Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕಲಾಜೀವಿಯ ಕನಸನ್ನು ಕಲಾಭಿಮಾನಿಗಳಾದ ನಾವು ನನಸು ಮಾಡೋಣ: ನಾಡೋಜ ಜಿ. ಶಂಕರ್
    ಊರ್ಮನೆ ಸಮಾಚಾರ

    ಕಲಾಜೀವಿಯ ಕನಸನ್ನು ಕಲಾಭಿಮಾನಿಗಳಾದ ನಾವು ನನಸು ಮಾಡೋಣ: ನಾಡೋಜ ಜಿ. ಶಂಕರ್

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕೋಟ:
    ಕಲಾ ತಂಡಗಳು ಅನೇಕ ಸದುದ್ಧೇಶದಿಂದ ಜೀವ ತಳೆಯುತ್ತದೆ. ಆರ್ಥಿಕ ಭದ್ರತೆ ಸಿಗದ ಕಾರಣಕ್ಕಾಗಿಯೋ, ಕಲಾ ಪೋಷಕರ ಸಹಕಾರ ದೊರೆಯದ ಕಾರಣಕ್ಕಾಗಿಯೋ, ತಂಡದ ಸದಸ್ಯರ ವೈಮನಸ್ಸಿನ ಕಾರಣದಿಂದಲೋ, ಮುಖ್ಯಸ್ಥನ ದೌರ್ಬಲ್ಯದಿಂದಲೋ ಸುಭದ್ರವಾಗಿ ಸಮಾಜದಲ್ಲಿ ನಿಲ್ಲದೇ ಅಳಿಯುತ್ತದೆ. ಆದರೆ ಕಲಾಜೀವಿ ಕುಟುಂಬದ ಉತ್ಸಾಹಗಳು ನಿರಂತರವಾಗಿ 50 ಕಲಾವಿದರ ಸಂದರ್ಶನದಿಂದ ಅವಿರತವಾಗಿ ಶ್ರಮಿಸಿ ಇದೀಗ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ನಾಡೋಜ ಜಿ. ಶಂಕರ್‌ ಹೇಳಿದರು.

    Click Here

    Call us

    Click Here

    ಅವರು ತೆಕ್ಕಟ್ಟೆ ಹಯಗ್ರೀವದಲ್ಲಿ’ಕಲಾಜೀವಿ ನಾದನೈದಿಲೆʼಕೋಟೇಶ್ವರ ದಿ. ರವಿರಾಜ ಕೋಟೇಶ್ವರ ಅವರ ಸವಿ ನೆನಪಿನಲ್ಲಿ 50ರ ಐಸಿರಿ ಒಡ್ಡೋಲಗ ಸರಣಿ ಕಾರ್ಯಕ್ರಮಗಳ 50ರ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನ್ನಾಡಿದರು. ಸಾವಿರ ಸಾವಿರ ಕನಸನ್ನು ಬಹಳ ಹಿಂದೆಯೇ ಹೊತ್ತು, ಸಾಧಿಸಿ ಇದೀಗ ಸಮಾಜಮುಖಿಯಾಗಿ ಸಂಭ್ರಮಿಸುತ್ತಿರುವುದನ್ನು ಕಂಡಾಗ ಕಲಾಜೀವಿ ಜೀವಂತವಾಗಿಯೇ ಮುಂದುವರಿಯುತ್ತದೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ. ಜೊತೆಗೆ ಕಲಾ ಜೀವಿಯ ಕನಸನ್ನು ಕಲಾಭಿಮಾನಿಗಳಾದ ನಾವು ನನಸು ಮಾಡುತ್ತಿರೋಣ ಎಂದರು.

    ಯಕ್ಷಗಾನದ ಬಡಗು ತಿಟ್ಟಿನ ಕಲಾವಿದರು ಬಡಗಿನ ಶೈಲಿಯಲ್ಲಿಯೇ ಸಾಧಿಸಿ ಬೆಳೆಯಬೇಕು. ಕಲಾವಿದನು ಕಾಣಿಸಿಕೊಳ್ಳುವ ಭರದಲ್ಲಿ ರಂಗವನ್ನು ವ್ಯತಿರಿಕ್ತವಾಗಿ ಬಳಸಿಕೊಳ್ಳಬಾರದು. ಕಲಾಜೀವಿ ನಾದನೈದಿಲೆ ಸಂಸ್ಥೆಯು ಈ ನಿಟ್ಟಿನಲ್ಲಿ ಪ್ರೋತ್ಸಾಹಿಸಿ ಮುಂದುವರಿಯುವ ಕಾಳಜಿಯನ್ನು ಹೊಂದುವಂತಾಗಾಲಿ ಎಂದು ಡಾ. ಆದರ್ಶ ಹೆಬ್ಬಾರ್ ಮಾತನ್ನಾಡಿದರು.

    ಸಂದರ್ಶಿಸಿದ 50 ಕಲಾವಿದರನ್ನು ರಂಗದಲ್ಲಿ ಗೌರವಿಸಲಾಯಿತು.  ಯಶಸ್ವಿ ಕಲಾವೃಂದ  ಕೊಮೆ ತೆಕ್ಕಟ್ಟೆ ಸಹಕಾರದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಕೆ. ಆರ್ ನಾಯ್ಕ್, ಡಾ. ಹೇಮಂತ್ ಕುಮಾರ್, ಅಶೋಕ್ ಶೆಟ್ಟಿ ಹಂದಕುಂದ, ಸೀತಾರಾಮ ಶೆಟ್ಟಿ ಮಲ್ಯಾಡಿ, ಸಕ್ಕಟ್ಟು ಮಂಜುನಾಥಯ್ಯ, ಎಚ್. ಎಸ್. ಬಸವರಾಜ್, ರಾಜೇಶ್ ಕೋಡಿ ಹಾಗೂ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.

    ಮಂಜುನಾಥ ಹಿಲಿಯಾಣ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಸಂದರ್ಶಿತ ಕಲಾವಿದರಿಂದ ’ಯಕ್ಷಗಾನವೈಭವ’ಮತ್ತು ಯಕ್ಷಗಾನ ’ವೀರಮಣಿ ಕಾಳಗ’ ರಂಗ ಪ್ರಸ್ತುತಿಗೊಂಡಿತು.

    Click here

    Click here

    Click here

    Call us

    Call us

    Kota
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಗಳ ವಿವಿಧ ಕ್ಲಬ್‌ಗಳ ಉದ್ಘಾಟನೆ

    05/08/2026

    ಮಣೂರು ಪಡುಕರೆ: ಇಂಟರ‍್ಯಾಕ್ಟ್ ಕ್ಲಬ್ ಪದಗ್ರಹಣ ಸಮಾರಂಭ

    05/08/2026

    ಅಂತಿಮ ಹಂತ ತಲುಪಿದ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ- ಸಂಸದ ಬಿ.ವೈ.ಆರ್‌ ಅವರ ನಿರಂತರ ಪರಿಶ್ರಮದ ಪ್ರತಿಫಲ

    05/08/2026
    Leave A Reply Cancel Reply

    19 − 9 =

    Call us

    Click Here

    Call us

    Call us

    Call us
    Highest Viewed Recently
    • ಕಲಾಜೀವಿಯ ಕನಸನ್ನು ಕಲಾಭಿಮಾನಿಗಳಾದ ನಾವು ನನಸು ಮಾಡೋಣ: ನಾಡೋಜ ಜಿ. ಶಂಕರ್
    • ಡಾ. ಬಿ.ಬಿ. ಹೆಗ್ಡೆ ಕಾಲೇಜು: ಇಂಗ್ಲೀಷ್ ವಿಭಾಗದಿಂದ ವಿಸ್ತರಣಾ ಚಟುವಟಿಕೆ
    • ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಗಳ ವಿವಿಧ ಕ್ಲಬ್‌ಗಳ ಉದ್ಘಾಟನೆ
    • ಮಣೂರು ಪಡುಕರೆ: ಇಂಟರ‍್ಯಾಕ್ಟ್ ಕ್ಲಬ್ ಪದಗ್ರಹಣ ಸಮಾರಂಭ
    • ಅಂತಿಮ ಹಂತ ತಲುಪಿದ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ- ಸಂಸದ ಬಿ.ವೈ.ಆರ್‌ ಅವರ ನಿರಂತರ ಪರಿಶ್ರಮದ ಪ್ರತಿಫಲ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.