಸಿಕೊಂಡು ಸಮಾಜಮುಖಿಯಾಗಿ ಕಾರ್ಯನಿರ್ವಹಿಸುವಂತಾಗಲಿ ಎಂದು ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ ಹೇಳಿದರು. ಗಂಗೊಳ್ಳಿ ಮೇಲ್ಗಂಗೊಳ್ಳಿಯ ಪೋರ್ಟ್ ಬಂಗ್ಲೆ ಮೈದಾನದಲ್ಲಿ ಬುಧವಾರ ಜರಗಿದ ಮೇಲ್ಗಂಗೊಳ್ಳಿಯ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಮಂಡಲದ ೩೪ನೇ ವಾರ್ಷಿಕೋತ್ಸವ, ಅಮೃತ ಯುವತಿ ಮಂಡಲ ಮತ್ತು ಅರ್ಚನಾ ಮಹಿಳಾ ಮಂಡಲದ ೨೮ನೇ ವಾರ್ಷಿಕೋತ್ಸವ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ರವರ ೧೩೦ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗಂಗೊಳ್ಳಿ ಟಔನ್ ಸೌಹಾರ್ದ ಸಹಕಾರಿಯ ನಿರ್ದೇಶಕ ಬಿ.ರಾಘವೇಂದ್ರ ಪೈ ಶುಭಾಶಂಸನೆಗೈದರು. ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತ ದೈಹಿಕ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಆಲೂರು ಕಳಿಯ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯ ‘ಚಿತ್ರಕೂಟ ಹೊಸ ಉತ್ಪನ್ನವಾದ ‘ಪೋಷಕ್’ ಮತ್ತು ‘ರಿಲಾಕ್ಸ್ ಟೀ’ ಎ.16ರಂದು ಮಾರುಕಟ್ಟೆಗೆ ಬಿಡುಗಡೆಗೊಳ್ಳಲಿದೆ. ಬೈಂದೂರು ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿ ಹಾಗೂ ಮಾರಣಕಟ್ಟೆ ಸುಬ್ರಹ್ಮಣ್ಯ ಮಂಜ ಚಾರಿಟೇಬಲ್ ಟ್ರಸ್ಟ್ (ರಿ.) ಇದರ ಅಧ್ಯಕ್ಷ ಎಂ. ಕೃಷ್ಣಮೂರ್ತಿ ಮಂಜ ಅವರು ಬಿಡುಗಡೆ ಮಾಡಲಿದ್ದಾರೆ ಎಂದು ಚಿತ್ರಕೂಟದ ಡಾ. ರಾಜೇಶ್ ಬಾಯರಿ ಹಾಗೂ ಅನುಲೇಖಾ ರಾಜೇಶ್ ಬಾಯರಿ ತಿಳಿಸಿದ್ದಾರೆ. ಚಿತ್ರಕೂಟ ಪೋಷಕ್: ನೈಸರ್ಗಿಕ ಸಿರಿಧಾನ್ಯಗಳು, ಬಹುಧಾನ್ಯಗಳು ಹಾಗೂ ಗಿಡಮೂಲಿಕೆಗಳನ್ನು ಸೇರಿಸಿ ತಾಯಾರಿಸಿದ ಉತ್ಪನ್ನವೇ ‘ಚಿತ್ರಕೂಟ ಪೋಷಕ್. 3ವರ್ಷ ಮೇಲ್ಪಟ್ಟ ಎಲ್ಲಾ ವಯಸ್ಸಿನವರನ್ನು ಗಮನದಲ್ಲಿರಿಸಿಕೊಂಡು ಈ (ಆಹಾರ) ಉತ್ಪನ್ನವನ್ನು ತಯಾರಿಸಲಾಗಿದೆ. ಗಿಡಮೂಲಿಕೆ ಹಾಗೂ ನಾನಾ ರೀತಿಯ ಧಾನ್ಯಗಳನ್ನು ಬಳಸಿ ತಯಾರಿಸಿದ್ದರಿಂದ ಜನರ ಆರೋಗ್ಯ ಮತ್ತು ರೋಗ ನಿರೋಧಕ ಶಕ್ತಿಗೆ ಪರಿಣಾಮಕಾರಿಯಾಗಿದೆ. ಇದು ದೇಹದ ಮಾಸ್ ಇಂಡೆಕ್ಸ್ನ್ನು ಕಾಪಾಡಲಿದೆ. ಅಕಾಲಿಕ ಮುಪ್ಪಿನ ನಿಯಂತ್ರಣಕ್ಕೆ, ದೇಹದ ಅಂಗಾಂಶಗಳ ಪುನಶ್ಚೇತನಕ್ಕೆ, ಥೈರಾಯ್ಡ್ ಸಮಸ್ಯೆಗಳ ನಿವಾರಣೆಗೆ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಶುಭದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ರವರ 130ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶುಭದಾ ಎಜುಕೇಶನಲ್ ಟ್ರಸ್ಟ್ ರಿ. ನಾವುಂದ ಇದರ ಸದಸ್ಯರಾದ ಆರ್. ಕೆ ಬಿಲ್ಲವ, ನಾವೆಲ್ಲರೂ ಅಂಬೇಡ್ಕರ್ರವರ ಆದರ್ಶವನ್ನು ಪಾಲಿಸಿ ಸಂವಿಧಾನಕ್ಕೆ ಗೌರವ ನೀಡಬೇಕು ಎಂದರು. ಮುಖ್ಯ ಶಿಕ್ಷಕ ರವಿದಾಸ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು .ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಗೌರವ ಸಲ್ಲಿಸಿದರು. ಶಿಕ್ಷಕ ರಾಘವೇಂದ್ರ ಬಿಲ್ಲವ ಎಲ್ಲರನ್ನೂ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ, ಹತ್ತು ವರ್ಷಗಳಿಂದ ಕುಂಟುತ್ತಾ ಸಾಗಿ ಬಂದು ಇನ್ನೇನು ಮುಗಿಯುವ ಹಂತದಲ್ಲಿದ್ದು, ಹೆದ್ದಾರಿ ಹೋರಾಟ ಸಮಿತಿ ಮತ್ತು ಸಾರ್ವಜನಿಕರ ಒತ್ತಡಕ್ಕೆ ಮಣಿದು ಮೇಲ್ಸೇತುವೆ ಮತ್ತು ಬಸ್ರೂರು ಮೂರುಕೈ ಎಂಬ್ಯಾಕ್ಮೆಂಟ್ ಕಾಮಗಾರಿಯನ್ನು ತರಾತುರಿಯಲ್ಲಿ ಮುಗಿಸುವ ಲಕ್ಷಣ ಗೋಚರಿಸುತ್ತಿದೆ. ಉಳಿದಂತೆ, ಅಸಮರ್ಪಕ ಸರ್ವಿಸ್ ರಸ್ತೆಗಳು, ಹೆದ್ದಾರಿ ಮತ್ತು ಸರ್ವಿಸ್ ರಸ್ತೆಯಲ್ಲಿ ಅಲ್ಲಲ್ಲಿ ನೀರು ನಿಲ್ಲುವುದು, ಚರಂಡಿಯಲ್ಲಿ ನೀರು ಹರಿಯದೆ ಕೃತಕ ಕೆರೆಯಾಗುವುದು ಹೀಗೆ ಹತ್ತಾರು ತೊಂದರೆಗಳನ್ನು ಸಾರ್ವಜನಿಕರಿಗೆ ಕೊಡುಗೆಯಾಗಿ ನೀಡುತ್ತಾ ಬಂದಿರುವ ನವಯುಗ ಕಂಪೆನಿ ಇಲ್ಲಿಂದ ಕಾಲ್ಕೀಳುವ ಹುನ್ನಾರ ನಡೆಸುತ್ತಿದೆ ಇದರ ಬಗ್ಗೆ ಸಾರ್ವಜನಿಕರು ತಕ್ಷಣವೇ ಜಾಗೃತರಾಗಬೇಕಾಗಿದೆ. ಎಪ್ರಿಲ್ 17ರಂದು ಸಂಜೆ 4.00ಕ್ಕೆ ಕುಂದಾಪುರ ಶಾಸ್ತ್ರೀ ಸರ್ಕಲ್ ಬಳಿ ಇರುವ ಆರ್. ಎನ್. ಶೆಟ್ಟಿ ಕಲ್ಯಾಣ ಭವನದಲ್ಲಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಜಾಗೃತಿ ಸಮಿತಿಯವರು ಈ ಕುರಿತು ಸಾರ್ವಜನಿಕರೊಂದಿಗೆ ಚರ್ಚಿಸಲು ಸಭೆ ಕರೆದಿದ್ದು, ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯವನ್ನು ತಿಳಿಸಬೇಕು…
